ಕೊವಿಡ್​ ವಾರ್ಡ್​ನಲ್ಲೂ ಜೀವನೋತ್ಸಾಹದ ಸಂಗೀತ; ಬಪ್ಪಿ ಲಹರಿ ವಿಡಿಯೋ ವೈರಲ್​

|

Updated on: Apr 21, 2021 | 2:44 PM

ಕೊವಿಡ್​ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಒಂದೇ ದಿನ 2.94 ಲಕ್ಷ ಜನರಿಗೆ ಕೊರೊನಾ ಅಂಟಿದೆ. ದೇಶವೊಂದರಲ್ಲಿ ಒಂದೇ ದಿನ ಇಷ್ಟೊಂದು ಕೊರೊನಾ ಕೇಸ್​ ಬಂದಿದ್ದು ಇದೇ ಮೊದಲು.

ಕೊವಿಡ್​ ವಾರ್ಡ್​ನಲ್ಲೂ ಜೀವನೋತ್ಸಾಹದ ಸಂಗೀತ; ಬಪ್ಪಿ ಲಹರಿ ವಿಡಿಯೋ ವೈರಲ್​
Follow us on

ಕೊರೊನಾ ವೈರಸ್​ ಎರಡನೇ ಅಲೇ ದೇಶದ್ಯಾಂತ ವೇಗವಾಗಿ ಹಬ್ಬುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕೆಲವೆಡೆ ಲಾಕ್​ಡೌನ್​ ಕೂಡ ಘೋಷಣೆ ಮಾಡಲಾಗಿದೆ. ಅನೇಕ ಆಸ್ಪತ್ರೆಗಳಲ್ಲಿ ಬೆಡ್​ ಸಿಗದೆ ಜನರು ಪರದಾಡುವಂತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ಎಂದರೆ ಭಯ ಶುರುವಾಗಿದೆ. ಕೊರೊನಾ ವಾರ್ಡ್​ ಸೇರಿದವರು ನರಕಯಾತನೆ ಅನುಭವಿಸುತ್ತಿರುವ ವಿಡಿಯೋಗಳು ಕೂಡ ವೈರಲ್​ ಆಗುತ್ತಿವೆ. ಹೀಗಿರುವಾಗಲೇ ಕೊರೊನಾ ವಾರಿಯರ್​​ಗಳು ಕೊವಿಡ್​ ರೋಗಿಗಳನ್ನು ಮನರಂಜಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೊವಿಡ್​ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಒಂದೇ ದಿನ 2.94 ಲಕ್ಷ ಜನರಿಗೆ ಕೊರೊನಾ ಅಂಟಿದೆ. ದೇಶವೊಂದರಲ್ಲಿ ಒಂದೇ ದಿನ ಇಷ್ಟೊಂದು ಕೊರೊನಾ ಕೇಸ್​ ಬಂದಿದ್ದು ಇದೇ ಮೊದಲು. ಕೊವಿಡ್​ ಕೇಸ್​ಗಳು ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಉಂಟಾಗುತ್ತಿದೆ.

ಪರಿಸ್ಥಿತಿ ಗಂಭೀರವಾಗುತ್ತಿರುವ ಮಧ್ಯೆಯೇ ಕೊವಿಡ್​​ ವಾರಿಯರ್​ಗಳು ತಮ್ಮ ನಿಸ್ವಾರ್ಥ ಸೇವೆ ಒದಗಿಸುತ್ತಿದ್ದು, ರೋಗಿಗಳ ಆರೈಕೆಯಲ್ಲಿ ತೊಡಗುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕೊವಿಡ್​ ರೋಗಿಗಳನ್ನು ಮನರಂಜಿಸುವ ಕೆಲಸ ಕೂಡ ಮಾಡಲಾಗುತ್ತಿದೆ. ಈಗ ವೈರಲ್​ ಆದ ವಿಡಿಯೋ ಸಾಕಷ್ಟು ಸೆನ್ಸೇಶನ್​ ಸೃಷ್ಟಿ ಮಾಡಿದೆ.

ಕೊವಿಡ್​ ವಾರ್ಡ್​ನಲ್ಲಿ ರೋಗಿಗಳು ಬೆಡ್​ ಮೇಲೆ ಮಲಗಿರುತ್ತಾರೆ. ಆಗ ಕೊವಿಡ್​ ವಾರಿಯರ್​ಗಳು ರೋಗಿಗಳನ್ನು ಮನರಂಜಿಸುವ ಕೆಲಸ ಮಾಡಿದ್ದಾರೆ. ರೋಗಿಗಳು ಕೂಡ ತಮ್ಮ ಆತಂಕವನ್ನು ಮರೆತು ಹಾಡಿಗೆ ಚಪ್ಪಾಳೆ ತಟ್ಟಿದ್ದಾರೆ. ಯೋಚಿಸಬೆಡಿ ಏನಾಗುತ್ತದೆ ನೋಡೋಣ, ನಾಳೆಗೋಸ್ಕರ ಇವತ್ತನ್ನು ಕಳೆದುಕೊಳ್ಳಬೇಡಿ ಎಂಬುದು ಹಾಡಿನ ಅರ್ಥ. ಈ ಹಾಡು ಸಂದರ್ಭಕ್ಕೆ ತುಂಬಾನೇ ಸೂಕ್ತವಾಗಿದೆ. ಈ ಹಾಡು 1990ರಲ್ಲಿ ತೆರೆಕಂಡ ಗಯಾಲ್​ ಚಿತ್ರದ್ದು. ಈ ಹಾಡಿಗೆ ಬಪ್ಪಿ ಲಹರಿ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.

ಏಪ್ರಿಲ್​ ತಿಂಗಳ ಆರಂಭದಲ್ಲಿ ಬಪ್ಪಿ ಲಹರಿ ಅವರಿಗೆ ಕೊರೊನಾ ವೈರಸ್​ ಅಂಟಿತ್ತು. ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ನಂತರದಲ್ಲಿ ಅವರು ಚೇತರಿಕೆ ಕಂಡಿದ್ದರು.

ಇದನ್ನೂ ಓದಿ: ನಟಿ ಅನುಪ್ರಭಾಕರ್​ಗೆ ಕೊರೊನಾ ಪಾಸಿಟಿವ್​; ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ ನಟಿ

ಬೆಂಗಳೂರಿನ ಕೆಲವೆಡೆ ಕೊರೊನಾ ಲಸಿಕೆ ಕೊರತೆ; ಎರಡನೇ ಡೋಸ್ ಪಡೆಯಲು ಬಂದವರಿಗೆ ಲಸಿಕೆಯೇ ಸಿಗುತ್ತಿಲ್ಲ

Published On - 2:38 pm, Wed, 21 April 21