ಸ್ವಾತಂತ್ರ್ಯಾ ನಂತರ ಚಿತ್ರರಂಗದಿಂದ ಹಾಗೂ ಚಿತ್ರರಂಗದಲ್ಲಿ ಆದ ಬದಲಾವಣೆಗಳು ಏನು?
ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಭಾರತ ಚಿತ್ರರಂಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಅದಕ್ಕೂ ಮೊದಲೂ ಭಾರತ (India) ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಸ್ವಾತಂತ್ರ್ಯಾ ನಂತರ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಯಿತು. ಈಗ ನಮಗೆ ಸ್ವತಂತ್ರ ಸಿಕ್ಕು 75 ವರ್ಷ ಕಳೆದಿದೆ. ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು (Azadi Ka Amrit Mahotsav) ಆಚರಿಸಿಕೊಳ್ಳುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಭಾರತ ಚಿತ್ರರಂಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ನಮ್ಮ ಚಿತ್ರಗಳು ವಿದೇಶದಲ್ಲಿ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡುತ್ತಿವೆ ಅನ್ನೋದು ವಿಶೇಷ. ಭಾರತ ಚಿತ್ರರಂಗದಲ್ಲಿ ಆದ ಬದಲಾವಣೆಗಳು ಏನು ಹಾಗೂ ಚಿತ್ರರಂಗದಿಂದ ಸಮಾಜದ ಮೇಲಾದ ಪರಿಣಾಮಗಳೇನು ಎಂಬ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ
ಸ್ವಾತಂತ್ರ್ಯಾ ನಂತರ ಸಿನಿಮಾ ಎಂಬುದು ಸಮಾಜದಲ್ಲಿರುವ ಹುಳುಕನ್ನು ಎತ್ತಿ ಹಿಡಿಯಲು ಸಹಕಾರಿ ಆಯಿತು. ಅನೇಕ ಚಿತ್ರಗಳು ನಮ್ಮ ಸಮಾಜದಲ್ಲಿರುವ ಅನೇಕ ಅನಿಷ್ಟ ಪದ್ದತಿಗಳ ವಿರುದ್ಧ ಧ್ವನಿ ಎತ್ತಿದವು. ಸತಿ ಸಹಗಮನ ಪದ್ಧತಿ, ಜೀತ ಪದ್ಧತಿ, ದಲಿತರಿಗೂ ಸಮಾಜದಲ್ಲಿ ಆದ್ಯತೆ ಸಿಗಬೇಕು ಹೀಗೆ ಸಮಾಜದಲ್ಲಿರುವ ಸಾಕಷ್ಟು ಸಮಸ್ಯೆಗಳಿಗೆ ಸಿನಿಮಾ ಮೂಲಕ ಉತ್ತರ ಸಿಗುವ ಕೆಲಸ ಆಯಿತು. ಸಾಕಷ್ಟು ಹೋರಾಟಗಳಿಗೆ ಸಿನಿಮಾ ಮೂಲಕ ಕಿಚ್ಚು ಹತ್ತಿದ ಉದಾಹರಣೆ ಇದೆ.
ಸಂಸ್ಕೃತಿಯ ಪರಿಚಯ
ಭಾರತ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಸಿನಿಮಾಗಳಿಂದ ಆಗಿದೆ ಅನ್ನೋದು ವಿಶೇಷ. ಭಾರತದ ಪದ್ಧತಿಗಳು, ಭಾರತದ ಆಚಾರ-ವಿಚಾರ ಬೇರೆ ದೇಶಗಳಿಗೆ ಪರಿಚಯಗೊಂಡಿದೆ.
ತಾಂತ್ರಿಕ ಶ್ರೀಮಂತಿಕೆ
1947ರಿಂದ ಇಲ್ಲಿಯವರೆಗೆ ಭಾರತೀಯ ಸಿನಿಮಾಗಳ ಶೈಲಿ, ಸ್ಥಿತಿಗತಿ ಬದಲಾಗುತ್ತಲೇ ಬಂದವು. ವಿಶ್ವ ಮಟ್ಟದಲ್ಲಿ ನಾವು ಸ್ಪರ್ಧೆ ಮಾಡುತ್ತಿದ್ದೇವೆ. ತಾಂತ್ರಿಕವಾಗಿ ನಾವು ಶ್ರೀಮಂತರಾಗುತ್ತಿದ್ದೇವೆ. ಇತ್ತೀಚೆಗೆ ತೆರೆಗೆ ಬಂದ ‘ಆರ್ಆರ್ಆರ್’, ‘ಕೆಜಿಎಫ್ 2’ ಮೊದಲಾದ ಚಿತ್ರಗಳು ತಾಂತ್ರಿಕವಾಗಿ ಶ್ರೀಮಂತವಾಗಿರುವುದರ ಜತೆಗೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿವೆ.
ಪ್ರಾದೇಶಿಕ ಸಿನಿಮಾಗಳಿಗೂ ಬೇಡಿಕೆ
ಈ ಮೊದಲು ಬಾಲಿವುಡ್ ಚಿತ್ರರಂಗವನ್ನು ಭಾರತದ ಚಿತ್ರರಂಗ ಎಂದೇ ಬಣ್ಣಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದೆ. ಪ್ರಾದೇಶಿಕ ಚಿತ್ರಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳು ನೂರಾರು ಕೋಟಿ ಬಿಸ್ನೆಸ್ ಮಾಡುತ್ತಿವೆ.
ಹಾಲಿವುಡ್ ಮಂದಿಯ ಗಮನ ಸೆಳೆದ ನಮ್ಮ ಚಿತ್ರರಂಗ
ಭಾರತದ ಚಿತ್ರಗಳು ವಿಶ್ವ ಮಟ್ಟದಲ್ಲಿ ಮಿಂಚುತ್ತಿವೆ. ಹಾಲಿವುಡ್ ಮಂದಿಯೂ ನಮ್ಮ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ಭಾರತದ ಸಿನಿಮಾಗಳಿಗೆ ಇದೆ. ಇತ್ತೀಚೆಗೆ ತೆರೆಗೆ ಬಂದ ‘ಆರ್ಆರ್ಆರ್’, ‘ಕೆಜಿಎಫ್ 2’ ಚಿತ್ರಗಳು ಹಾಲಿವುಡ್ ಮಂದಿಯ ಗಮನ ಸೆಳೆದಿವೆ.