ಮಾರ್ಚ್ 13ರಂದು ನಡೆದ 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ (Academy Awards) ಕಾರ್ಯಕ್ರಮದಲ್ಲಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದಿವೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ (Naatu Naatu Song) ಹಾಡು ಹಾಗೂ ‘ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಇದರಿಂದ ಭಾರತೀಯರ ಖುಷಿ ಹೆಚ್ಚಿದೆ. ಈ ಸಂದರ್ಭದಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಳ್ಳಲಾಗುತ್ತಿದೆ. ‘ಸ್ಲಮ್ ಡಾಗ್ ಮಿಲಿಯನೇರ್’ ಚಿತ್ರಕ್ಕಾಗಿ ಎರಡು ಆಸ್ಕರ್ ಗೆದ್ದ ರೆಹಮಾನ್ ಅವರು ಅದನ್ನು ಕಳೆದುಕೊಂಡಿದ್ದಾರೆ! ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ರೆಹಮಾನ್ ಅವರು ಬಹಳ ಸಣ್ಣ ವಯಸ್ಸಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಝಾಕಿರ್ ಹುಸೇನ್, ಇಳಯರಾಜ, ವೈದ್ಯನಾಥನ್, ಎಕ್. ಶಂಕರ್ ಜತೆ ರೆಹಮಾನ್ ಒಳ್ಳೆಯ ಒಡನಾಟ ಹೊಂದಿದ್ದರು. ಇವರಿಂದ ರೆಹಮಾನ್ ಸಾಕಷ್ಟು ಪ್ರಭಾವಕ್ಕೆ ಒಳಗಾಗಿದ್ದರು. 1992ರಲ್ಲಿ ತೆರೆಗೆ ಬಂದ ತಮಿಳಿನ ‘ರೋಜಾ’ ಸಿನಿಮಾದ ಹಾಡುಗಳು ಹಿಟ್ ಆದವು. ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ರೆಹಮಾನ್. ಮೊದಲ ಸಿನಿಮಾದಲ್ಲೇ ಖ್ಯಾತಿ ಹೆಚ್ಚಿತು. ಮೊದಲ ಚಿತ್ರಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು.
‘ಸ್ಲಮ್ಡಾಗ್ ಮಿಲಿಯನೇರ್’ ಚಿತ್ರ 2008ರಲ್ಲಿ ರಿಲೀಸ್ ಆಯಿತು. ಇದು ರೆಹಮಾನ್ ವೃತ್ತಿಜೀವನದಲ್ಲಿ ಮಹತ್ವದ ಸಿನಿಮಾ ಎನಿಸಿಕೊಂಡಿದೆ. ಈ ಚಿತ್ರಕ್ಕೆ ರೆಹಮಾನ್ ಅವರಿಗೆ ಎರಡು ಆಸ್ಕರ್ ಅವಾರ್ಡ್ಗಳು ಲಭಿಸಿದ್ದವು. ಇದನ್ನು ರೆಹಮಾನ್ ಅವರು ತಾಯಿ ಕರೀಮಾ ಬೇಗಮ್ಗೆ ನೀಡಿದ್ದರು. ಅವರು ಆಸ್ಕರ್ ಟ್ರೋಫಿಯನ್ನು ಕಬೋರ್ಡ್ನಲ್ಲಿ ಬಟ್ಟೆಮುಚ್ಚಿ ಜೋಪಾನವಾಗಿರಿಸಿದ್ದರು.
ಇದನ್ನೂ ಓದಿ: A R Rahman: ‘ನಾಟು ನಾಟು ಹಾಡಿಗೆ ಆಸ್ಕರ್ ಮಾತ್ರವಲ್ಲ, ಗ್ರ್ಯಾಮಿ ಪ್ರಶಸ್ತಿ ಕೂಡ ಬರಬೇಕು’: ಎ.ಆರ್. ರೆಹಮಾನ್
2020ರ ಡಿಸೆಂಬರ್ನಲ್ಲಿ ರೆಹಮಾನ್ ತಾಯಿ ಕರೀಮಾ ಬೇಗಮ್ ನಿಧನ ಹೊಂದಿದರು. ಈ ವೇಳೆ ತಾಯಿ ಆಸ್ಕರ್ ಟ್ರೋಫಿಯನ್ನು ಎಲ್ಲಿಟ್ಟಿದ್ದಾರೆ ಎನ್ನುವ ಗೊಂದಲ ರೆಹಮಾನ್ಗೆ ಕಾಡಿತ್ತು. ಇದಕ್ಕಾಗಿ ಅವರು ಸಾಕಷ್ಟು ಹುಡುಕಾಡಿದ್ದರು. ಆದರೆ, ಈ ಪ್ರಶಸ್ತಿ ಸಿಗಲೇ ಇಲ್ಲ. ಕೆಲ ಸಮಯದ ನಂತರ ಅದು ಮತ್ತೊಂದು ಕಬೋರ್ಡ್ನಲ್ಲಿ ಸಿಕ್ಕಿತ್ತು. ಈ ವಿಚಾರವನ್ನು ರೆಹಮಾನ್ ಸಂದರ್ಶನದಲ್ಲಿ ಈ ಮೊದಲು ಹೇಳಿಕೊಂಡಿದ್ದರು.
Congratulations @guneetm and @EarthSpectrum you’ve opened the flood gates of inspiration for indian film makers! Jai ho ??????? #bosswomen https://t.co/WICYOqMaq6
— A.R.Rahman (@arrahman) March 13, 2023
Congratulations @guneetm and @EarthSpectrum you’ve opened the flood gates of inspiration for indian film makers! Jai ho ??????? #bosswomen https://t.co/WICYOqMaq6
— A.R.Rahman (@arrahman) March 13, 2023
ಆಸ್ಕರ್ ಗೆದ್ದ ಎಂ.ಎಂ ಕೀರವಾಣಿ ಹಾಗೂ ಕಾರ್ತಿಕಿ ಗೊನ್ಸಾಲ್ವೆಸ್ ಅವರಿಗೆ ರೆಹಮಾನ್ ಅವರು ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಒರಿಜಿನಲ್ ಸಾಂಗ್ ಹಾಗೂ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಭಾರತಕ್ಕೆ ಪ್ರಶಸ್ತಿ ತಂದ ಮೊದಲಿಗರು ಎನ್ನುವ ಖ್ಯಾತಿ ಇವರಿಗೆ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 am, Tue, 14 March 23