ಗೋವಾದಲ್ಲಿ ಆರಂಭವಾಗಿದೆ 54ನೇ ಅಂತಾರಾಷ್ಟ್ರೀಯ ಸಿನಿಮೋತ್ಸವ; ವಿಶೇಷತೆಗಳೇನು?

ವಿಜಯ್ ಸೇತುಪತಿ, ಕರಣ್ ಜೋಹರ್, ಸಾರಾ ಅಲಿ ಖಾನ್, ಪಂಕಜ್ ತ್ರಿಪಾಠಿ, ಜಿಸು ಸೇನ್​ಗುಪ್ತಾ ಸೇರಿ ಅನೇಕ ಸೆಲೆಬ್ರಿಟಿಗಳು ಈ ಓಪನಿಂಗ್ ಸೆರೆಮನಿಯಲ್ಲಿ ಭಾಗಿ ಆಗಿದ್ದರು.

ಗೋವಾದಲ್ಲಿ ಆರಂಭವಾಗಿದೆ 54ನೇ ಅಂತಾರಾಷ್ಟ್ರೀಯ ಸಿನಿಮೋತ್ಸವ; ವಿಶೇಷತೆಗಳೇನು?
ಅನುರಾಗ್ ಠಾಕೂರ್
Follow us
|

Updated on: Nov 21, 2023 | 6:08 PM

ಪ್ರತಿ ಬಾರಿ ಸಿನಿಮೋತ್ಸವ ಆರಂಭ ಆದಾಗಲೂ ಸಿನಿಪ್ರಿಯರಿಗೆ ಖುಷಿ ಆಗುತ್ತದೆ. ಈಗ 54ನೇ ಸಾಲಿನ ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್ (International Film Festival) ಗೋವಾದಲ್ಲಿ ಆರಂಭ ಆಗಿದೆ. ಸೋಮವಾರ (ನವೆಂಬರ್ 20) ಪಣಜಿಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಚಾಲನೆ ನೀಡಿದರು. ಈ ವರ್ಷದ ಸಿನಿಮೋತ್ಸವ ಹಲವು ವಿಶೇಷತೆಗಳನ್ನು ಹೊಂದಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು 9 ದಿನಗಳ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು. ಗೋವಾ ಮುಖ್ಯಮಂತ್ರಿ ಡಾಕ್ಟರ್ ಪ್ರಮೋದ್ ಸಾವಂತ್, ಸಹಾಯಕ ಸಚಿವ ಡಾಕ್ಟರ್ ಎಲ್​. ಮುರುಗನ್, ನಟ ಹಾಗೂ ಸಂಸದ ಸನ್ನಿ ಡಿಯೋಲ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

‘54ನೇ ಫಿಲ್ಮ್​ ಫೆಸ್ಟಿವಲ್ ವೈವಿಧ್ಯ ಧ್ವನಿ, ಹಲವು ಸಂಸ್ಕೃತಿ, ವೈವಿಧ್ಯತೆ ಮತ್ತು ಸಂಪೂರ್ಣ ಸಿನಿಮೀಯ ಶ್ರೇಷ್ಠತೆಯ ಸಮ್ಮಿಳನವಾಗಿದೆ. ಈ ವರ್ಷ 270 ಸಿನಿಮಾಗಳು ಪ್ರದರ್ಶನ ಆಗಲಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಸಿನಿಮಾ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಇದರಿಂದ ಸಿನಿಮಾ ಪ್ರಿಯರಿಗೆ ಖುಷಿ ಆಗಿದೆ.

ಭಾರತದಲ್ಲಿ ನಿರ್ಮಾಣ ಆಗುವ ವಿದೇಶಿ ಸಿನಿಮಾಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ ಅನುರಾಗ್ ಸಿಂಗ್ ಠಾಕೂರ್. ‘ಭಾರತದಲ್ಲಿ ವಿದೇಶಿ ಭಾಷೆಯ ಸಿನಿಮಾ ನಿರ್ಮಾಣ ಮಾಡಿದರೆ ಒಟ್ಟೂ ಬಜೆಟ್​ನ ಶೇ.40 ಹಣವನ್ನು ಸರ್ಕಾರ ಮರುಪಾವತಿ ಮಾಡಲಿದೆ. ಇದರ ಗರಿಷ್ಟ ಮಿತಿ 30 ಕೋಟಿ ರೂಪಾಯಿ ಆಗಿದೆ. ಈ ಮೊದಲು ಇದರ ಮಿತಿ 2.5 ಕೋಟಿ ರೂಪಾಯಿ ಇತ್ತು’ ಎಂದು ಅನುರಾಗ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Koli Esru Movie: ಕನ್ನಡದ ‘ಕೋಳಿ ಎಸ್ರು’ ಚಿತ್ರಕ್ಕೆ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ 2 ಪ್ರಮುಖ ಪ್ರಶಸ್ತಿ

ವಿಜಯ್ ಸೇತುಪತಿ, ಕರಣ್ ಜೋಹರ್, ಸಾರಾ ಅಲಿ ಖಾನ್, ಪಂಕಜ್ ತ್ರಿಪಾಠಿ, ಜಿಸು ಸೇನ್​ಗುಪ್ತಾ ಸೇರಿ ಅನೇಕ ಸೆಲೆಬ್ರಿಟಿಗಳು ಈ ಓಪನಿಂಗ್ ಸೆರೆಮನಿಯಲ್ಲಿ ಭಾಗಿ ಆಗಿದ್ದರು. ಹಾಲಿವುಡ್ ನಟ, ನಿರ್ಮಾಪಕ ಮೈಕಲ್ ಡಗ್ಲೆಸ್ ಅವರಿಗೆ ಐಎಫ್​ಎಫ್​ಐ ಲೈಫ್​ಟೈಮ್ ಅಚಿವ್​ಮೆಂಟ್ ಅವಾರ್ಡ್​ ನೀಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ನಾಲ್ಕನೇ ಟಿ20 ಪಂದ್ಯಕ್ಕಾಗಿ ರಾಯ್​ಪುರ ತಲುಪಿದ ಟೀಮ್ ಇಂಡಿಯಾ ಆಟಗಾರರು
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​