‘ಮೆಟ್ ಗಾಲಾ’ದಲ್ಲಿ ‘ಲಾಪತಾ ಲೇಡಿಸ್’ ಚಿತ್ರದ ಫೂಲ್ ಕುಮಾರಿ; ಫೋಟೋ ವೈರಲ್
‘ಲಾಪತಾ ಲೇಡೀಸ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಿತಾಂಶಿ ಗೋಯಲ್ ಅವರು ಮೆಟ್ ಗಾಲಾ 2024ರಲ್ಲಿ ಭಾಗವಹಿಸಿದ್ದರು ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಸುಳ್ಳು. ಅಸಲಿಗೆ ಅವರು ಅಲ್ಲಿಗೆ ಹೋಗಿಲ್ಲ. ಕೆಲವರು ಒಳ್ಳೆಯ ಉದ್ದೇಶದಿಂದ ಈ ಫೋಟೋ ಎಡಿಟ್ ಮಾಡಿದ್ದಾರೆ.
‘ಮೆಟ್ ಗಾಲಾ 2024 (Met Gala 2024) ಕಾರ್ಯಕ್ರಮ ಮೇ 6ರಂದು ನಡೆದಿದೆ. ಇದರಲ್ಲಿ ಖ್ಯಾತ ಸೆಲೆಬ್ರಿಟಿ ಡಿಸೈನರ್ ಸಬ್ಯಸಾಚಿ ವಿನ್ಯಾಸದ ಸೀರೆಯನ್ನು ಧರಿಸಿ ಆಲಿಯಾ ಭಟ್ ಆಗಮಿಸಿದ್ದರು. ಅವರು ತಮ್ಮ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈವೆಂಟ್‌ಗಳ ಫೋಟೋಗಳನ್ನು ಹಂಚಿಕೊಳ್ಳುವಾಗ ಆಲಿಯಾ ಭಟ್ ಸೀರೆಯ ವಿಶೇಷತೆಯನ್ನು ಹೇಳಿಕೊಂಡಿದ್ದರು. ಭಾರತದಿಂದ ಮೆಟ್ ಗಾಲಾಗೆ ತೆರಳಿದ ಏಕೈಕ ಬಾಲಿವುಡ್ ನಟಿ ಆಲಿಯಾ ಭಟ್ ಎಂದು ಹೇಳಲಾಗಿತ್ತು. ಅಚ್ಚರಿ ಎಂದರೆ ‘ಲಾಪತಾ ಲೇಡೀಸ್’ ಸಿನಿಮಾದ ನಟಿ ನಿತಾಂಶಿ ಗೋಯಲ್ ಅವರು ಮೆಟ್ ಗಾಲಾದಲ್ಲಿರುವ ಫೋಟೋಗಳು ಕೂಡ ವೈರಲ್ ಆಗಿವೆ. ಹಾಗಂತ ಅವರು ನಿಜಕ್ಕೂ ಮೆಟ್ ಗಲಾಗೆ ಹೋಗಿಲ್ಲ. ಈ ಫೋಟೋಗಳನ್ನು ಎಡಿಟ್ ಮಾಡಲಾಗಿದೆ.
‘ಲಾಪತಾ ಲೇಡೀಸ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಿತಾಂಶಿ ಗೋಯಲ್ ಅವರು ಮೆಟ್ ಗಾಲಾ 2024ರಲ್ಲಿ ಭಾಗವಹಿಸಿದ್ದರು ಎಂದು ಹಲವರು ಪೋಸ್ಟ್ ಮಾಡಿದ್ದಾರೆ. ಆದರೆ, ಇದು ಸುಳ್ಳು. ಅಸಲಿಗೆ ಅವರು ಅಲ್ಲಿಗೆ ಹೋಗಿಲ್ಲ. ಕೆಲವರು ಒಳ್ಳೆಯ ಉದ್ದೇಶದಿಂದ ಈ ಫೋಟೋ ಎಡಿಟ್ ಮಾಡಿದ್ದಾರೆ.
‘ಲಾಪತಾ ಲೇಡಿಸ್’ ಚಿತ್ರದಲ್ಲಿ ಆರಂಭದಿಂದ ಕೊನೆಯವರೆಗೆ ಸೀರೆ ಉಟ್ಟೇ ಕಾಣಿಸುತ್ತಾರೆ ನಿತಾಂಶಿ. ಅವರು ಮಾಡಿದ ಫೂಲ್ ಕುಮಾರಿ ಪಾತ್ರ ಗಮನ ಸೆಳೆದಿದೆ. ಎಡಿಟ್ ಮಾಡಿದ ಫೋಟೋವನ್ನು ‘ಆಮಿರ್ ಖಾನ್ ಪ್ರೊಡಕ್ಷನ್’ ಸಂಸ್ಥೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಈ ಬಾರಿ ಮೆಟ್ ಗಲಾದಲ್ಲಿ ‘ಗಾರ್ಡನ್ ಆಫ್ ಟೈಮ್’ ಕಾನ್ಸೆಪ್ಟ್ ಇತ್ತು. ಹೀಗಾಗಿ, ‘ಗಾರ್ಡನ್ ಆಫ್ ಟೈಮ್ನಲ್ಲಿ ನಮ್ಮ ಅರಳುತ್ತಿರುವ ಫೂಲ್ (ಹೂವು)’ ಎಂದು ಕ್ಯಾಪ್ಶನ್ ನೀಡಿ ಈ ಫೋಟೋ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡ ‘ಲಾಪತಾ ಲೇಡೀಸ್’ ನಿರ್ದೇಶಕಿ ಕಿರಣ್ ರಾವ್
ನಿತಾಂಶಿ ಗೋಯಲ್‌ಗೆ ಈಗ 17 ವರ್ಷ. ‘ಲಾಪತಾ ಲೇಡಿಸ್’ನಲ್ಲಿ ಅವರು ನಿರ್ವಹಿಸಿದ ಪಾತ್ರ ಸಾರ್ವಜನಿಕರಿಂದ ಬಹಳ ಮೆಚ್ಚುಗೆ ಪಡೆದಿದೆ. ಆಗತಾನೇ ಮದುವೆ ಆದ ಹುಡುಗಿ ಕಳೆದು ಹೋಗುತ್ತಾಳೆ. ರೈಲ್ವೆ ನಿಲ್ದಾಣದಲ್ಲಿ ಆಕೆಗೆ ಒಂದು ಮಹಿಳೆಯ ಪರಿಚಯ ಆಗುತ್ತದೆ. ಅಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಾಳೆ. ಸಿನಿಮಾದಲ್ಲಿ ಹಲವು ಜೀವನ ಪಾಠಗಳನ್ನು ಹೇಳಲಾಗಿದೆ. ಸದ್ಯ ವೈರಲ್ ಆಗಿರುವ ಅವರ ಫೋಟೋ ನೋಡಿದ ಜನ ಈಗ ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ. ‘ನಮ್ಮ ಹೂವು ಅಲ್ಲಿ ಕಳೆಯೋದು ಬೇಡ’ ಎಂದಿದ್ದಾರೆ. ‘ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ, ನಮ್ಮ ಫೂಲ್’ ಎಂದು ಬರೆದಿದ್ದಾರೆ.
View this post on Instagram
ನನ್ನ ಪಾತ್ರಕ್ಕೆ ನಾನು ಹೀಗೆಯೇ ತಯಾರಿ ನಡೆಸಿದ್ದೇನೆ
‘ನಾನು ಸುಯಿ ಧಾಗಾ, ಬಾಲಿಕಾ ವಧು ಸಿನಿಮಾ ನೋಡಿದ್ದೇನೆ. ಈ ಮೂಲಕ ಭೋಜ್‌ಪುರಿ ಮಹಿಳೆಯರ ಬಗ್ಗೆ ತಿಳಿದುಕೊಂಡಿದ್ದೆ. ಅಲ್ಲಿನ ಹೆಂಗಸರು ಹೇಗಿದ್ದಾರೆ ಎಂಬುದನ್ನು ತಿಳಿಯಬೇಕಿತ್ತು. ಸಿನಿಮಾದ ಕಥೆ 2001ರದ್ದಾಗಿತ್ತು. ನಾನು ಜನಿಸಿದ್ದು 2007ರಲ್ಲಿ. ನಾನು ಆ ಯುಗವನ್ನೇ ನೋಡಿರಲಿಲ್ಲ. ದೇಹ ಭಾಷೆ ಸರಿಯಾಗಿ ಮೂಡಿಬರಬೇಕಿತ್ತು. ಇದನ್ನು ನಾನು ಬಯಸುತ್ತೇನೆ’ ಎಂದಿದ್ದಾರೆ ಅವರು. ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಾಣ ಮಾಡಿದ್ದರು. ಅವರ ಮಾಜಿ ಪತ್ನಿ ಕಿರಣ್ ರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:04 pm, Wed, 8 May 24