AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಸಿನಿಮಾದಲ್ಲಿ ಹೈಲೈಟ್ ಆದ ಈ ಪಾತ್ರ ಮಾಡಿದವರು ಯಾರು?

ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿ ಫರ್ಜಾನಾ ಸೈಯದ್. ಇತ್ತೀಚೆಗೆ ಅವರು ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ಸಲಾರ್’ ಸಿನಿಮಾದಲ್ಲಿ ಹೈಲೈಟ್ ಆದ ಈ ಪಾತ್ರ ಮಾಡಿದವರು ಯಾರು?
ಫರ್ಜಾನಾ ಸಯ್ಯದ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 25, 2023 | 12:41 PM

Share

‘ಸಲಾರ್’ ಚಿತ್ರ (Salaar Movie) ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ ದಾಖಲೆಯ ಕಲೆಕ್ಷನ್ ಮೂಲಕ ಸಿನಿಮಾ ಅಬ್ಬರಿಸುತ್ತಿದೆ. ‘ಸಲಾರ್’ ಚಿತ್ರ ಭಾರತದ ಜೊತೆಗೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ‘ಸಲಾರ್’ ಸಿನಿಮಾ ಮೂರು ದಿನಕ್ಕೆ 200 ಕೋಟಿ ರೂಪಾಯಿ ಗಳಿಸಿದೆ. ವಿಶ್ವದಾದ್ಯಂತ ಈ ಚಿತ್ರ 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದರೊಂದಿಗೆ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಸೈಯದ್ ಫರ್ಜಾನಾ ಪಾತ್ರ ಗಮನ ಸೆಳೆದಿದೆ.

‘ಸಲಾರ್’ ಸಿನಿಮಾದಲ್ಲಿ ಕಾಟೇರಮ್ಮ ದೇವಿಯ ಎದುರು ಫೈಟ್ ಸೀಕ್ವೆನ್ಸ್ ಎಲ್ಲರಿಗೂ ಇಷ್ಟವಾಗಲಿದೆ. ಈ ದೃಶ್ಯದಲ್ಲಿ ಸುರಭಿ ಎಂಬ ಹುಡುಗಿಗಾಗಿ ಕಥಾ ನಾಯಕ ಹೋರಾಡುತ್ತಾನೆ. ಆ ಫೈಟ್ ಸಿನಿಮಾದ ಹೈಲೈಟ್ ಆಯಿತು. ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿ ಫರ್ಜಾನಾ ಸೈಯದ್. ಇತ್ತೀಚೆಗೆ ಅವರು ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸೈಯದ್ ಫರ್ಜಾನಾಗೆ ಒಳ್ಳೆಯ ಕ್ರೇಜ್ ಸಿಕ್ಕಿದೆ. ಝಾನ್ಸಿ ವೆಬ್ ಸರಣಿಯಲ್ಲಿ ಫರ್ಜಾನಾ ಕಾಣಿಸಿಕೊಂಡಿದ್ದರು. ಐಪಿಎಲ್ ಜಾಹೀರಾತಿನಲ್ಲಿ ಅವರು ನಟಿಸಿದ್ದರು. ಕೆಲವು ಶಾಲಾ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ‘ಸಲಾರ್’ ಚಿತ್ರದಲ್ಲಿ ಕಾಟೇರಮ್ಮ ಎದುರು ನಡೆಯುವ ಹೊಡೆದಾಟದ ದೃಶ್ಯದಲ್ಲಿ ಸೈಯದ್ ಹೈಲೈಟ್ ಆಗಿದ್ದರು. ಅವರಿಗೆ ಬೇಡಿಕೆ ಹೆಚ್ಚಿದೆ. ಬಾಲ ಕಲಾವಿದೆಯಾಗಿ ಅವರು ಗಮನ ಸೆಳೆದಿದ್ದಾರೆ.

ಸುರಭಿ ಪಾತ್ರಕ್ಕಾಗಿ ಸೈಯದ್ ಫರ್ಜಾನಾ ಜೊತೆ ಅನೇಕರು ಆಡಿಷನ್ ನೀಡಿದ್ದರು. ‘ಸಲಾರ್ ಸಿನಿಮಾ ಮುಗಿಸಿ ಶಾಲೆಗೆ ಹೋದಾಗ ನನ್ನ ಶಿಕ್ಷಕರು, ಸ್ನೇಹಿತರು ಅಭಿನಂದಿಸಿದ್ದಾರೆ. ಇದು ತುಂಬಾ ಖುಷಿ ನೀಡಿದೆ’ ಎಂದು ಸೈಯದ್ ಫರ್ಜಾನಾ ಹೇಳಿದ್ದಾರೆ.

ಸುರಭಿ ಆಡಿಷನ್‌ಗೆ ಆಯ್ಕೆ ಆದ ನಂತರ ಇದು ಸಣ್ಣ ಪಾತ್ರ ಎಂದು ಅವರು ಭಾವಿಸಿದ್ದರು. ಆದರೆ ಸೆಟ್‌ಗೆ ಹೋದ ನಂತರ ಅವರಿಗೆ ಈ ಪಾತ್ರದ ತೂಕ ಗೊತ್ತಾಯಿತು. ‘ನನ್ನ ಪಾತ್ರ ಸಣ್ಣದು ಎಂದುಕೊಂಡಿದ್ದೆ. ಆದರೆ, ಪ್ರಭಾಸ್ ಅವರೊಂದಿಗಿನ ತೆರೆ ಹಂಚಿಕೊಳ್ಳುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನನ್ನ ಅಭಿನಯವನ್ನು ಶ್ಲಾಘಿಸಿದರು. ಥಿಯೇಟರ್‌ನಲ್ಲಿ ಜನರಿಗೆ ಈ ದೃಶ್ಯ ಇಷ್ಟವಾಗುತ್ತವೆ ಎಂದು ಹೇಳಿದ್ದರು’ ಎಂಬುದಾಗಿ ಫರ್ಜಾನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಸಲಾರ್’ ಸಿನಿಮಾದಲ್ಲಿ ಮಿಸ್ ಆಗಿದೆ ಒಂದು ಪ್ರಮುಖ ವಿಚಾರ; ಆ ದೃಶ್ಯ ಯಾಕಿಲ್ಲ?

‘ಸಲಾರ್’ ಸಿನಿಮಾದ ಕಥೆಗೆ ಕಾಟೇರಮ್ಮ ಫೈಟ್ ಟ್ವಿಸ್ಟ್ ನೀಡುತ್ತದೆ. ಹೀಗಾಗಿ, ಸೈಯದ್ ಫರ್ಜಾನಾ ಪಾತ್ರ ಹೈಲೈಟ್ ಆಗಿದೆ. ‘ಸಲಾರ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶನ ಇರುವ ಈ ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ
ಬಿಗ್ ಬಾಸ್​​ನಿಂದ ಬಂದ ರಾಶಿಕಾ ಶೆಟ್ಟಿಗೆ ಸರ್​​​ಪ್ರೈಸ್ ಪಾರ್ಟಿ; ಇಲ್ಲಿದೆ
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಬುರ್ಖಾ ಹಾಕಿಕೊಂಡು ಓಡಾಡಿದ್ರೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಅತ್ಯಾಚಾರ ಆರೋಪಿ
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್ 
ಜನರ ಸಪೋರ್ಟ್ ಹೇಗಿದೆ ಎಂಬುದನ್ನು ಸ್ಪರ್ಧಿಗಳಿಗೆ ತೋರಿಸಿದ ಬಿಗ್ ಬಾಸ್ 
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ