ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ‘ಅಣ್ಣಾಥೆ’; ಬಾಕ್ಸ್ ಆಫೀಸ್ ಉಡೀಸ್ ಮಾಡಿದ ರಜನಿ ಸಿನಿಮಾ
Annaatthe Movie Collection: ಇಂದು (ನವೆಂಬರ್ 7) ಸಿನಿಮಾ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇದೆ. ಇಂದು ಭಾನುವಾರ. ಅಲ್ಲದೆ, ಹಬ್ಬದ ಸಮಯ. ವೀಕೆಂಡ್ ಆದ್ದರಿಂದ ಜನರು ಚಿತ್ರಮಂದಿರದತ್ತ ಹೆಚ್ಚು ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ರಜನಿಕಾಂತ್ ನಟನೆಯ ‘ಅಣ್ಣಾಥೆ’ ದೀಪಾವಳಿ ನಿಮಿತ್ತ ನವೆಂಬರ್ 4ರಂದು ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಮೊದಲ ದಿನವೇ ಅದ್ಭುತ ಗಳಿಕೆ ಮಾಡಿದ್ದ ಈ ಚಿತ್ರದ ಗಳಿಕೆ ಮೂರು ದಿನಗಳಲ್ಲಿ 150 ಕೋಟಿ ರೂಪಾಯಿ ಸಮೀಪಿಸಿದೆ. ಇದನ್ನು ಕೇಳಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಸಿನಿಮಾ 200 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ.
‘ಅಣ್ಣಾಥೆ’ ಚಿತ್ರ ವಿಶ್ವಾದ್ಯಂತ ಸುಮಾರು 2200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ತಮಿಳುನಾಡು ಒಂದರಲ್ಲೇ 800ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಜನಿಕಾಂತ್ ಸಿನಿಮಾ ತೆರೆಗೆ ಬಂದಿದೆ. ಕರ್ನಾಟಕ ಹಾಗೂ ಆಂಧ್ರ ಸೇರಿ ಮತ್ತಿತರ ರಾಜ್ಯಗಳಲ್ಲೂ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ ಮೊದಲ ದಿನ 70 ಕೋಟಿ ಗಳಿಕೆ ಮಾಡಿತ್ತು. ನವೆಂಬರ್ 5ರಂದು ಸಿನಿಮಾ 42.6 ಕೋಟಿ ರೂಪಾಯಿ, ನವೆಂಬರ್ 6ರಂದು ಚಿತ್ರ 33.71 ಕೋಟಿ ಗಳಿಸಿದೆ. ಈ ಮೂಲಕ ಸಿನಿಮಾದ ಒಟ್ಟೂ ಗಳಿಕೆ 146.53 ಆಗಿದೆ.
ಇಂದು (ನವೆಂಬರ್ 7) ಸಿನಿಮಾ ಕಲೆಕ್ಷನ್ ಹೆಚ್ಚುವ ಸಾಧ್ಯತೆ ಇದೆ. ಇಂದು ಭಾನುವಾರ. ಅಲ್ಲದೆ, ಹಬ್ಬದ ಸಮಯ. ವೀಕೆಂಡ್ ಆದ್ದರಿಂದ ಜನರು ಚಿತ್ರಮಂದಿರದತ್ತ ಹೆಚ್ಚು ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇಂದಿನ ಕಲೆಕ್ಷನ್ ಸೇರಿದರೆ ಸಿನಿಮಾದ ಗಳಿಕೆ 150 ಕೋಟಿ ರೂಪಾಯಿ ದಾಟಲಿದೆ. ಶೀಘ್ರವೇ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
#Annaatthe WW Box Office – INCHES closer to ₹150 cr mark.
Day 1 – ₹ 70.19 cr Day 2 – ₹ 42.63 cr Day 3 – ₹ 33.71 cr Total – ₹ 146.53 cr#Rajinikanth #KeerthySuresh #Nayanthara
— Manobala Vijayabalan (@ManobalaV) November 7, 2021
‘ಅಣ್ಣಾಥೆ’ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ರಜನಿಕಾಂತ್, ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್ 4ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: Tamilrockersನಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಲೀಕ್
ಕಲೆಕ್ಷನ್ ವಿಚಾರದಲ್ಲಿ ಎಲ್ಲಾ ದಾಖಲೆ ಪುಡಿ ಮಾಡಿದ ‘ಅಣ್ಣಾಥೆ’; ಇಲ್ಲಿದೆ ರಜನಿ ಚಿತ್ರದ ಮೊದಲ ದಿನದ ಗಳಿಕೆ