Anupama Parameswaran: ‘ಹೌದು ಅಣ್ಣಾ.. ನಾನು ಹೀರೋಯಿನ್​ ಅಲ್ಲ’: ನಟಿ ಅನುಪಮಾ ಪರಮೇಶ್ವರನ್​ ಹೀಗೆ ಹೇಳಿದ್ದು ಯಾಕೆ?

ನೀವು ಹೀರೋಯಿನ್​ ಅಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದಾಗ ಅನುಪಮಾ ಪರಮೇಶ್ವರನ್​ ಅವರು ಸಿಟ್ಟು ಮಾಡಿಕೊಂಡಿಲ್ಲ. ತಮ್ಮದೇ ಶೈಲಿಯಲ್ಲಿ ಅವರು ಉತ್ತರ ನೀಡಿದ್ದಾರೆ.

Anupama Parameswaran: ‘ಹೌದು ಅಣ್ಣಾ.. ನಾನು ಹೀರೋಯಿನ್​ ಅಲ್ಲ’: ನಟಿ ಅನುಪಮಾ ಪರಮೇಶ್ವರನ್​ ಹೀಗೆ ಹೇಳಿದ್ದು ಯಾಕೆ?
ಅನುಪಮಾ ಪರಮೇಶ್ವರನ್​
Edited By:

Updated on: Jun 12, 2023 | 4:34 PM

ಖ್ಯಾತ ನಟಿ ಅನುಪಮಾ ಪರಮೇಶ್ವರನ್​ (Anupama Parameswaran) ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ. ಅಷ್ಟರಮಟ್ಟಿಗೆ ಅವರು ಫೇಮಸ್​ ಆಗಿದ್ದಾರೆ. ಕನ್ನಡದ ಸಿನಿಮಾ ಪ್ರೇಕ್ಷಕರಿಗೂ ಅವರು ಪರಿಚಿತರು. ಪುನೀತ್​ ರಾಜ್​ಕುಮಾರ್​ ಅಭಿನಯದ ‘ನಟ ಸಾರ್ವಭೌಮ’ (Nata Sarvabhouma) ಸಿನಿಮಾಗೆ ಅನುಪಮಾ ಪರಮೇಶ್ವರನ್​ ನಾಯಕಿ. ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಅವರಿಗೆ ತುಂಬ ಜನಪ್ರಿಯತೆ ಸಿಕ್ಕಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 1.3 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಾರೆ. 20ಕ್ಕೂ ಅಧಿಕ ಸಿನಿಮಾಗಳಲ್ಲಿ ಅನುಪಮಾ ಪರಮೇಶ್ವರನ್​ ನಟಿಸಿದ್ದಾರೆ. ಹಾಗಿದ್ದರೂ ಕೂಡ ಅವರನ್ನು ವ್ಯಂಗ್ಯ ಮಾಡಲಾಗಿದೆ. ಇತ್ತೀಚೆಗೆ ನೆಟ್ಟಿಗನೊಬ್ಬರು ‘ಈಕೆ ಹೀರೋಯಿನ್​ ಮಟೀರಿಯಲ್​ ಅಲ್ಲ’ ಎಂದು ಟ್ರೋಲ್​ (Troll)​ ಮಾಡಿದ್ದಾರೆ. ಅದಕ್ಕೆ ಅನುಪಮಾ ಪರಮೇಶ್ವರನ್​ ಅವರು ಸರಿಯಾಗಿ ತಿರುಗೇಟು ನೀಡಿದ್ದಾರೆ.

ನೆಟ್ಟಿಗರಿಂದ ಕೆಟ್ಟ ಕಮೆಂಟ್​ಗಳು ಬಂದಾಗ ಸೆಲೆಬ್ರಿಟಿಗಳಿಗೆ ಕೋಪ ಬರುತ್ತದೆ. ಆದರೆ ಕೆಲವರ ಅಂಥ ಸಂದರ್ಭವನ್ನು ತುಂಬ ಚೆನ್ನಾಗಿ ನಿಭಾಯಿಸುತ್ತಾರೆ. ಅದೇ ಕಾರಣಕ್ಕಾಗಿ ಅನುಪಮಾ ಪರಮೇಶ್ವರನ್​ ಅವರು ಈಗ ಸುದ್ದಿ ಆಗಿದ್ದಾರೆ. ನೆಟ್ಟಿಗರಿಂದ ನಾನಾ ರೀತಿಯ ಟೀಕೆ ಬರುವುದು ಸಹಜ. ಆದರೆ ಈ ನಡುವೆ ಒಂದು ಅತಿರೇಕದ ಕಮೆಂಟ್​ ಬಂದಿದೆ. ‘ಇವರು ಯಾವ ದೊಡ್ಡ ಸಿನಿಮಾ ಕೂಡ ಮಾಡಿಲ್ಲ. ನನ್ನ ಪಾಲಿಗೆ ಇವರು ಹೀರೋಯಿನ್​ ಮಟೀರಿಯಲ್​ ಅಲ್ಲ’ ಎಂದು ವ್ಯಕ್ತಿಯೊಬ್ಬರು ಮಾಡಿದ ಕಮೆಂಟ್​ ಅನುಪಮಾ ಪರಮೇಶ್ವರನ್​ ಕಣ್ಣಿಗೂ ಬಿದ್ದಿದೆ.

ಹಲವಾರು ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ ನಟಿಯನ್ನು ಅಣಕಿಸುವ ರೀತಿಯಲ್ಲಿ ಮಾತನಾಡಿದರೆ ಖಂಡಿತವಾಗಿಯೂ ಬೇಸರ ಆಗುತ್ತದೆ. ಹಾಗಿದ್ದರೂ ಕೂಡ ಅನುಪಮಾ ಪರಮೇಶ್ವರನ್​ ಅವರು ಸಿಟ್ಟು ಅಥವಾ ಬೇಸರ ಮಾಡಿಕೊಂಡಿಲ್ಲ. ತಮ್ಮದೇ ಶೈಲಿಯಲ್ಲಿ ಅವರು ಉತ್ತರ ನೀಡಿದ್ದಾರೆ.‘ಹೌದು ಅಣ್ಣಾ.. ನಾನು ಹೀರೋಯಿನ್​ ಟೈಪ್​ ಅಲ್ಲ. ನಾನು ನಟಿ ಟೈಪ್​’ ಎಂದು ಅನುಪಮಾ ಪರಮೇಶ್ವರನ್​ ಹೇಳಿದ್ದಾರೆ. ಅವರ ಈ ಹೇಳಿಕೆ ಅರ್ಥಪೂರ್ಣವಾಗಿದೆ. ಯಾರು ಬೇಕಾದರೂ ಹೀರೋಯಿನ್​ ಎನಿಸಿಕೊಳ್ಳಬಹುದು. ಆದರೆ ನಟಿ ಎನಿಸಿಕೊಳ್ಳಲು ಅಭಿನಯ ಬರಬೇಕು. ಹಾಗಾಗಿ ತಮ್ಮನ್ನು ಹೀರೋಯಿನ್​ ಎಂಬುದಕ್ಕಿಂತಲೂ ನಟಿ ಅಂತ ಕರೆದರೆ ಹೆಚ್ಚು ಸೂಕ್ತ ಎಂದು ಅನುಪಮಾ ಪರಮೇಶ್ವರನ್​ ಅವರು ಈ ಮೂಲಕ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ಸೀರೆಯುಟ್ಟು ಫೋಟೋಗೆ ಸಖತ್ ಪೋಸ್ ಕೊಟ್ಟ ಗುಂಗುರು ಕೂದಲು ಚೆಲುವೆ ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್​ ಅವರು ಬಹುಭಾಷೆಯಲ್ಲಿ ಬೇಡಿಕೆ ಹೊಂದಿದ್ದಾರೆ. ನಟನೆ ಮಾತ್ರವಲ್ಲದೇ ಸಿನಿಮಾದ ಇನ್ನುಳಿದ ವಿಭಾಗಗಳ ಬಗ್ಗೆಯೂ ಅವರು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶ. ನಟನೆಯ ಜೊತೆಗೆ ಛಾಯಾಗ್ರಹಣದಲ್ಲೂ ಅನುಪಮಾ ಪರಮೇಶ್ವರನ್​ ಅವರಿಗೆ ಆಸಕ್ತಿ ಇದೆ. ಹಾಗಾಗಿ ‘ಐ ಮಿಸ್​ ಯೂ’ ಕಿರುಚಿತ್ರಕ್ಕೆ ಅವರು ಕ್ಯಾಮೆರಾ ವರ್ಕ್​ ಮಾಡಿದ್ದಾರೆ. ಅವರ ಈ ಪ್ರತಿಭೆ ಬಗ್ಗೆ ಅಭಿಮಾನಿಗಳಿಗೆ ಹೆಮ್ಮೆ ಎನಿಸಿದೆ.

ಇದನ್ನೂ ಓದಿ: ಸಿಂಪಲ್ ಗೆಟಪ್​ನಲ್ಲೇ ಅಭಿಮಾನಿಗಳ ಮನಗೆದ್ದ ಅನುಪಮಾ ಪರಮೇಶ್ವರನ್

ತೆಲುಗು ಭಾಷೆಯ ‘ಐ ಮಿಸ್​ ಯೂ’ ಕಿರುಚಿತ್ರ ಯೂಟ್ಯೂಬ್​ನಲ್ಲಿ ಲಭ್ಯವಿದೆ. ಇದಕ್ಕೆ ಸಂಕಲ್ಪ ಗೋರಾ ನಿರ್ದೇಶನ ಮಾಡಿದ್ದಾರೆ. 10 ನಿಮಿಷ ಅವಧಿಯ ಈ ಶಾರ್ಟ್​ ಫಿಲ್ಮ್​ಗೆ ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವು ನಟಿಯರು ಕೇವಲ ಗ್ಲಾಮರ್​ ಗೊಂಬೆಯಾಗಿ ಇರುವ ಬದಲು ಸಿನಿಮಾದ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ದುಲ್ಕರ್​ ಸಲ್ಮಾನ್​ ನಿರ್ಮಾಣದ ಮೊದಲ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್​ ಅವರು ಸಹಾಯಕ ನಿರ್ದೇಶಕಿ ಆಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:41 pm, Mon, 12 June 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us