‘ಲೈಗರ್​​’ನಲ್ಲಿ ಅನನ್ಯಾ ಪಾಂಡೆ ನಟನೆ ನೋಡಿ ಬೆಚ್ಚಿದ ನಿರ್ಮಾಪಕರು; ಸ್ಟಾರ್ ನಟನ ಸಿನಿಮಾದಿಂದ ಹೊರಕ್ಕೆ

ಬಾಲಿವುಡ್ ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಹಲವು ಆಫರ್​ಗಳು ಸಿಕ್ಕವು. ಸಿನಿಮಾದಿಂದ ಸಿನಿಮಾಗೆ ಅವರ ನಟನೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ.

‘ಲೈಗರ್​​’ನಲ್ಲಿ ಅನನ್ಯಾ ಪಾಂಡೆ ನಟನೆ ನೋಡಿ ಬೆಚ್ಚಿದ ನಿರ್ಮಾಪಕರು; ಸ್ಟಾರ್ ನಟನ ಸಿನಿಮಾದಿಂದ ಹೊರಕ್ಕೆ
ಅನನ್ಯಾ
Edited By:

Updated on: Sep 03, 2022 | 6:30 AM

‘ಲೈಗರ್’ ಸಿನಿಮಾ (Liger Movie) ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಳ್ಳಲಿಲ್ಲ. ಸಿನಿಮಾ ನೋಡಿದ ಫ್ಯಾನ್ಸ್ ನಿರಾಸೆ ಹೊರಹಾಕಿದ್ದಾರೆ. ಟಿಕೆಟ್ ಬುಕಿಂಗ್ ಆ್ಯಪ್​ ‘ಬುಕ್​ ಮೈ ಶೋ’​ನಲ್ಲಿ ‘ಲೈಗರ್​’ ರೇಟಿಂಗ್ 60ರ ಗಡಿ ದಾಟಿಲ್ಲ. ಐಎಂಡಿಬಿಯಲ್ಲೂ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿಲ್ಲ. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದು ವಿಜಯ್ ದೇವರಕೊಂಡ ಅವರ ನಟನೆಯನ್ನು ಮಾತ್ರ. ಈ ಮಧ್ಯೆ ಅನನ್ಯಾ ಪಾಂಡೆ (Ananya Panday) ಅವರ ಆ್ಯಕ್ಟಿಂಗ್ ನೋಡಿ ನಿರ್ಮಾಪಕರು ಬೆಚ್ಚಿದ್ದಾರಂತೆ. ಈ ಕಾರಣಕ್ಕೆ ಸ್ಟಾರ್​ ನಟನ ಆಫರ್ ಒಂದನ್ನು ಅನನ್ಯಾ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ.

ಬಾಲಿವುಡ್ ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರಿಗೆ ಹಲವು ಆಫರ್​ಗಳು ಸಿಕ್ಕವು. ಸಿನಿಮಾದಿಂದ ಸಿನಿಮಾಗೆ ಅವರ ನಟನೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅವರ ಫ್ಲ್ಯಾಟ್ ನಟನೆ ನೋಡಿ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ‘ಲೈಗರ್’ ಸಿನಿಮಾದಲ್ಲಿ ನಾಯಕಿಯ ಟ್ರ್ಯಾಕ್ ಸಖತ್ ಬೋರ್ ಎಂಬ ಕಮೆಂಟ್​ಗಳು ಕೂಡ ಬಂದಿವು. ಅಷ್ಟೇ ಅಲ್ಲ, ‘ನನ್ನ ಕರಿಯರ್ ಮುಂದುವರಿಸಲು ಹಾಲಿವುಡ್​ಗೆ ಹೋಗುತ್ತೇನೆ’ ಎಂದು ‘ಲೈಗರ್​ನಲ್ಲಿ’ ಕಥಾನಾಯಕಿ ಅನನ್ಯಾ ಹೇಳುವ ಡೈಲಾಗ್ ಸಾಕಷ್ಟು ಟ್ರೋಲ್ ಆಗಿತ್ತು. ಈ ಕಾರಣಕ್ಕೆ ಅನನ್ಯಾಗೆ ಚಾನ್ಸ್ ನೀಡಲು ನಿರ್ಮಾಪಕರು ಕೊಂಚ ಯೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಜ್ಯೂ.ಎನ್​ಟಿಆರ್ ಅವರ 30ನೇ​ ಚಿತ್ರದಲ್ಲಿ ನಟಿಸಲು ಅನನ್ಯಾ ಪಾಂಡೆಗೆ ನಿರ್ಮಾಪಕರು ಆಫರ್ ನೀಡಿದ್ದರು. ‘ಲೈಗರ್​’ ರಿಸಲ್ಟ್ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಆಲೋಚನೆಯಲ್ಲಿ ಅನನ್ಯಾ ಪಾಂಡೆ ಇದ್ದರು. ಈಗ ‘ಲೈಗರ್’ ಚಿತ್ರದಲ್ಲಿ ಅನನ್ಯಾ ಆ್ಯಕ್ಟಿಂಗ್ ನೋಡಿ ನಿರ್ಮಾಪಕರೇ ಹಿಂದೆ ಸರಿದಿದ್ದಾರೆ. ಅವರನ್ನು ಚಿತ್ರದಿಂದ ಹೊರಗಿಡುವ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ
‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Vijay Devarakonda: ಒಂದೇ ದಿನದಲ್ಲಿ 5 ಕೋಟಿ​ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡ ‘ಲೈಗರ್​’ ಟ್ರೇಲರ್​

ಇದನ್ನೂ ಓದಿ: ಅಪ್ಪು ಸಮಾಧಿಗೆ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ; ವೈರಲ್ ಆಯ್ತು ಫೋಟೋ

ಅನನ್ಯಾ ಪಾಂಡೆ ನಟನೆಯ ಯಾವ ಸಿನಿಮಾ ಕೂಡ ಹಿಟ್ ಆಗಿಲ್ಲ. ‘ಸ್ಟುಡೆಂಟ್ ಆಫ್ ದಿ ಇಯರ್ 2’, ‘ಪತಿ ಪತ್ನಿ ಔರ್ ವೋ’, ‘ಖಾಲೀ ಪೀಲಿ’, ‘ಗೆಹರಾಯಿಯಾ’ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಈಗ ‘ಲೈಗರ್’ ಕೂಡ ಸೋತಿದೆ. ಈ ಎಲ್ಲಾ ಚಿತ್ರಗಳಲ್ಲಿ ಅನನ್ಯಾ ಪಾಂಡೆ ಅವರು ಭೇಷ್ ಎನಿಸಿಕೊಳ್ಳುವಂತಹ ನಟನೆಯನ್ನು ಅವರು ನೀಡಲೇ ಇಲ್ಲ. ಈ ಕಾರಣಕ್ಕೆ ನಿರ್ಮಾಪಕರು ಆ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿ ಆಗಿದೆ.