ಹಿರಿಯ ನಟನ ಜೊತೆ ಅನುಷ್ಕಾ ಶೆಟ್ಟಿ ಓಡಾಟ? ಪ್ರಭಾಸ್ ಜೊತೆಗಿನ ಬ್ರೇಕಪ್​ಗೆ ಹೊರಬಿತ್ತು ಕಾರಣ

Anushka Shetty: ಪ್ರಭಾಸ್ ಅವರು ಪ್ರೀತಿ ವಿಚಾರಕ್ಕೆ ಇತ್ತೀಚೆಗೆ ಮತ್ತೆ ಸುದ್ದಿ ಆಗುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಅವರಿಂದ ದೂರ ಉಳಿದ ನಂತರದಲ್ಲಿ ಅವರು ಬಾಲಿವುಡ್ ನಟಿ ಕೃತಿ ಸನೋನ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿತ್ತು.

ಹಿರಿಯ ನಟನ ಜೊತೆ ಅನುಷ್ಕಾ ಶೆಟ್ಟಿ ಓಡಾಟ? ಪ್ರಭಾಸ್ ಜೊತೆಗಿನ ಬ್ರೇಕಪ್​ಗೆ ಹೊರಬಿತ್ತು ಕಾರಣ
ಪ್ರಭಾಸ್ ಅನುಷ್ಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 02, 2023 | 12:44 PM

ಟಾಲಿವುಡ್​ನ ಪ್ರಭಾಸ್ (Prabhas) ಹಾಗೂ ಅನುಷ್ಕಾ ಶೆಟ್ಟಿ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವ ಮಾತಿತ್ತು. ಈ ಬಗ್ಗೆ ಟಾಲಿವುಡ್​ ಅಂಗಳದಲ್ಲಿ ಸಾಕಷ್ಟು ಸುದ್ದಿ ಹರಿದಾಡಿತ್ತು. ಆದರೆ, ಇದನ್ನು ನೇರವಾಗಿ ಒಪ್ಪಿಕೊಂಡವರು ಯಾರೂ ಇಲ್ಲ. ಕೆಲ ಸಮಯಗಳ ಕಾಲ ಈ ಸುದ್ದಿ ಚಾಲ್ತಿಯಲ್ಲಿತ್ತು. ನಂತರ ಈ ವಿಚಾರವಾಗಿ ಯಾವುದೇ ಅಪ್​ಡೇಟ್ ಸಿಗಲೇ ಇಲ್ಲ. ಈಗ ಅನುಷ್ಕಾ ಶೆಟ್ಟಿ (Anushka Shetty) ಹಾಗೂ ಪ್ರಭಾಸ್ ಬ್ರೇಕಪ್ ವಿಚಾರದಲ್ಲಿ ಹೊಸ ಅಪ್​ಡೇಟ್​ ಸಿಕ್ಕಿದೆ. ಇವರಿಬ್ಬರೂ ಈಗ ಜಸ್ಟ್ ಫ್ರೆಂಡ್ಸ್ ಆಗಷ್ಟೇ ಉಳಿದುಕೊಂಡಿದ್ದಾರೆ.

ಅನುಷ್ಕಾ ಹಾಗೂ ಪ್ರಭಾಸ್ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ‘ಬಿಲ್ಲಾ’. ಈ ಚಿತ್ರ 2009ರಲ್ಲಿ ರಿಲೀಸ್ ಆಯಿತು. ಮೊದಲ ಚಿತ್ರದಲ್ಲೇ ಕೆಮಿಸ್ಟ್ರಿ ಕೆಲಸ ಮಾಡಿತು. ನಂತರ ‘ಮಿರ್ಚಿ’ ಚಿತ್ರದಲ್ಲಿಯೂ ಇವರು ಒಟ್ಟಾಗಿ ಕಾಣಿಸಿಕೊಂಡು ಫೇವರಿಟ್ ಜೋಡಿ ಎನಿಸಿಕೊಂಡರು. ‘ಬಾಹುಬಲಿ’ ಸರಣಿ ಸೂಪರ್ ಹಿಟ್ ಆಯಿತು.  ಈಗ ಇವರ ರಿಲೇಶನ್​ಶಿಪ್ ಬಗ್ಗೆ ಅಪ್​ಡೇಟ್ ಸಿಕ್ಕಿದೆ. ಈ ಬಗ್ಗೆ Siasat ಹೆಸರಿನ ವೆಬ್​ಸೈಟ್ ವರದಿ ಮಾಡಿದೆ. ಇವರ ಬ್ರೇಕಪ್ ವಿಚಾರಕ್ಕೆ ಸಿಕ್ಕ ಕಾರಣ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.

ಅನುಷ್ಕಾ ಶೆಟ್ಟಿ ಅವರು ನಟನೋರ್ವನ ಜೊತೆ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ. ಇದರಿಂದ ಪ್ರಭಾಸ್ ಹಾಗೂ ಅನುಷ್ಕಾ ಮಧ್ಯೆ ವೈಮನಸ್ಸು ಮೂಡಿತ್ತು. ಈ ಕಾರಣಕ್ಕೆ ಅನುಷ್ಕಾ ಅವರಿಂದ ಪ್ರಭಾಸ್ ದೂರ ಉಳಿದರು ಎಂದು ಹೇಳಲಾಗಿದೆ. ಈ ವಿಚಾರವನ್ನು ಪ್ರಭಾಸ್ ಆಗಲೀ ಅನುಷ್ಕಾ ಶೆಟ್ಟಿ ಆಗಲಿ ಖಚಿತಪಡಿಸಿಲ್ಲ.

ಪ್ರಭಾಸ್ ಅವರು ಪ್ರೀತಿ ವಿಚಾರಕ್ಕೆ ಇತ್ತೀಚೆಗೆ ಮತ್ತೆ ಸುದ್ದಿ ಆಗುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಅವರಿಂದ ದೂರ ಉಳಿದ ನಂತರದಲ್ಲಿ ಅವರು ಬಾಲಿವುಡ್ ನಟಿ ಕೃತಿ ಸನೋನ್ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಇವರ ಎಂಗೇಜ್​ಮೆಂಟ್ ನಡೆಯಲಿದೆ ಎಂದು ಹೇಳಲಾಗಿತ್ತು. ಸ್ವಯಂಘೋಷಿತ ವಿಮರ್ಶಕ, ವಿದೇಶಿ ಸೆನ್ಸಾರ್​ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾದ ಉಮೈರ್ ಸಂಧು ಈ ವಿಚಾರ ಟ್ವೀಟ್ ಮಾಡಿದ್ದರು. ಆದರೆ, ಇದನ್ನು ಕೃತಿ ಅಲ್ಲಗಳೆದಿದ್ದರು.

ಇದನ್ನೂ ಓದಿ: ‘ಪ್ರಾಜೆಕ್ಟ್​ ಕೆ’ ಕಥೆ ರಿವೀಲ್ ಮಾಡಿದ ನಿರ್ಮಾಪಕ; ವಿಷ್ಣುವಿನ ಆಧುನಿಕ ಅವತಾರದಲ್ಲಿ ಬರಲಿದ್ದಾರೆ ಪ್ರಭಾಸ್

ಪ್ರಭಾಸ್ ಅವರು ‘ಆದಿಪುರುಷ್​’, ‘ಪ್ರಾಜೆಕ್ಟ್​ ಕೆ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಆದಿಪುರುಷ್​’ ಚಿತ್ರದ ಟೀಸರ್ ರಿಲೀಸ್ ಆಗಿ ಟ್ರೋಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:43 pm, Thu, 2 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ