‘ಸಲಾರ್’ ಸಿನಿಮಾದಲ್ಲಿ ಮಿಸ್ ಆಗಿದೆ ಒಂದು ಪ್ರಮುಖ ವಿಚಾರ; ಆ ದೃಶ್ಯ ಯಾಕಿಲ್ಲ?
ವಿಶೇಷ ಸಾಂಗ್ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

‘ಸಲಾರ್’ ಸಿನಿಮಾ (Salaar Movie) ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಕೇವಲ ಮೂರು ದಿನಕ್ಕೆ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಅನಾಯಾಸವಾಗಿ 1,000 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಒಂದು ವಿಶೇಷ ಐಟಂ ಸಾಂಗ್ ಇತ್ತು. ಆದರೆ, ಇದನ್ನು ಕಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಎರಡನೇ ಪಾರ್ಟ್ನಲ್ಲಿ ಈ ಸಾಂಗ್ ಇರಲಿದೆಯೇ ಎನ್ನುವ ಕುತೂಹಲ ಮೂಡಿದೆ.
‘ಕೆಜಿಎಫ್’ ಚಿತ್ರದಲ್ಲಿ ವಿಶೇಷ ಸಾಂಗ್ ಇತ್ತು. ಈ ಸಾಂಗ್ನಿಂದ ಸಿನಿಮಾಗೆ ಮೈಲೇಜ್ ಸಿಕ್ಕಿತ್ತು. ಅದೇ ರೀತಿ ‘ಸಲಾರ್’ ಸಿನಿಮಾದಲ್ಲಿಯೂ ಐಟಂ ಸಾಂಗ್ ಇದೆ ಎಂದು ಹೇಳಲಾಗಿತ್ತು. ಸಿಮ್ರಾತ್ ಕೌರ್ ಅವರು ಐಟಂ ಸಾಂಗ್ನಲ್ಲಿ ಇದ್ದರು. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟ್ ಮಾಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ಈ ಸಿನಿಮಾ ನಿಜಕ್ಕೂ ಶೂಟ್ ಮಾಡಲಾಗಿತ್ತೋ ಅಥವಾ ಶೂಟ್ ಮಾಡಿಲ್ಲವೋ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಒಂದೊಮ್ಮೆ ನಿಜಕ್ಕೂ ಶೂಟ್ ಮಾಡಿದ್ದರೆ ಅದನ್ನು ಎರಡನೇ ಪಾರ್ಟ್ನಲ್ಲಿ ಸೇರಿಸಲಾಗುತ್ತೆದೆಯೋ ಎನ್ನುವ ಅನುಮಾನ ಮೂಡಿದೆ. ‘ಶೌರ್ಯಂಗ ಪರ್ವಮ್’ ಎಂದು ಎರಡನೇ ಪಾರ್ಟ್ಗೆ ಹೆಸರು ಇಡಲಾಗಿದೆ. ಈ ಸಿನಿಮಾ ಶೂಟಿಂಗ್ ಸದ್ಯಕ್ಕಂತೂ ಆರಂಭ ಆಗುವುದಿಲ್ಲ.
ಇದನ್ನೂ ಓದಿ: ‘ಪ್ರತಾಪ್ ಬೆನ್ನಿಗೆ ನಮ್ರತಾ ಚೂರಿ ಹಾಕಿದ್ರು’; ಬಿಗ್ ಬಾಸ್ ಪ್ರೋಮೋ ನೋಡಿ ಫ್ಯಾನ್ಸ್ ಶಾಕ್
ಡಿಸೆಂಬರ್ 22ರಂದು ‘ಸಲಾರ್’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ ಭಾರತದಲ್ಲಿ 90 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ 178 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಎರಡನೇ ದಿನ 56 ಕೋಟಿ ರೂಪಾಯಿ ಹಾಗೂ ಮೂರನೇ ದಿನ 62 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಭಾರತದ ಗಳಿಕೆ 209 ಕೋಟಿ ರೂಪಾಯಿ ಹಾಗೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ