ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ
ಕಾರ್ತಿಕ್ ಆರ್ಯನ್ ಅಪ್ರಾಪ್ತೆ ಜೊತೆ ಡೇಟಿಂಗ್ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ 18 ವರ್ಷಗಳ ವಯಸ್ಸಿನ ಅಂತರ ಇರುವುದು ಚರ್ಚೆಗೆ ಕಾರಣವಾಗಿದೆ. ಗೋವಾ ಫೋಟೋಗಳು ವೈರಲ್ ಆದ ನಂತರ ಈ ವಿಷಯ ಬಹಿರಂಗವಾಗಿದೆ. ಕರೀನಾ ತಾವು ಕಾರ್ತಿಕ್ ಗೆಳತಿಯಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಅಭಿಮಾನಿಗಳು ಇದನ್ನು ಒಪ್ಪಿಕೊಂಡಿಲ್ಲ.

ಡೇಟಿಂಗ್ ವಿಷಯದಲ್ಲಿ ಕಾರ್ತಿಕ್ ಆರ್ಯನ್ (Karthik Aryan) ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಈ ಮೊದಲು ಅವರು ಅನನ್ಯಾ ಪಾಂಡೆ ಜೊತೆ ಸುತ್ತಿದ್ದರು ಎನ್ನಲಾಗಿತ್ತು. ಸಾರಾ ಅಲಿ ಖಾನ್ ಕೂಡ ಆರ್ಯನ್ ಜೊತೆ ಡೇಟಿಂಗ್ ನಡೆಸಿದ್ದರು. ಕನ್ನಡದ ಶ್ರೀಲೀಲಾ ಕೂಡ ಕೆಲ ಸಮಯ ಕಾರ್ತಿಕ್ ಜೊತೆ ಕಾಣಿಸಿಕೊಂಡಿದ್ದರು. ಇದಕ್ಕೆ ಕಾರಣ ಸಿನಿಮಾ ಎಂಬುದು ಬಳಿಕ ಸ್ಪಷ್ಟವಾಯಿತು. ಈಗ ಕಾರ್ತಿಕ್ ಅವರು ಡೇಟಿಂಗ್ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಅವರು ಅಪ್ರಾಪ್ತೆ ಜೊತೆ ಸುತ್ತಾಟ ನಡೆಸಿರುವುದು ಚರ್ಚೆಗೆ ಕಾರಣ ಆಗಿದೆ.
ಕಾರ್ತಿಕ್ ಆರ್ಯನ್ ಇತ್ತೀಚೆಗೆ ಗೋವಾ ತೆರಳಿದ್ದರು. ಈ ವೇಳೆ ಬೀಚ್ ಸಮೀಪ ಇರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಹುಡುಗಿ ಕೂಡ ಇದ್ದರು. ಇದು ಡೇಟಿಂಗ್ ವದಂತಿ ಹಬ್ಬಿಸಿತ್ತು. ಆದರೆ, ಆ ಹುಡುಗಿ ಯಾರು ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿರಲಿಲ್ಲ. ಈಗ ಅದು ಗೊತ್ತಾಗಿದೆ. ಅವರ ಹೆಸರು ಕರೀನಾ ಕುಬಿಲಿಯುಟೆ. ಇವರಿಗೆ ಇನ್ನೂ 18 ವರ್ಷ ತುಂಬಿಲ್ಲ!
ಕಾರ್ತಿಕ್ ಆರ್ಯನ್ ಫೋಟೋದಲ್ಲಿರೋ ಹುಡುಗಿ ಯಾರು ಎಂಬ ಹುಡುಕಾಟದಲ್ಲಿ ಅಭಿಮಾನಿಗಳಿಕೆ ಕರೀನಾ ಅವರ ಖಾತೆ ಕಂಡಿದೆ. ಅದರಲ್ಲಿ ಕೆಲ ಗೋವಾ ಫೋಟೋಗಳು ಇದ್ದವು. ಕಾರ್ತಿಕ್ ಪೋಸ್ಟ್ ಮಾಡಿದ ಜಾಗದಲ್ಲೇ ಕರೀನಾ ಕೂಡ ಫೋಟೋ ತೆಗೆದುಕೊಂಡು ಪೋಸ್ಟ್ ಮಾಡಿದ್ದರು. ಹೀಗಾಗಿ ಇಬ್ಬರ ಮಧ್ಯೆ ಲಿಂಕ್ ಮಾಡಲಾಗಿದೆ. ಈ ಮೊದಲು ಕರೀನಾ ಅವರು ಕಾರ್ತಿಕ್ನ ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದರಂತೆ. ಫೋಟೋ ವೈರಲ್ ಆಗುತ್ತಿದ್ದಂತೆ ಅವರು ಅನ್ಫಾಲೋ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು, ಈ ಬಗ್ಗೆ ಕರೀನಾ ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿರೋ ಅವರು, ‘ನಾನು ಅವರ ಗರ್ಲ್ಫ್ರೆಂಡ್ ಅಲ್ಲ’ ಎಂದು ಹೇಳಿದ್ದಾರೆ. ಆದರೆ, ಇದನ್ನು ಫ್ಯಾನ್ಸ್ ಒಪ್ಪಿಲ್ಲ. ‘ಬಾಲಕಿಗೆ 18 ವರ್ಷ ತುಂಬಿದ ಮೇಲೆ ಈ ವಿಷಯವನ್ನು ಕಾರ್ತಿಕ್ ಬಹಿರಂಗಪಡಿಸಬಹುದು’ ಎಂದು ಕೆಲವರು ಕಾಲೆಳೆದಿದ್ದಾರೆ.
ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಮನೆಯಲ್ಲಿ ಹಬ್ಬ ಆಚರಿಸಿದ ಶ್ರೀಲೀಲಾ: ಹೆಚ್ಚಿತು ಅನುಮಾನ
ಕರೀನಾ ಅವರು ಇಂಗ್ಲೆಂಡ್ನಲ್ಲಿ ಬೆಳೆದವರು. ಅವರು 2008ರ ಜೂನ್ 16ರಂದು ಜನಿಸಿದರು. ಅಂದರೆ ಈ ವರ್ಷ ಜೂನ್ಗೆ ಅವರಿಗೆ 18 ವರ್ಷ ತುಂಬಲಿದೆ. ಕಾರ್ತಿಕ್ ವಯಸ್ಸು 35 ವರ್ಷ. ಹೀಗಾಗಿ ಇಬ್ಬರ ಮಧ್ಯೆ ಬರೋಬ್ಬರಿ 18 ವರ್ಷ ವಯಸ್ಸಿನ ಅಂತರ ಇದೆ. ಅವರು ಬ್ರಿಟನ್ ಪ್ರಜೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




