ಸಲ್ಮಾನ್ ಖಾನ್ ಸಹೋದರ, ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ (Arbaz Khan) ಅವರು ಎರಡನೇ ಮದುವೆ ಆಗಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಅವರು ಮದುವೆ ಆಗಿದ್ದಾರೆ. ಭಾನುವಾರ (ಡಿಸೆಂಬರ್ 24) ರಾತ್ರಿ ಈ ವಿವಾಹ ನಡೆದಿದೆ. ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಹಾಜರಿ ಹಾಕಿದ್ದು, ಸಿಂಪಲ್ ಆಗಿ ಸಮಾರಂಭ ನಡೆದಿದೆ. ಅರ್ಬಾಜ್ ಹಾಗೂ ಮಲೈಕಾ ಅವರ ಮಗ ಅರ್ಹಾನ್ ಅವರು ಮದುವೆಗೆ ಹಾಜರಿ ಹಾಕಿ ಪೋಸ್ ಕೊಟ್ಟಿದ್ದಾರೆ. ಅವರು ನವ ದಂಪತಿಗೆ ಶುಭಕೋರಿದ್ದಾರೆ.
ಅರ್ಬಾಜ್ ಹಾಗೂ ಶುರಾ ಅವರು ಮದುವೆ ಬಳಿಕ ಪೋಸ್ ಕೊಟ್ಟಿದ್ದಾರೆ. ಇವರ ಜೊತೆ ಅರ್ಹಾನ್ ಕೂಡ ಇದ್ದಾರೆ. ಡಿವೋರ್ಸ್ ಬಳಿಕವೂ ಅರ್ಬಾಜ್ ಜೊತೆ ಮಲೈಕಾ ಸಂಪರ್ಕದಲ್ಲಿ ಇದ್ದಾರೆ. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಆದರೆ, ಅವರು ಮದುವೆಗೆ ಹಾಜರಿ ಹಾಕಿಲ್ಲ.
ಶುರಾ ಅವರು ರವೀನಾ ಟಂಡನ್ ಹಾಗೂ ಅವರ ಮಗಳು ರಾಶಾ ತಡಾನಿ ಅವರ ಮೇಕಪ್ ಆರ್ಟಿಸ್ಟ್ ಆಗಿ ಶುರಾ ಕೆಲಸ ಮಾಡುತ್ತಿದ್ದಾರೆ. ‘ಪಾಟ್ನಾ ಶುಕ್ಲಾ’ ಸಿನಿಮಾದಲ್ಲಿ ಅರ್ಬಾಜ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರವೀನಾ ಕೂಡ ನಟಿಸಿದ್ದಾರೆ. ಇಬ್ಬರ ಮಧ್ಯೆ ಸೆಟ್ನಲ್ಲಿ ಪ್ರೀತಿ ಮೂಡಿತ್ತು.
ಇದನ್ನೂ ಓದಿ: ಸಲ್ಮಾನ್ ಖಾನ್ ದಾಂಪತ್ಯದ ಗುಟ್ಟನ್ನು ಹೇಳುವುದು; ನಾನು ಸ್ಟಾರ್ ಆಗುವುದು ಹೇಗೆ ಎಂಬ ಪಾಠ ಮಾಡುವುದು ಎರಡೂ ಒಂದೇ!: ಅರ್ಬಾಜ್ ಖಾನ್
ರವೀನಾ ಟಂಡನ್ ಹಾಗೂ ರಾಶಾ ಅವರು ಈ ಮದುವೆಗೆ ಹಾಜರಿ ಹಾಕಿದ್ದರು. ಸಲ್ಮಾನ್ ಖಾನ್, ಸೋಹೈಲ್ ಖಾನ್, ಸಲೀಮ್ ಖಾನ್, ಸಲ್ಮಾನ್ ಖಾನ್ ಮೊದಲಾದವರು ಈ ಮದುವೆಗೆ ಆಗಮಿಸಿದ್ದರು. ಅರ್ಪಿತಾ ಖಾನ್ ಅವರ ಮನೆಯಲ್ಲಿ ಮದುವೆ ಕಾರ್ಯಗಳು ನಡೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Mon, 25 December 23