AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ವರ್ಷ ವಯಸ್ಸಿನ ಅಂತರ ಇರುವ ಅರ್ಜುನ್​ ಕಪೂರ್​-ಮಲೈಕಾ ಅರೋರಾ ಮದುವೆ ಆಗ್ತಾರಾ?

‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದ ಹೊಸ ಎಪಿಸೋಡ್​ನಲ್ಲಿ ಅರ್ಜುನ್​ ಕಪೂರ್​ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ಕರಣ್​ ಜೋಹರ್​ ಅವರು ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಮಲೈಕಾ ಅರೋರಾ ಜೊತೆಗಿನ ಮದುವೆಯ ಪ್ಲ್ಯಾನ್​, ಜನರಿಂದ ಎದುರಾಗುವ ಟ್ರೋಲ್​ ಮುಂತಾದ ವಿಚಾರಗಳ ಬಗ್ಗೆ ಅರ್ಜುನ್​ ಮಾತಾಡಿದ್ದಾರೆ.

12 ವರ್ಷ ವಯಸ್ಸಿನ ಅಂತರ ಇರುವ ಅರ್ಜುನ್​ ಕಪೂರ್​-ಮಲೈಕಾ ಅರೋರಾ ಮದುವೆ ಆಗ್ತಾರಾ?
ಮಲೈಕಾ ಅರೋರಾ, ಅರ್ಜುನ್​ ಕಪೂರ್​
ಮದನ್​ ಕುಮಾರ್​
|

Updated on: Dec 14, 2023 | 11:04 AM

Share

ನಟ ಅರ್ಜುನ್​ ಕಪೂರ್​ (Arjun Kapoor) ಅವರು ಸಿನಿಮಾಗಳ ಕಾರಣದಿಂದ ಸುದ್ದಿ ಆಗಿದ್ದಕ್ಕಿಂತಲೂ ವೈಯಕ್ತಿಕ ಕಾರಣಕ್ಕೆ ಸುದ್ದಿ ಆಗಿದ್ದೇ ಹೆಚ್ಚು. ಮಲೈಕಾ ಅರೋರಾ (Malaika Arora) ಜೊತೆಗಿನ ಅವರ ರಿಲೇಷನ್​ಶಿಪ್​ ಎಲ್ಲರ ಕಣ್ಣು ಕುಕ್ಕುತ್ತಿದೆ. ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರ ಇದೆ. ಇವರಿಬ್ಬರು ಮದುವೆ ಆಗುತ್ತಾರೋ ಇಲ್ಲವೋ ಎಂಬುದು ಅನೇಕರ ಪ್ರಶ್ನೆ. ಯಾಕೆಂದರೆ, ಒಂದಷ್ಟು ವರ್ಷಗಳಿಂದ ಮಲೈಕಾ ಅರೋರಾ ಮತ್ತು ಅರ್ಜುನ್​ ಕಪೂರ್​ ಅವರು ಸುತ್ತಾಡುತ್ತಿದ್ದಾರೆಯೇ ಹೊರತು ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಈಗ ಕರಣ್​ ಜೋಹರ್​ (Karan Johar) ಅವರು ಆ ವಿಚಾರದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಅರ್ಜುನ್​ ಕಪೂರ್​ ಉತ್ತರ ನೀಡಿದ್ದಾರೆ.

‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದ ಹೊಸ ಎಪಿಸೋಡ್​ನಲ್ಲಿ ಅರ್ಜುನ್​ ಕಪೂರ್​ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ಕರಣ್​ ಜೋಹರ್​ ಅವರು ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ನಮ್ಮ ರಿಲೇಷನ್​ಶಿಪ್​ ಆ ಹಂತಕ್ಕೆ ಬಂದಾಗ ನಾವು ಒಟ್ಟಿಗೆ ಆ ಬಗ್ಗೆ ಮಾತನಾಡುತ್ತೇವೆ. ಸದ್ಯಕ್ಕೆ ನಾನು ಖುಷಿಯಾಗಿದ್ದೇನೆ. ಮದುವೆ ಬಗ್ಗೆ ಮಾತನಾಡಲು ನನಗೆ ಈಗ ಇಷ್ಟ ಇಲ್ಲ. ಅದರ ಬಗ್ಗೆ ನಾನೊಬ್ಬನೇ ಮಾತನಾಡುವುದು ನ್ಯಾಯವಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೋಲ್ಡ್ ಫೋಟ್ ಮೂಲಕ ಗಮನ ಸೆಳೆವ ಮಲೈಕಾ ನಡೆ ಈಗ ನಿಗೂಢ

ಮಲೈಕಾ ಅರೋರಾ ಅವರಿಗೆ 50 ವರ್ಷ ವಯಸ್ಸು. ಅರ್ಜುನ್​ ಕಪೂರ್​ ವಯಸ್ಸು 38 ವರ್ಷ. ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ಆಗಾಗ ಟ್ರೋಲ್​ ಮಾಡಲಾಗುತ್ತದೆ. ಆ ಬಗ್ಗೆಯೂ ಅರ್ಜುನ್​ ಕಪೂರ್​ ಮಾತನಾಡಿದ್ದಾರೆ. ಮೊದಲೆಲ್ಲ ಅವರಿಗೆ ಇದರಿಂದ ಕಿರಿಕಿರಿ ಆಗುತ್ತಿತ್ತು. ಟ್ರೋಲ್​ಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು. ಆದರೆ ಈಗ ಪ್ರತಿಕ್ರಿಯಿಸುವುದನ್ನು ಅವರು ನಿಲ್ಲಿಸಿದ್ದಾರಂತೆ.

ಇದನ್ನೂ ಓದಿ: ಮಲೈಕಾ ಅರೋರಾಗೆ 50 ವರ್ಷ; ಅರ್ಧ ಶತಕ ಕಳೆದರೂ ಮಾಸದ ಬ್ಯೂಟಿ

ಮಲೈಕಾ ಅರೋರಾ ಅವರು ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುತ್ತಾರೆ. 50ನೇ ವಯಸ್ಸಿನಲ್ಲಿ ಕೂಡ ಅವರು ಹದಿಹರೆಯದವರೂ ನಾಚುವಂತೆ ಫಿಟ್ನೆಸ್​ ಕಾಪಾಡಿಕೊಂಡಿದ್ದಾರೆ. ಅನೇಕ ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಅವುಗಳ ಪ್ರಚಾರದಿಂದ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತದೆ. ಆಗಾಗ ಹೊಸ ಫೋಟೋಶೂಟ್​ ಮಾಡಿಸಿ ಅವರು ಹಂಚಿಕೊಳ್ಳುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​