ವೆಬ್ ಸೀರಿಸ್ಗಳಿಗೂ ಅವಾರ್ಡ್ ಕೊಡಲು ಮುಂದಾದ ಕೇಂದ್ರ ಸರ್ಕಾರ; ಪ್ರಶಸ್ತಿ ಹಣ ಎಷ್ಟು?
ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ವೆಬ್ ಸರಣಿ' ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಒಟಿಟಿ ವ್ಯಾಪ್ತಿ ಹಿರಿದಾದಂತೆ ವೆಬ್ ಸೀರಿಸ್ಗಳ (Web Series) ನಿರ್ಮಾಣ ಕೂಡ ಹೆಚ್ಚಿದೆ. ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ವಿವಿಧ ರೀತಿಯ ವೆಬ್ ಸರಣಿಗಳು ನೋಡಲು ಲಭ್ಯವಿದೆ. ಇನ್ನುಮುಂದೆ ಕೇಂದ್ರ ಸರ್ಕಾರವು ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಗಳನ್ನು ನೀಡಲಿದೆ. ಈ ವಿಷಯವನ್ನು ಸ್ವತಃ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Thakur) ಘೋಷಿಸಿದ್ದಾರೆ. ಈ ಬಗ್ಗೆ ಅವರು ಟ್ವಿಟರ್ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇದರಿಂದ ವೆಬ್ ಸರಣಿ ನಿರ್ಮಾಣ ಮಾಡುವವರಿಗೆ ಪ್ರೋತ್ಸಾಹ ಸಿಕ್ಕಂತಾಗಲಿದೆ.
ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ವೆಬ್ ಸರಣಿ’ ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಇನ್ನು ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಈ ವೆಬ್ ಸರಣಿಗಳನ್ನು ಒರಿಜಿನಲ್ ಆಗಿ ಶೂಟ್ ಮಾಡಿರಬೇಕು, ಭಾರತೀಯ ಭಾಷೆಗಳಲ್ಲಿ ಈ ಸರಣಿ ಲಭ್ಯವಿರಬೇಕು. ಹೀಗಿದ್ದರೆ ಅವು ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿ ಸ್ಪರ್ಧೆಗೆ ಅರ್ಹರು ಎಂದು ಸಚಿವರು ಉಲ್ಲೇಖಿಸಿದ್ದಾರೆ.
ಒಟಿಟಿಯಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು, ಭಾರತೀಯ ಭಾಷೆಗಳಲ್ಲಿ ವಿಷಯವನ್ನು ಜಗತ್ತಿಗೆ ತಿಳಿಸುವುದು ಮತ್ತು ಪ್ರತಿಭೆ ಗುರುತಿಸುವುದು ಪ್ರಶಸ್ತಿ ಸಮಾರಂಭದ ಮುಖ್ಯ ಉದ್ದೇಶ. ಪ್ರಶಸ್ತಿ ಗೆದ್ದ ವೆಬ್ ಸೀರಿಸ್ಗೆ 10 ಲಕ್ಷ ರೂಪಾಯಿ ನಗದು ಹಾಗೂ ಒಂದು ಟ್ರೋಫಿ ಸಿಗಲಿದೆ.
ಇದನ್ನೂ ಓದಿ: ಕೊರೊನಾ ಎಫೆಕ್ಟ್.. 2ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಠಿಕತೆ: ಶಾಕಿಂಗ್ ರಿಪೋರ್ಟ್ ಬಹಿರಂಗ
ಕೊವಿಡ್ ಲಾಕ್ಡೌನ್ ಸಂದರ್ಭದಲ್ಲಿ ಜನರು ಮನೆಯಲ್ಲೇ ಕೂರಬೇಕಾಯಿತು. ಈ ಕಾರಣದಿಂದ ಒಟಿಟಿಯತ್ತ ಜನರು ವಾಲಿದರು. ಅಲ್ಲಿಂದ ಈಚೆಗೆ ವೆಬ್ ಸೀರಿಸ್ಗಳ ನಿರ್ಮಾಣ ಹೆಚ್ಚುತ್ತಾ ಬಂದವು. ಇದನ್ನು ಗಮನಿಸಿ ಅನೇಕ ಕಡೆಗಳಲ್ಲಿ ಈಗಾಗಲೇ ವೆಬ್ ಸೀರಿಸ್ಗಳಿಗಾಗಿ ಅವಾರ್ಡ್ ನೀಡುವ ಕೆಲಸ ಆಗುತ್ತಿದೆ. ಈಗ ಕೇಂದ್ರ ಸರ್ಕಾರದ ಕಡೆಯಿಂದಲೂ ಪ್ರಶಸ್ತಿ ಸಿಗುತ್ತಿರುವುದು ಖುಷಿಯ ವಿಚಾರ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ