‘ಅಮೃತಧಾರೆ’; ಮಿಂಚು ಕೂಡ ಗೌತಮ್ ಮಗಳು ಅನ್ನೋದು ಗೊತ್ತಾಗಿ ಹೋಯ್ತು

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಕೊನೆಗೂ ಒಂದಾಗಿದ್ದು, ಮಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಮಿಂಚು ಗೌತಮ್ ಮಗಳೆಂದು ಬಹಿರಂಗವಾಗಿದೆ. ಮಲ್ಲಿಗೆ ಹೊಸ ಪ್ರೇಮಪ್ರಕರಣ ಮತ್ತು ಶಕುಂತಲಾ ತಂತ್ರಗಳು ಕಥೆಗೆ ಮತ್ತಷ್ಟು ರೋಚಕ ತಿರುವುಗಳನ್ನು ನೀಡಲಿವೆ. ಈ ಸೀರಿಯಲ್ ಬಗ್ಗೆ ಇಲ್ಲಿದೆ ಅಪ್​​ಡೇಟ್.

‘ಅಮೃತಧಾರೆ’; ಮಿಂಚು ಕೂಡ ಗೌತಮ್ ಮಗಳು ಅನ್ನೋದು ಗೊತ್ತಾಗಿ ಹೋಯ್ತು
Amruthadhare
Edited By:

Updated on: Jan 07, 2026 | 8:08 AM

‘ಅಮೃತಧಾರೆ’ ಧಾರಾವಾಹಿ ನಾನಾ ಟ್ವಿಸ್ಟ್​​ಗಳನ್ನು ಪಡೆದು ಸಾಗುತ್ತಿದೆ. ಈಗ ಧಾರಾವಾಹಿಯಲ್ಲಿ ಪ್ರಮುಖ ಬೆಳವಣಿಗೆಗಳು ನಡೆದಿವೆ. ಖದೀಮರಿಗೆ ಮಾರಿ ಹಬ್ಬ ಉಂಟಾಗೋದು ಫಿಕ್ಸ್ ಎನ್ನಲಾಗುತ್ತಿದೆ. ಇನ್ನು, ಮಗಳನ್ನು ಹುಡುಕುವ ಟಾಸ್ಕ್ ಕೂಡ ಆರಂಭ ಆಗಲಿದೆ. ಇದರ ಮಧ್ಯೆ ಮಿಂಚು ಕೂಡ ಗೌತಮ್ ಮಗಳು ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ.

ಗೌತಮ್ ಹಾಗೂ ಭೂಮಿಕಾ ಇಷ್ಟು ದಿನ ಬೇರೆ ಆಗಿದ್ದರು. ಈ ಕಥೆ ತುಂಬಾ ದಿನಗಳಿಂದ ಸಾಗುತ್ತಾ ಇತ್ತು. ಆದರೆ, ಈಗ ಅದು ಬದಲಾಗಿದೆ. ಇಬ್ಬರೂ ಹತ್ತಿರ ಆಗಿದ್ದಾರೆ. ಇವರಿಬ್ಬರು ಪತಿ-ಪತ್ನಿ ಅನ್ನೋದು ಮಕ್ಕಳಿಗೂ ಗೊತ್ತಾಗಿದೆ. ‘ನೀವಿಬ್ಬರೂ ತಂದೆ ತಾಯಿ ಅನ್ನೋದು ನಮಗೆ ಗೊತ್ತಿತ್ತು’ ಎಂಬ ಅರ್ಥದಲ್ಲಿ ಇಬ್ಬರೂ ಮಾತನಾಡಿದ್ದಾರೆ.

ಈಗ ಮಗಳನ್ನು ಹುಡುಕುವ ಪಯಣದಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಗೌತಮ್ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾನೆ. ಅದುವೇ ಅವರಿಬ್ಬರ ಮಗಳಾಗಿರುವ ಎಲ್ಲಾ ಸಾಧ್ಯತೆ ಇದೆ ಎಂಬುದು ಪ್ರೇಕ್ಷಕರ ಊಹೆ ಆಗಿತ್ತು. ಅದು ನಿಜವಾಗಿದೆ. ‘ಟ್ವಿನ್ ಆದರೆ, ಒಬ್ಬರಿಗೆ ಆಗಿದ್ದೆ ಇನ್ನೊಬ್ಬರಿಗೂ ಆಗುತ್ತದೆ ಎಂದು ಆಕಾಶ್ ಬಳಿ ಹೇಳಿದಳು ಮಿಂಚು. ಆ ಸಮಯಕ್ಕೆ ಇಬ್ಬರಿಗೂ ಒಟ್ಟಿಗೆ ಸೀನು ಬಂದಿದೆ. ಇವರು ಒಂದೇ ಮಕ್ಕಳ ತಾಯಿ ಅನ್ನೋದು ಇದರಿಂದ ಗೊತ್ತಾಗಿದೆ.

ಮಲ್ಲಿಗೆ ಮತ್ತೆ ಲವ್ ಮಾಡಿಸಿ, ಅವಳ ಹಾರ್ಟ್​​ನ ಬ್ರೇಕ್ ಮಾಡೋದು ಜಯದೇವ್ ಉದ್ದೇಶ. ಆತನ ಹಿಂದೆ ಒಬ್ಬನ ಬಿಟ್ಟಿದ್ದಾರೆ. ಆದರೆ, ಫೇಕ್ ಬಾಯ್​ಫ್ರೆಂಡ್​ಗೆ ಈಗ ನಿಜವಾಗಲೂ ಪ್ರೀತಿ ಆದಂತೆ ಇದೆ. ಹೀಗಾಗಿ, ಕಥೆಯಲ್ಲಿ ಇದು ದೊಡ್ಡ ಟ್ವಿಸ್ಟ್ ತರಬಹುದು.

ಇದನ್ನೂ ಓದಿ: ಶಾಕ್​ನಿಂದ ಭಾಗ್ಯಾಳಿಗೆ ಬಂತು ಮಾತು; ‘ಅಮೃತಧಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್

ಇನ್ನು ಗೌತಮ್ ಮಲತಾಯಿ ಶಕುಂತಲಾ ಜಯದೇವ್ ಮನೆಯಲ್ಲಿ ಉಳಿದುಕೊಳ್ಳುತ್ತಿಲ್ಲ. ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಈಗಾಗಳೇ ಆಕೆಗೆ ಗೌತಮ್ ತಾಯಿಯಿಂದ ಎಚ್ಚರಿಕೆ ಬಂದಿದೆ. ‘ಯಾವಾಗ ಗೌತಮ್ ಹಾಗೂ ಭೂಮಿಕಾ ಒಂದಾಗುತ್ತಾಳೋ ಆಗ ನಿನ್ನ ಅವನತಿ ಶುರು’ ಎಂದು ಎಚ್ಚರಿಕೆ ನೀಡಿದ್ದಾಳೆ. ಈಗ ಇಬ್ಬರೂ ಒಂದಾಗಿರೋದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.