‘ಕೌನ್ ಬನೇಗಾ ಕರೋಡ್​ಪತಿ’ ಶೋನಲ್ಲಿ ರಶ್ಮಿಕಾ ಅಭಿಮಾನಿ: ಆಸೆ ಈಡೇರಿಸಿದ ಅಮಿತಾಭ್

Rashmika Mandanna: ಹಾಟ್​ಸೀಟ್​ನಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿ, ಅಭಿಮಾನಿಯ ಆಸೆ ಈಡೇರಿಸಿದ ಅಮಿತಾಭ್ ಬಚ್ಚನ್.

‘ಕೌನ್ ಬನೇಗಾ ಕರೋಡ್​ಪತಿ’ ಶೋನಲ್ಲಿ ರಶ್ಮಿಕಾ ಅಭಿಮಾನಿ: ಆಸೆ ಈಡೇರಿಸಿದ ಅಮಿತಾಭ್
ರಶ್ಮಿಕಾ-ಬಚ್ಚನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 09, 2023 | 6:51 PM

ರಶ್ಮಿಕಾ ಮಂದಣ್ಣ (Rashmika Mandanna) ಅವರ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಲೇ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 4 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಚರ್ಚೆಗೆ ಬಂದಿದೆ. ರಶ್ಮಿಕಾ ಅವರಿಗೆ ಸ್ವತಃ ಅಮಿತಾಭ್ ಕರೆ ಮಾಡಿದ್ದಾರೆ. ಅವರು ಈ ರೀತಿ ದೂರವಾಣಿ ಕರೆ ಮಾಡುವುದಕ್ಕೂ ಒಂದು ಕಾರಣ ಇದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.

‘ಕೌನ್ ಬನೇಗಾ ಕರೋಡ್​ಪತಿ’ ಶೋಗೆ ಪ್ರಮೋದ್ ಭಾಸ್ಕೆ ಎಂಬುವರು ಸ್ಪರ್ಧಿ ಆಗಿ ಬಂದಿದ್ದರು. ಇವರು ಮಹಾರಾಷ್ಟ್ರದವರು. ಹಾಟ್ ಸೀಟ್​ನಲ್ಲಿ ಕುಳಿತು ಪ್ರಶ್ನೆಗಳನ್ನು ಎದುರಿಸಿದರು. ಅವರು 2016ರಿಂದ ಈ ಶೋಗೆ ಬರಲು ಪ್ರಯತ್ನಿಸಿದ್ದರಂತೆ. ಪ್ರಮೋದ್​ಗೆ ಮೊದಲ ಪ್ರಶ್ನೆ ಸಾಕಷ್ಟು ಸುಲಭವಾಗಿತ್ತು. ಈ ವರ್ಷ ರಿಲೀಸ್ ಆದ ರಣಬೀರ್ ಕಪೂರ್ ಸಿನಿಮಾ ಯಾವುದು ಎಂದು ಕೇಳಲಾಯಿತು. ಇದಕ್ಕೆ ‘ಅನಿಮಲ್’ ಎಂದು ಸರಿ ಉತ್ತರ ಕೊಟ್ಟರು ಅವರು. ಆ ಬಳಿಕ ಪ್ರಮೋದ್ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಈ ವೇಳೆ ಅವರು ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದರು.

‘ನಾನು ರಶ್ಮಿಕಾ ಅವರ ದೊಡ್ಡ ಫ್ಯಾನ್​. ಅವರು 2016ರಲ್ಲಿ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸೋಶಿಯಲ್ ಮೀಡಿಯಾದಲ್ಲಿ ಅವರು ನನ್ನ ಮೆಸೇಜ್​ಗೆ ಮೂರು ಬಾರಿ ಉತ್ತರಿಸಿದ್ದಾರೆ. ನನಗಿಂತ ದೊಡ್ಡ ಅಭಿಮಾನಿ ಅವರಿಗೆ ಇರಲಿಕ್ಕಿಲ್ಲ. ನಾನು ಅವರಿಗೆ ಮದುವೆ ಪ್ರಪೋಸಲ್ ಕೂಡ ಕಳುಹಿಸಿದ್ದೆ’ ಎಂದಿದ್ದಾರೆ ಪ್ರಮೋದ್. ಅಮಿತಾಭ್ ಇದಕ್ಕೆ ನಕ್ಕರು.

ಇದನ್ನೂ ಓದಿ:4 ಕೋಟಿಗೆ ಏರಿತು ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಸಂಖ್ಯೆ; ನಟಿಗೆ ಡಬಲ್​ ಖುಷಿ

12,50,000 ರೂಪಾಯಿಯ ಪ್ರಶ್ನೆಗೆ ಪ್ರಮೋದ್ ಉತ್ತರ ಕೊಟ್ಟರು. ಆ ಬಳಿಕ ರಶ್ಮಿಕಾಗೆ ದೂರವಾಣಿ ಕರೆ ಮಾಡಿದರು ಅಮಿತಾಭ್. ಈ ವೇಳೆ ವೈಯಕ್ತಿಕವಾಗಿ ಪ್ರಮೋದ್ ಅವರನ್ನು ಭೇಟಿ ಮಾಡುವ ಭರವಸೆಯನ್ನು ರಶ್ಮಿಕಾ ನೀಡಿದರು. ಈ ವೇಳೆ ಅಮಿತಾಭ್ ಅವರು ರಶ್ಮಿಕಾ ಅವರನ್ನು ಹೊಗಳಿದರು. ‘ನಿಮಗೆ ಆಲ್​ ದಿ ಬೆಸ್ಟ್. ಇತ್ತೀಚೆಗೆ ನಿಮ್ಮ ಪರ್ಫಾರ್ಮೆನ್ಸ್ ಅದ್ಭುತವಾಗಿತ್ತು. ‘ಅನಿಮಲ್’ ಸಿನಿಮಾದಲ್ಲಿ ನಿಮ್ಮ ನಟನೆ ಇಷ್ಟ ಆಯಿತು. ನಾವು ಒಂದು ದಿನ ಭೇಟಿ ಆಗಿ ಈ ಬಗ್ಗೆ ಮಾತನಾಡೋಣ’ ಎಂದರು ಅಮಿತಾಭ್​.

ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್​ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ‘ಗುಡ್​ ಬೈ’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಈ ಚಿತ್ರದ ಶೂಟಿಂಗ್ ವೇಳೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಇದು ರಶ್ಮಿಕಾ ಅವರ ಮೊದಲ ಹಿಂದಿ ಸಿನಿಮಾ. ಆ ಬಳಿಕ ರಶ್ಮಿಕಾ ಅವರು, ‘ಮಿಷನ್ ಮಜ್ನು’ ಚಿತ್ರದಲ್ಲಿ ನಟಿಸಿದರು. ಈಗ ‘ಅನಿಮಲ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲೊ 300 ಕೋಟಿ ರೂಪಾಯಿ ಗಳಿಸಿದೆ. ರಣಬೀರ್ ಕಪೂರ್ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ‘ಪುಷ್ಪ 2’, ‘ರೇನ್​ಬೋ’ ಮೊದಲಾದ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್