4 ಕೋಟಿಗೆ ಏರಿತು ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ; ನಟಿಗೆ ಡಬಲ್ ಖುಷಿ
ಒಂದೆಡೆ ‘ಅನಿಮಲ್’ ಸಿನಿಮಾದ ಭರ್ಜರಿ ಗೆಲುವು, ಇನ್ನೊಂದೆಡೆ ಫಾಲೋವರ್ಸ್ ಸಂಖ್ಯೆಯಲ್ಲಿ ಹೆಚ್ಚಳ. ಈ ಎರಡು ಕಾರಣಗಳಿಂದ ರಶ್ಮಿಕಾ ಮಂದಣ್ಣ ಅವರಿಗೆ ಖುಷಿ ಆಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಅವರು ಇನ್ಸ್ಟಾಗ್ರಾಮ್ನಲ್ಲಿ 40 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಸಿನಿಮಾ (Animal Movie) ಮೂಲಕ ದೊಡ್ಡ ಗೆಲುವು ಪಡೆದಿದ್ದಾರೆ. ದಿನದಿಂದ ದಿನಕ್ಕೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಹಿಂಬಾಲಿಸುವವರ ಸಂಖ್ಯೆ ದೊಡ್ಡದಾಗುತ್ತಲೇ ಇದೆ. ಇನ್ಸ್ಟಾಗ್ರಾಮ್ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಬರೋಬ್ಬರಿ 40 ಮಿಲಿಯನ್, ಅಂದರೆ 4 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ಇದರ ಜೊತೆ ‘ಅನಿಮಲ್’ ಸಿನಿಮಾ ಕೂಡ ಗೆದ್ದಿರುವುದು ನಟಿಯ ಪಾಲಿಗೆ ಡಬಲ್ ಖುಷಿ ನೀಡಿದೆ.
‘ಕಿರಿಕ್ ಪಾರ್ಟಿ’ ಸಿನಿಮಾ ಬರುವುದಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಅವರು ಯಾರು ಎಂಬುದೇ ಜನರಿಗೆ ತಿಳಿದಿರಲಿಲ್ಲ. ಆದರೆ ‘ಕಿರಿಕ್ ಪಾರ್ಟಿ’ ಬಿಡುಗಡೆ ಆಗುತ್ತಿದ್ದಂತೆಯೇ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಂದ ಆಫರ್ ಬರಲು ಆರಂಭ ಆಯಿತು. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ರಶ್ಮಿಕಾ ಮಂದಣ್ಣ ಸೈ ಎನಿಸಿಕೊಂಡರು. ಬಳಿಕ ಅವರು ಬಾಲಿವುಡ್ಗೂ ಕಾಲಿಟ್ಟು ಯಶಸ್ಸು ಗಳಿಸಿದರು.
View this post on Instagram
ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಜೊತೆ ‘ಗುಡ್ಬೈ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡರು. ನಂತರ ‘ಮಿಷನ್ ಮಜ್ನು’ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ಅವರು ಅಭಿನಯಿಸಿದರು. ಈಗ ರಣಬೀರ್ ಕಪೂರ್ ಜೊತೆ ‘ಅನಿಮಲ್’ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಅದರ ಜೊತೆಗೆ ರಶ್ಮಿಕಾ ಮಂದಣ್ಣ ಅವರ ಫಾಲೋವರ್ಸ್ ಸಂಖ್ಯೆ ಕೂಡ ವೃದ್ಧಿಸುತ್ತಿದೆ.
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಫೋಟೋ ದುರ್ಬಳಕೆ: ಕ್ಷಮೆ ಕೇಳಿದ ನಟ ನಾನಿ
ಸಿನಿಮಾದ ಸಂಭಾವನೆ ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದಿಂದಲೂ ಸೆಲೆಬ್ರಿಟಿಗಳು ಹಣ ಗಳಿಸುತ್ತಾರೆ. ಅವರು ಮಾಡುವ ಪ್ರತಿ ಪೋಸ್ಟ್ಗೆ ಲಕ್ಷಾಂತರ ರೂಪಾಯಿ ಹಣ ಬರುತ್ತದೆ. ಕಮರ್ಷಿಯಲ್ ಪೋಸ್ಟ್ಗಳನ್ನು ಮಾಡಿದರೆ ಕೋಟ್ಯಂತರ ರೂಪಾಯಿ ಹರಿದು ಬರುತ್ತದೆ. ಹಾಗಾಗಿ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಸೆಲೆಬ್ರಿಟಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ರಶ್ಮಿಕಾ ಮಂದಣ್ಣ ಅವರು ಈ ವಿಚಾರದಲ್ಲಿ ಮುಂದಿದ್ದಾರೆ. ಸದ್ಯ ಅವರಿಗೆ ಹೊಸ ಹೊಸ ಆಫರ್ಗಳು ಹರಿದು ಬರುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.