ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಫೋಟೋ ದುರ್ಬಳಕೆ: ಕ್ಷಮೆ ಕೇಳಿದ ನಟ ನಾನಿ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮಾಲ್ಡೀವ್ಸ್ಗೆ ತೆರಳಿದ್ದ ಸಂದರ್ಭದ ಫೋಟೋವನ್ನು ‘ಹಾಯ್ ನಾನ್ನ’ ಸಿನಿಮಾದ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು. ಆ ಘಟನೆಗೆ ಸಂಬಂಧಿಸಿದಂತೆ ನಟ ನಾನಿ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ಟಾಲಿವುಡ್ನ ಖ್ಯಾತ ನಟ ನಾನಿ (Nani) ಅಭಿನಯದ ‘ಹಾಯ್ ನಾನ್ನ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಫೋಟೋವನ್ನು ಬಿತ್ತರ ಮಾಡಲಾಗಿತ್ತು. ಆ ಚಿತ್ರತಂಡದ ಜೊತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರಿಗೆ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ವೇದಿಕೆಯ ಎಲ್ಇಡಿ ಪರದೆಯಲ್ಲಿ ಇಬ್ಬರ ವೈಯಕ್ತಿಕ ಫೋಟೋ ಬಿತ್ತರ ಆಗಿದ್ದು ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಅದಕ್ಕೆ ಈಗ ನಟ ನಾನಿ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರತಂಡದಿಂದ ಆದ ಪ್ರಮಾದಕ್ಕೆ ಅವರು ಕ್ಷಮೆ ಕೇಳಿದ್ದಾರೆ.
‘ಹಾಯ್ ನಾನ್ನ’ ಸಿನಿಮಾದಲ್ಲಿ ನಾನಿ ಮತ್ತು ಮೃಣಾಲ್ ಠಾಕೂರ್ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯುವಾಗ ರಶ್ಮಿಕಾ ಮಂದಣ್ಣ ಮತ್ತು ನಾನಿ ಅವರ ಫೋಟೋ ಯಾಕೆ ಬಿತ್ತರ ಆಯಿತು ಎಂಬುದು ಯಾರಿಗೂ ತಿಳಿದಿಲ್ಲ. ಪ್ರಚಾರದ ಹುಚ್ಚಿನಿಂದ ‘ಹಾಯ್ ನಾನ್ನ’ ತಂಡವೇ ಈ ರೀತಿ ಗಿಮಿಕ್ ಮಾಡಿರಬಹುದು ಎಂಬುದು ಕೆಲವರ ಆರೋಪ. ಒಟ್ಟಿನಲ್ಲಿ ಆ ಘಟನೆಗೆ ನಾನಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಅನಿಮಲ್’ ಸಿನಿಮಾದಲ್ಲಿ ಮಿತಿ ಮೀರಿತು ರಶ್ಮಿಕಾ ಬೋಲ್ಡ್ನೆಸ್; ದೃಶ್ಯಗಳು ಲೀಕ್
‘ಆ ರೀತಿ ಆಗಿದ್ದು ದುರದೃಷ್ಟಕರ. ಏನಾಯಿತು ಎಂಬುದು ಗೊತ್ತಾಗುವುದರೊಳಗೆ ಫೋಟೋ ಕಣ್ಮರೆ ಆಯಿತು. ನಾವೆಲ್ಲರೂ ಆಪ್ತ ಸ್ನೇಹಿತರು. ಹೀಗೆಲ್ಲ ಆಗುವುದು ಸಹಜ ಎಂಬುದನ್ನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅರ್ಥ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಯಾರಿಗಾದರೂ ನಿಜವಾಗಿಯೂ ನೋವಾಗಿದ್ದರೆ ನಾನು ಮತ್ತು ನನ್ನ ತಂಡದವರು ಕ್ಷಮೆ ಕೇಳುತ್ತೇವೆ’ ಎಂದು ನಾನಿ ಹೇಳಿದ್ದಾರೆ.
ಇದನ್ನೂ ಓದಿ: ವಿಜಯ್ ದೇವರಕೊಂಡ-ಮೃಣಾಲ್ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ
‘ಇಂಥ ಇವೆಂಟ್ನ ಹಿಂದೆ ಸಾಕಷ್ಟು ಜನರು ಕೆಲಸ ಮಾಡುತ್ತಾರೆ. ಈ ರೀತಿ ಆಗಬಾರದಿತ್ತು. ಹೀಗೆ ಮಾಡಿದ್ದು ಯಾರು ಅಂತ ತಿಳಿಯಲು ಪ್ರಯತ್ನಿಸಿದೆವು. ಆದರೆ ಆ ಕೆಲಸ ಮಾಡಿದವರು ಈಗಾಗಲೇ ಭಯಬಿದ್ದಿದ್ದರು. ಹೋಗಲಿ ಬಿಡಿ ಅಂತ ಸುಮ್ಮನಾದೆವು. ಅದು ಸಿನಿಮಾ ಕಾರ್ಯಕ್ರಮ. ಅಂಥ ಫೋಟೋ ಹಾಕಿ ಸಾಹಸ ಮಾಡಲು ಯಾವುದೋ ಗಾಸಿಪ್ ವೆಬ್ಸೈಟ್ ಅಲ್ಲ’ ಎಂದಿದ್ದಾರೆ ನಾನಿ.
#Nani Clarified#VijayDeverakonda || #Rashmika pic.twitter.com/m55TajhMMP
— 👋 HI Nani𓃵 Fan (@NaniFans1984) December 2, 2023
ಈ ವಿಚಾರದ ಬಗ್ಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯೆ ನೀಡುವುದು ಇನ್ನೂ ಬಾಕಿ ಇದೆ. ‘ಹಾಯ್ ನಾನ್ನ’ ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.