AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ: ದಿ ಎಪಿಕ್’ ಮೊದಲ ದಿನ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್​​ನಲ್ಲಿ ದಾಖಲೆ

Bahubali The Epic movie: ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಬಾಹುಬಲಿ 1 ಮತ್ತು 2 ಸಿನಿಮಾಗಳನ್ನು ಒಟ್ಟಿಗೆ ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಸಿನಿಮಾ ನಿರೀಕ್ಷೆಯಂತೆ ಬಾಕ್ಸ್ ಆಫೀಸ್​​​ನಲ್ಲಿ ಭರ್ಜರಿ ಕಲೆಕ್ಷನ್ ಅನ್ನು ಮಾಡಿದೆ. ಮೊದಲ ದಿನ ಸಿನಿಮಾ ಗಳಿಸಿದ್ದೆಷ್ಟು?

‘ಬಾಹುಬಲಿ: ದಿ ಎಪಿಕ್’ ಮೊದಲ ದಿನ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್​​ನಲ್ಲಿ ದಾಖಲೆ
Bahubali The Epic
ಮಂಜುನಾಥ ಸಿ.
|

Updated on: Nov 01, 2025 | 7:16 AM

Share

‘ಬಾಹುಬಲಿ: ದಿ ಬಿಗಿನಿಂಗ್’ (Bahubali) ಮತ್ತು ‘ಬಾಹುಬಲಿ: ದಿ ಕನ್​​ಕ್ಲೂಷನ್’ ಸಿನಿಮಾಗಳು ಭಾರತೀಯ ಚಿತ್ರರಂಗದ ಅತ್ಯಂತ ಪ್ರಮುಖ ಸಿನಿಮಾಗಳು. ಭಾರತೀಯ ಚಿತ್ರರಂಗದ ಶಕ್ತಿ, ಕ್ರಿಯಾಶೀಲತೆಯನ್ನು ಜಗತ್ತಿಗೆ ಸಾರಿದ ಸಿನಿಮಾಗಳವು. ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾಗಳು ಇದೀಗ ‘ಬಾಹುಬಲಿ: ದಿ ಎಪಿಕ್’ ಹೆಸರಿನಲ್ಲಿ ಒಂದೇ ಸಿನಿಮಾ ಆಗಿ ಮರು ಬಿಡುಗಡೆ ಆಗಿವೆ. ನಿನ್ನೆ (ಅಕ್ಟೋಭರ್ 31) ‘ಬಾಹುಬಲಿ: ದಿ ಎಪಿಕ್’ ಮರು ಬಿಡುಗಡೆ ಆಗಿದ್ದು, ಸಿನಿಮಾ ಮೊದಲ ದಿನ ಗಳಿಸಿರುವ ಮೊತ್ತ ಎಷ್ಟು?

‘ಬಾಹುಬಲಿ’ ಸಿನಿಮಾಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಹಾಗಾಗಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಭಾರತ ಮಾತ್ರವಲ್ಲದೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಸಿನಿಮಾದ ಪ್ರಚಾರಕ್ಕಾಗಿ ಪ್ರಭಾಸ್, ರಾಣಾ ದಗ್ಗುಬಾಟಿ, ರಾಜಮೌಳಿ ಅವರುಗಳು ವಿಶೇಷ ಸಂದರ್ಶನಗಳನ್ನು ಸಹ ಮಾಡಿದ್ದರು.

‘ಬಾಹುಬಲಿ: ದಿ ಎಪಿಕ್’ ಸಿನಿಮಾ ಭಾರತದಲ್ಲಿ ಮಾತ್ರ ಮೊದಲ ದಿನ ಸುಮಾರು 10 ಕೋಟಿ ರೂಪಾಯಿಗಳು ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಮರು ಬಿಡುಗಡೆ ಆದ ಸಿನಿಮಾ ಒಂದು ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಗಳಿಕೆ ಮಾಡಿರುವುದು ಇದೇ ಮೊದಲು. ಮರು ಬಿಡುಗಡೆ ಆದ ಇನ್ಯಾವ ಸಿನಿಮಾ ಸಹ ಇಷ್ಟು ದೊಡ್ಡ ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದ್ದೇ ಇಲ್ಲ.

ಇದನ್ನೂ ಓದಿ:‘ಬಾಹುಬಲಿ’ ರೀ ರಿಲೀಸ್ ತಮನ್ನಾ ಅಭಿಮಾನಿಗಳಿಗೆ ಮತ್ತೆ ಬೇಸರ

ಇನ್ನು ಸಿನಿಮಾದ ಓವರ್​​ಸೀಸ್ ಕಲೆಕ್ಷನ್ ಸುಮಾರು 3 ರಿಂದ ನಾಲ್ಕು ಕೋಟಿ ಆಗಿರಬಹುದೆಂಬ ಅಂದಾಜಿದೆ. ವಿಶೇಷವಾಗಿ ಉತ್ತರ ಅಮೆರಿಕ, ದುಬೈ ಇನ್ನಿತರೆ ಕಡೆಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬಹಳ ಚೆನ್ನಾಗಿ ಆಗಿತ್ತು. ಹಾಗಾಗಿ ಈ ಭಾಗಗಳಲ್ಲಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಉತ್ತಮ ಗಳಿಕೆ ಮಾಡಿರುವ ನಿರೀಕ್ಷೆ ಇದೆ.

‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಮಾಡಲಾಗಿದೆ. ಎರಡು ಸಿನಿಮಾಗಳಲ್ಲಿ ಹಲವಾರು ಭಾಗಗಳನ್ನು ಕತ್ತರಿಸಿ ತೆಗೆದು ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು 3:43 ಗಂಟೆಗಳಿಗೆ ಇಳಿಸಲಾಗಿದೆ. ಈ ಎಡಿಟಿಂಗ್ ಪ್ರಕ್ರಿಯೆಯಲ್ಲಿ ಹಲವು ದೃಶ್ಯಗಳಿಗೆ ರಾಜಮೌಳಿ ಕತ್ತರಿ ಹಾಕಿದ್ದಾರೆ. ಮೊದಲ ಭಾಗದಲ್ಲಿದ್ದ ಸುದೀಪ್ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ. ತಮನ್ನಾ ಅವರ ಹಾಡಿಗೆ ಕತ್ತರಿ ಹಾಕಿದ್ದಾರೆ. ಅನುಷ್ಕಾ-ಪ್ರಭಾಸ್ ಹಾಡಿಗೆ ಕತ್ತರಿ ಹಾಕಿದ್ದಾರೆ. ರಾಜಮೌಳಿ ಸ್ವತಃ ತಮ್ಮ ಅತಿಥಿ ಪಾತ್ರಕ್ಕೂ ಕತ್ತರಿ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಚಡ್ಡಿ ಕಳ್ಳಿಯರು; ಅಂಗಡಿಯಲ್ಲಿ ಒಳ ಉಡುಪು ಕದ್ದ ಮಹಿಳೆಯರು
ಚಡ್ಡಿ ಕಳ್ಳಿಯರು; ಅಂಗಡಿಯಲ್ಲಿ ಒಳ ಉಡುಪು ಕದ್ದ ಮಹಿಳೆಯರು
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?