
ಬಾಲಿವುಡ್ನ ‘ಪರಮ ಸುಂದರಿ’ ಸಿನಿಮಾ ವಿಚಾರದಲ್ಲಿ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ತಮ್ಮ ಭಾಷೆಯನ್ನು ಸಿನಿಮಾದಲ್ಲಿ ಸರಿಯಾಗಿ ಚಿತ್ರಿಸಲಾಗಿಲ್ಲ ಎಂದು ಸಿನಿಮಾ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ಕೂಡ ನಡೆದವು. ಹೀಗಿರುವಾಗಲೇ ಮಲಯಾಳಂನ ‘ಲೋಕಃ: ಚಾಪ್ಟರ್ 1- ಚಂದ್ರ’ ಸಿನಿಮಾದಲ್ಲಿ (Lokah) ಬೆಂಗಳೂರಿಗರಿಗೆ ಅವಮಾನ ಮಾಡೋ ಪದ ಬಳಕೆ ಆಗಿದೆ. ಅಲ್ಲದೆ, ಬೆಂಗಳೂರನ್ನು ಕೇವಲ ಪಾರ್ಟಿ, ಡ್ರಗ್ಸ್ಗಳಿಗೆ ಮಾತ್ರ ಎಂದು ಚಿತ್ರಿಸಿರೋ ರೀತಿ ಚರ್ಚೆಯನ್ನು ಹುಟ್ಟುಹಾಕಿದೆ.
ಸಿನಿಮಾದಲ್ಲಿ ಬರೋ ನಾಚಿಯಪ್ಪ ಗೌಡನಿಗೆ (ಸ್ಯಾಂಡಿ) ಮದುವೆ ಆಫರ್ ನೀಡಲಾಗುತ್ತದೆ. ಆದರೆ, ಆತ, ‘ನಾನು ಮದುವೆ ಆಗೋಕೆ ಒಪ್ಪಿಕೊಳ್ಳೋದಿಲ್ಲ ಎಂದಲ್ಲ. ಇಲ್ಲಿಯವರನ್ನು ಮದುವೆ ಆಗಲ್ಲ. ಇಲ್ಲಿಯವರು ಡಗಾರ್ಗಳು’ ಎಂದು ಹೇಳುತ್ತಾನೆ. ಇಡೀ ಬೆಂಗಳೂರು ಯುವತಿಯರು/ಮಹಿಳೆಯರನ್ನು ಈ ರೀತಿ ಕರೆದಿರೋದು ಚರ್ಚೆ ಹುಟ್ಟುಹಾಕಿದೆ. ಈ ವಾಕ್ಯವನ್ನು ತೆಗೆದು ಹಾಕಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.
‘ಲೋಕಃ’ ಸಿನಿಮಾದಲ್ಲಿ ಸಾಕಷ್ಟು ಪಾರ್ಟಿ ದೃಶ್ಯಗಳು, ಅದರಲ್ಲಿ ಡ್ರಗ್ ಬಳಕೆ ತೋರಿಸಲಾಗಿದೆ. ಅದು ಕಾಮನ್ ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಕೂಡ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಹೊರ ಜಗತ್ತಿಗೆ ನೋಡುವವರಿಗೆ ‘ಬೆಂಗಳೂರು ಇಷ್ಟಕ್ಕೆ ಸೀಮಿತವಾ’ ಎಂಬ ಪ್ರಶ್ನೆ ಹುಟ್ಟುಹಾಕುವಂತೆ ಮಾಡುತ್ತದೆ ಈ ದೃಶ್ಯಗಳು.
According to movies like Kannada Bhima, Malayalam films Officer on Duty, Avesham, and now Lokah,Bengaluru is being portrayed as the capital of drugs and crime.Once upon a time,it was represented in movies as a beautiful town,has come to such a state due to uncontrolled migration.
— ಮಂಸೋರೆ/ManSoRe (@mansore25) September 1, 2025
@DQsWayfarerFilm Do you care to explain this?
1. Why was Lokah based in Bengaluru or a Kannada speaking locality?
2. Why people committing crimes don’t speak Malayalam?
3. Why they speak Tamil mixed Kannada?
1/n— VEER SANTHOSH 🇮🇳 (@veer_santhosh18) August 31, 2025
ನಾಚಿಯಪ್ಪ ಗೌಡ ಪಾತ್ರ ಮಾಡಿದ್ದು ಸ್ಯಾಂಡಿ. ಅವರು ಮೂಲತಃ ತಮಿಳುನಾಡಿನವರು. ಈ ಪಾತ್ರಕ್ಕೆ ಕನ್ನಡದವರನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಅನೇಕರು ಹೇಳಿದ್ದಾರೆ. ಪಾತ್ರದ ಹೆಸರಷ್ಟೇ ನಾಚಿಯಪ್ಪ ಗೌಡ. ಆದರೆ, ಅವರು ಮಾತನಾಡೋದು ತಮಿಳು ಶೈಲಿಯಲ್ಲಿ. ಇದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಮೂಡಿದೆ.
‘ನೀವು ಎಲ್ಲಿಗೆ ಹೋಗಬೇಕು’ ಎಂದು ಆಟೋದವನು ಕೇಳುತ್ತಾನೆ. ‘ಕನ್ನಡ್ ಗೊತ್ತಿಲ್ಲ’ ಎನ್ನುತ್ತಾನೆ ಕಥಾ ನಾಯಕ. ಇದನ್ನು ಅಣಕಿಸುವ ರೀತಿಯಲ್ಲಿ ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಸಿನಿಮಾದಲ್ಲಿ ಕೊಚ್ಚಿಗೋ ಅಥವಾ ಮಲಯಾಳಂ ಭಾಷೆಯನ್ನು ಈ ರೀತಿ ಅವಮಾನ ಮಾಡಿದ್ದರೆ ಅಲ್ಲಿಯವರು ಉಗ್ರ ಪ್ರತಿಭಟನೆಯನ್ನೇ ಮಾಡುತ್ತಿದ್ದರು ಎನ್ನುವ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ‘ಲೋಕಃ’ ಸಿನಿಮಾ ವಿಮರ್ಶೆ; ಮಲಯಾಳಂನಲ್ಲಿ ಉದಯಿಸಿದ ಮಹಿಳಾ ಸೂಪರ್ ಹೀರೋ
‘ಲೋಕಃ’ ಸಿನಿಮಾ ಒಂದೊಳ್ಳೆಯ ಪ್ರಯತ್ನ. ಇಡೀ ಚಿತ್ರದ ಕಥೆ ಬೆಂಗಳೂರಿನಲ್ಲೇ ಸಾಗುತ್ತದೆ. ಆದರೆ, ಈ ರೀತಿಯ ತಪ್ಪುಗಳಿಂದ ಸಿನಿಮಾ ಟೀಕೆಗೆ ಗುರಿಯಾಗಿದೆ. ಈ ಚಿತ್ರವನ್ನು ದುಲ್ಖರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Tue, 2 September 25