ನಟಿ ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ (Animal) ಸಿನಿಮಾದ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಹಾಗಂತ ಅವರು ಬೇರೆ ಸಿನಿಮಾಗಳ ಕೆಲಸಗಳನ್ನು ಬದಿಗೊತ್ತಿಲ್ಲ. ‘ಅನಿಮಲ್’ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡಿದೆ. ಇನ್ನೊಂದೆಡೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ದಿ ಗರ್ಲ್ಫ್ರೆಂಡ್’ ಚಿತ್ರದ ಶೂಟಿಂಗ್ನಲ್ಲಿ ಭಾಗಿ ಆಗಿದ್ದಾರೆ. ಸೆಲೆಬ್ರೇಷನ್ ಮೂಡ್ನಲ್ಲಿ ಇದ್ದರೂ ಕೂಡ ರಶ್ಮಿಕಾ ಅವರು ಕೆಲಸ ಮರೆತಿಲ್ಲ. ಈಗ ಅವರು ‘ಪುಷ್ಪ 2’ (Pushpa 2) ಸಿನಿಮಾದ ಚಿತ್ರೀಕರಣಕ್ಕೂ ಸಮಯ ನಿಗದಿ ಮಾಡಿಕೊಂಡಿದ್ದಾರೆ. ಆ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ಹೆಚ್ಚು ಸೆನ್ಸೇಷನ್ ಸೃಷ್ಟಿ ಮಾಡಿರುವುದು ‘ಪುಷ್ಪ 2’ ಸಿನಿಮಾ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ರಶ್ಮಿಕಾ ಜೋಡಿಯಾಗಿ ನಟಿಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ‘ಅನಿಮಲ್’ ಪ್ರಮೋಷನ್ಗೆ ಸಮಯ ನೀಡಿದ್ದ ಅವರು ಈಗ ‘ಪುಷ್ಪ 2’ ಚಿತ್ರದ ಶೂಟಿಂಗ್ ಸೆಟ್ಗೆ ತೆರಳುವ ಸಮಯ ಬಂದಿದೆ. ಡಿಸೆಂಬರ್ 13ರಿಂದ ಅವರು ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.
ಇದನ್ನೂ ಓದಿ: ‘ಅನಿಮಲ್’ ಚಿತ್ರವನ್ನು ಕ್ಲಾಸಿಕ್ ಎಂದು ಹೊಗಳಿದ ಅಲ್ಲು ಅರ್ಜುನ್; ರಶ್ಮಿಕಾ ನಟನೆಗೂ ಮೆಚ್ಚುಗೆ
‘ಪುಷ್ಪ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಆ ಸಿನಿಮಾದಲ್ಲಿನ ನಟನೆಗೆ ಅಲ್ಲು ಅರ್ಜುನ್ ಅವರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು. ಈ ಎಲ್ಲ ಕಾರಣದಿಂದಾಗಿ ‘ಪುಷ್ಪ 2’ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸುಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಕನ್ನಡದ ನಟ ಡಾಲಿ ಧನಂಜಯ್ ಕೂಡ ಒಂದು ಪ್ರಮುಖ ಪತ್ರ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ರಶ್ಮಿಕಾ ಅಭಿಮಾನಿ: ಆಸೆ ಈಡೇರಿಸಿದ ಅಮಿತಾಭ್
ದೊಡ್ಡ ಬಜೆಟ್ನಲ್ಲಿ ‘ಪುಷ್ಪ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಹೈದರಾಬಾದ್ನಲ್ಲಿ ಈ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. 2024ರ ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್, ಫಸ್ಟ್ ಗ್ಲಿಂಪ್ಸ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.