
ಯಾರು ಯಾವಾಗ ಫೇಮಸ್ ಆಗುತ್ತಾರೆ ಎಂದು ಹೇಳೋಕೆ ಸಾಧ್ಯವಿಲ್ಲ. ಕೆಟ್ಟ ರೀತಿಯಲ್ಲಿ ಇರಲಿ, ಒಳ್ಳೆಯ ರೀತಿಯಲ್ಲಿ ಇರಲಿ ಜನಪ್ರಿಯತೆ ಪಡೆಯಬೇಕು ಎನ್ನುವ ಹುಮ್ಮಸ್ಸು ಕೆಲವರಿಗೆ ಬಂದರೆ ಮುಗಿಯಿತು. ಅವರು ಹೇಗಾದರೂ ಸರಿ ಸುದ್ದಿ ಆಗಬೇಕು ಎಂದು ಪ್ರಯತ್ನಿಸುತ್ತಾರೆ. ಈಗ ಪಾಕಿಸ್ತಾನದ ವ್ಯಕ್ತಿಯ ಕಥೆಯೂ ಹಾಗೆಯೇ ಆಗಿದೆ. ಕ್ರಿಕೆಟರ್ ಆಗಿದ್ದ ಚಾಹತ್ ಫತೇಹಿ ಅಲಿ ಖಾನ್ (Chahat Fateh Ali Khan) ಅವರು ಸಿಂಗರ್ ಆಗಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅವರ ಕರ್ಕಶ ಧ್ವನಿಗೆ ನೆಟ್ಟಿಗರು ರೋಸಿ ಹೋಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನೀವು ರೀಲ್ಸ್ ನೋಡುತ್ತೀರಿ ಎಂದಾದರೆ ನಿಮಗೆ ‘ಬದೋ ಬದಿ’ ಹಾಡಿನ ಬಗ್ಗೆ ಗೊತ್ತಿರುತ್ತದೆ. ಯುವತಿಯೊಬ್ಬಳ ಜೊತೆ ಚಾಹತ್ ಫತೇಹಿ ಅಲಿ ಖಾನ್ ಈ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಅವರು ಕರ್ಕಶ ಧ್ವನಿ ಹೈಲೈಟ್ ಆಗಿದೆ. ಇದನ್ನು ಮೀಮ್ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ‘ಬದೋ ಬದಿ’ ಹಾಡು ಯೂಟ್ಯೂಬ್ನಲ್ಲಿ ಏಪ್ರಿಲ್ 2024ರಲ್ಲೇ ರಿಲೀಸ್ ಆಗಿದ್ದು, 1.2 ಕೋಟಿ ಬಾರಿ ವೀಕ್ಷಣೆ ಕಂಡಿದೆ.
ಈ ಹಾಡಿಗೆ 71 ಸಾವಿರ ಕಮೆಂಟ್ಗಳು ಬಂದಿವೆ. ‘ಈ ಹಾಡನ್ನು ಕೊನೆಯವರೆಗೆ ನೋಡಿದವರಿಗೆ ನನ್ನ ಸೆಲ್ಯೂಟ್’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಡಿಸ್ಲೈಕ್ ಎಷ್ಟು ಸಿಕ್ಕಿದೆ ಎಂಬುದನ್ನು ಯೂಟ್ಯೂಬ್ನಲ್ಲಿ ತೋರಿಸಬೇಕಿತ್ತು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಚಾಹತ್ ಫತೇಹಿ ಅಲಿ ಖಾನ್ ಅವರು ಪಾಕಿಸ್ತಾನಿ ಗಾಯಕ. ಚಾಹತ್ ಅವರು ತಮ್ಮ ವೃತ್ತಿಯನ್ನು ಆರಂಭಿಸಿದ್ದು ಕ್ರಿಕೆಟರ್ ಆಗಿ. ಪಾಕಿಸ್ತಾನದ ಮೊದಲ ದರ್ಜೆ ಕ್ರಿಕೆಟ್ನಲ್ಲಿ ಅವರು ಆಡಿದ್ದರು. 1983-84ರ ಅವಧಿಯಲ್ಲಿ ಖುವಾಯದ್-ಇ-ಆಜಂ ಟ್ರೋಫಿಯಲ್ಲಿ ಚಾಹತ್ ಅವರು ಎರಡು ಮ್ಯಾಚ್ ಆಡಿ 16 ರನ್ ಗಳಿಸಿದರು.
ಇದನ್ನೂ ಓದಿ: ಪ್ಯಾರಾಚೂಟ್ ಇಲ್ಲದೆ 12,500 ಅಡಿಯಿಂದ ಜಿಗಿದ ವ್ಯಕ್ತಿ; ವಿಡಿಯೋ ವೈರಲ್
ನಂತರ ಚಾಹತ್ ಫತೇಹಿ ಅವರು ಇಂಗ್ಲೆಂಡ್ಗೆ ತೆರಳಿ 12 ವರ್ಷ ಕ್ಲಬ್ ಕ್ರಿಕೆಟ್ ಆಡಿದರು. ಕೊವಿಡ್ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಂಗ್ ರೆಕಾರ್ಡ್ ಮಾಡಿ ಪೋಸ್ಟ್ ಮಾಡಲು ಆರಂಭಿಸಿದರು. ಆ ಬಳಿಕ ಅವರು ಸಾಕಷ್ಟು ವೈರಲ್ ಆಗುತ್ತಾ ಬಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Tue, 14 May 24