ವಿಜಯ್​ ದೇವರಕೊಂಡ ತಮ್ಮನಿಗೆ ತೆರೆಯಿತು ಅದೃಷ್ಟದ ಬಾಗಿಲು; ‘ಬೇಬಿ’ ಗೆದ್ದ ಬಳಿಕ 2 ದೊಡ್ಡ ಬ್ಯಾನರ್​ನಿಂದ ಅವಕಾಶ

Anand Deverakonda Next Movie: ಆನಂದ್​ ದೇವರಕೊಂಡ ಅವರು ‘ಬೇಬಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರ ಹಿಟ್​ ಆದ ಬಳಿಕ ಅವರ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ನಿರ್ಮಾಪಕರು ಆಸಕ್ತಿ ತೋರಿಸುತ್ತಿದ್ದಾರೆ.

ವಿಜಯ್​ ದೇವರಕೊಂಡ ತಮ್ಮನಿಗೆ ತೆರೆಯಿತು ಅದೃಷ್ಟದ ಬಾಗಿಲು; ‘ಬೇಬಿ’ ಗೆದ್ದ ಬಳಿಕ 2 ದೊಡ್ಡ ಬ್ಯಾನರ್​ನಿಂದ ಅವಕಾಶ
ಆನಂದ್​ ದೇವರಕೊಂಡ
Follow us
ಮದನ್​ ಕುಮಾರ್​
|

Updated on: Aug 02, 2023 | 6:54 PM

ಫಿಲ್ಮಿ ಕುಟುಂಬದ ಹಿನ್ನೆಲೆಯಿಂದ ಬಂದವರಿಗೆ ಚಿತ್ರರಂಗದಲ್ಲಿ ಬಹಳ ಬೇಗ ಅವಕಾಶ ಸಿಗುತ್ತದೆ. ಆದರೆ ಯಶಸ್ಸು ಸಿಗುವುದು ಅಷ್ಟು ಸುಲಭವಲ್ಲ. ಗೆಲುವು ಪಡೆಯಬೇಕು ಎಂದರೆ ಪರಿಶ್ರಮದ ಜೊತೆಗೆ ತಾಳ್ಮೆಯೂ ಬೇಕು. ನಟ ವಿಜಯ್​ ದೇವರಕೊಂಡ (Vijay Deverakonda) ಅವರು ತೆಲುಗು ಚಿತ್ರರಂಗದಲ್ಲಿ ಸ್ಟಾರ್​ ನಟನಾಗಿ ಬೆಳೆದಿದ್ದಾರೆ. ಅವರ ಸಹೋದರ ಆನಂದ್​ ದೇವರಕೊಂಡ (Anand Deverakonda) ಅವರು ಇತ್ತೀಚೆಗೆ ಬಿಡುಗಡೆಯಾದ ‘ಬೇಬಿ’ ಸಿನಿಮಾದ ಮೂಲಕ ಮೊದಲ ಬಾರಿ ದೊಡ್ಡ ಗೆಲುವು ಕಂಡಿದ್ದಾರೆ. ತೆಲಂಗಾಣ, ಆಂಧ್ರ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ‘ಬೇಬಿ’ ಸಿನಿಮಾ (Baby Movie) ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಬೆನ್ನಲ್ಲೇ ಆನಂದ್​ ದೇವರಕೊಂಡ ಅವರಿಗೆ ಒಳ್ಳೊಳ್ಳೆಯ ಅವಕಾಶಗಳು ಹರಿದುಬರಲು ಆರಂಭಿಸಿವೆ. ಅಣ್ಣ ರೀತಿ ತಮ್ಮನಿಗೂ ಈಗ ಸ್ಟಾರ್​ ಪಟ್ಟ ಸಿಕ್ಕಂತಾಗಿದೆ.

ಆನಂದ್​ ದೇವರಕೊಂಡ ಅವರು ‘ಬೇಬಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಸಾಯಿ ರಾಜೇಶ್​ ನಿರ್ದೇಶನ ಮಾಡಿದ್ದಾರೆ. ವೈಷ್ಣವಿ ಚೈತನ್ಯ, ವಿರಾಜ್​ ಅಶ್ವಿನ್​ ಅವರು ಕೂಡ ಈ ಸಿನಿಮಾದಲ್ಲಿ ಆನಂದ್​ ದೇವರಕೊಂಡ ಜೊತೆ ತೆರೆ ಹಂಚಿಕೊಂಡಿದ್ದಾರೆ. ಎಲ್ಲರ ನಟನೆಗೂ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಈ ಸಿನಿಮಾ ಗೆದ್ದಿದ್ದೇ ತಡ, ಆನಂದ್​ ದೇವರಕೊಂಡ ಅವರ ಜೊತೆ ಸಿನಿಮಾ ಮಾಡಲು ದೊಡ್ಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳು ಆಸಕ್ತಿ ತೋರಿಸುತ್ತಿವೆ.

ಇದನ್ನೂ ಓದಿ: Baby Movie Collection: ‘ಅರ್ಜುನ್​ ರೆಡ್ಡಿ’ ಚಿತ್ರದ ಲೈಫ್​ಟೈಮ್​ ಗಳಿಕೆ ಮೀರಿಸಿದ ‘ಬೇಬಿ’; ಅಣ್ಣನ ರೀತಿಯೇ ಮಿಂಚಿದ ಆನಂದ್​ ದೇವರಕೊಂಡ

ಟಾಲಿವುಡ್​ನಲ್ಲಿ ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ತನ್ನದೇ ಛಾಪು ಮೂಡಿಸಿದೆ. ‘ಪುಷ್ಪ’, ‘ಉಪ್ಪೆನಾ’, ‘ವೀರ ಸಿಂಹ ರೆಡ್ಡಿ’ ಮುಂತಾದ ಸಿನಿಮಾಗಳನ್ನು ನಿರ್ಮಿಸಿ ಲಾಭ ಕಂಡ ಈ ಸಂಸ್ಥೆಯ ಜೊತೆಗೆ ಸಿನಿಮಾ ಮಾಡಬೇಕು ಎಂದು ಎಲ್ಲ ಕಲಾವಿದರೂ ಬಯಸುತ್ತಾರೆ. ಈಗ ಆನಂದ್​ ದೇವರಕೊಂಡ ಅವರಿಗೆ ಅಂಥ ಚಾನ್ಸ್​ ಸಿಕ್ಕಿದೆ. ನಿರ್ದೇಶಕ ವಿನೋದ್​ ಅನಂತೋಜು ಮತ್ತು ಆನಂದ್​ ದೇವರಕೊಂಡ ಕಾಂಬಿನೇಷನ್​ನ ಹೊಸ ಸಿನಿಮಾಗೆ ಬಂಡವಾಳ ಹೂಡಲು ‘ಮೈತ್ರಿ ಮೂವೀ ಮೇಕರ್ಸ್​’ ಮುಂದೆ ಬಂದಿದೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ: Baby Movie: ತಮ್ಮನ ‘ಬೇಬಿ’ ಸಿನಿಮಾ ನೋಡಿಕೊಂಡು ಬಂದು ಅಚ್ಚರಿಯ ಹೇಳಿಕೆ ನೀಡಿದ ವಿಜಯ್​ ದೇವರಕೊಂಡ

ಕಾಲಿವುಡ್​ನಲ್ಲಿ ‘ಸ್ಟುಡಿಯೋ ಗ್ರೀನ್​’ ಸಂಸ್ಥೆ ಮೂಲಕ ಗಮನಾರ್ಹ ಸಿನಿಮಾಗಳು ಮೂಡಿಬಂದಿವೆ. ಆನಂದ್​ ದೇವರಕೊಂಡ ಅವರ ಹೊಸ ಸಿನಿಮಾವನ್ನು ನಿರ್ಮಿಸಲು ‘ಸ್ಟುಡಿಯೋ ಗ್ರೀನ್​’ ಸಂಸ್ಥೆಯ ಜ್ಞಾನವೇಲ್​ ರಾಜ ಅವರು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ‘ಬೇಬಿ’ ಸೂಪರ್​ ಹಿಟ್​ ಆದ ಬಳಿಕ ಆನಂದ್​ ದೇವರಕೊಂಡ ಅವರ ಅದೃಷ್ಟದ ಬಾಗಿಲು ತೆರೆದಿದೆ ಎಂದೇ ಹೇಳಬಹುದು. ‘ಬೇಬಿ’ ಸಿನಿಮಾವನ್ನು ನೋಡಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​ ಮುಂತಾದ ಸೆಲೆಬ್ರಿಟಿಗಳು ಭೇಷ್​ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.