AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೊಮ್ಮರಿಲ್ಲು’ ರಿ-ರಿಲೀಸ್, ನಾಯಕ ಪಾತ್ರ ಮಾಡಬೇಕಿತ್ತು ಜೂ ಎನ್​ಟಿಆರ್, ಕೈಬಿಟ್ಟಿದ್ದೇಕೆ?

ತೆಲುಗು ಚಿತ್ರರಂಗದ ಸುಂದರ ಪ್ರೇಮಕತೆಗಳಲ್ಲಿ ಒಂದಾದ ‘ಬೊಮ್ಮರಿಲ್ಲು’ ರಿ ರಿಲೀಸ್ ಆಗಿ ಮೊದಲ ದಿನ ತುಂಬಿದ ಗೃಹದ ಪ್ರದರ್ಶನ ನೀಡಿದೆ. ಅಂದಹಾಗೆ ಈ ಸಿನಿಮಾದ ನಾಯಕನ ಪಾತ್ರ ಮಾಡಬೇಕಿದ್ದಿದ್ದು ಜೂ ಎನ್​ಟಿಆರ್ ಆದರೆ ಅವರು ನಟಿಸಲಿಲ್ಲ ಏಕೆ?

‘ಬೊಮ್ಮರಿಲ್ಲು’ ರಿ-ರಿಲೀಸ್, ನಾಯಕ ಪಾತ್ರ ಮಾಡಬೇಕಿತ್ತು ಜೂ ಎನ್​ಟಿಆರ್, ಕೈಬಿಟ್ಟಿದ್ದೇಕೆ?
ಮಂಜುನಾಥ ಸಿ.
|

Updated on: Sep 22, 2024 | 8:28 AM

Share

ಸಿದ್ಧಾರ್ಥ್-ಜೆನಿಲಿಯಾ ನಟನೆಯ ‘ಬೊಮ್ಮರಿಲ್ಲು’ ಸಿನಿಮಾ ತೆಲುಗು ಚಿತ್ರರಂಗದ ಅತ್ಯುತ್ತಮ ಪ್ರೇಮಕಥಾ ಸಿನಿಮಾಗಳಲ್ಲಿ ಒಂದು. ಇದು ಕೇವಲ ಪ್ರೇಮಕಥಾ ಸಿನಿಮಾ ಮಾತ್ರವಲ್ಲ, ಪ್ರೇಮಕತೆಯ ಮೂಲಕ ಅಪ್ಪ ಹಾಗೂ ಮಗನ ನಡುವಿನ ಬಾಂಧವ್ಯದ ಕತೆ, ಪ್ರತಿ ಅಪ್ಪ-ಮಗನ ನಡುವೆ ಇರುವ ಅಂತರದ ಬಗ್ಗೆ ಭಿನ್ನಾಭಿಪ್ರಾಯಗಳ ಕತೆ ಹೇಳಿತ್ತು. ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದಿದ್ದರೂ ಭಾರಿ ಯಶಸ್ಸನ್ನು ಗಳಿಸಿದ ಸಿನಿಮಾ ಆಗಿತ್ತು ‘ಬೊಮ್ಮರಿಲ್ಲು’. ಈ ಬ್ಲಾಕ್ ಬಸ್ಟರ್ ಸಿನಿಮಾ ಇತ್ತಿಚೆಗೆ ಮರು ಬಿಡುಗಡೆ ಆಗಿದ್ದು, ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಿದೆ. ಆದರೆ ಈ ಸಿನಿಮಾದ ನಾಯಕ ಪಾತ್ರದಲ್ಲಿ ನಟಿಸುವ ಅವಕಾಶ ಮೊದಲು ಸಿಕ್ಕಿದ್ದು ಜೂ ಎನ್​ಟಿಆರ್​ಗೆ ಆದರೆ ಆ ಸಿನಿಮಾವನ್ನು ಬಹಳ ಬೇಸರದಿಂದ ಕೈಬಿಟ್ಟರು, ಅದಕ್ಕೆ ಕಾರಣವೂ ಇದೆ.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಜೂ ಎನ್​ಟಿಆರ್, ‘ಯಾವುದಾದರೂ ಸಿನಿಮಾದಿಂದ ನನ್ನ ಇಮೇಜಿಗೆ ಸಮಸ್ಯೆಯಾದರೆ ನನಗೆ ಅದು ಬಹಳ ಬೇಸರ ಆಗುವುದಿಲ್ಲ, ಆದರೆ ನನ್ನ ಇಮೇಜಿನ ಭಾರದಿಂದ ಸಿನಿಮಾಕ್ಕೆ ಸಮಸ್ಯೆಯಾದರೆ, ಅದು ಕೊಡಬೇಕಾದ ಸಂದೇಶವನ್ನು ಕೊಡದೇ ಹೋದರೆ ನನಗೆ ಬಹಳ ಬೇಸರವಾಗುತ್ತದೆ. ಇದೇ ಕಾರಣದಿಂದ ನಾನು ‘ಬೊಮ್ಮರಿಲ್ಲು’ ಅನ್ನುವ ಸುಂದರವಾದ ಸಿನಿಮಾವನ್ನು ಕಳೆದುಕೊಳ್ಳಬೇಕಾಯ್ತು’ ಎಂದಿದ್ದಾರೆ ಜೂ ಎನ್​ಟಿಆರ್.

ಇದನ್ನೂ ಓದಿ:ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಕ್ಷಮೆ ಕೋರಿದ ನಟ ಸಿದ್ಧಾರ್ಥ್, ಕಾರಣ?

‘ಬೊಮ್ಮರಿಲ್ಲು’ ಸಿನಿಮಾದ ಅವಕಾಶ ಮೊದಲಿಗೆ ಜೂ ಎನ್​ಟಿಆರ್​ಗೆ ನೀಡಲಾಯ್ತಂತೆ. ಅದಾಗಲೆ ದೊಡ್ಡ ಸ್ಟಾರ್ ನಟ, ಆಕ್ಷನ್ ಹೀರೋ ಎಂದೆಲ್ಲ ಅನಿಸಿಕೊಂಡಿದ್ದ ಜೂ ಎನ್​ಟಿಆರ್​ ಇಮೇಜಿಗೆ, ಅಪ್ಪ-ಮಗನ ಸಂಬಂಧದ ಸೂಕ್ಷ್ಮ ವಿಷಯ ಹೊಂದಿದ್ದು, ಮೆದು ಪ್ರೇಮಕತೆಯ, ಯಾವುದೇ ಆಕ್ಷನ್ ಇಲ್ಲದ ‘ಬೊಮ್ಮರಿಲ್ಲು’ ಸಿನಿಮಾ ಸೂಟ್ ಆಗುವುದಿಲ್ಲ. ಒಂದೊಮ್ಮೆ ಜೂ ಎನ್​ಟಿಆರ್ ‘ಬೊಮ್ಮರಿಲ್ಲು’ ಸಿನಿಮಾದಲ್ಲಿ ನಟಿಸಿದರೆ ಅವರ ಇಮೇಜಿಗೆ ತಕ್ಕಂತೆ ಕತೆ ಬದಲಾವಣೆ ಮಾಡಿದರೆ ಕತೆಯ ಗುಣಮಟ್ಟ ಕೆಡುತ್ತದೆ, ನೀಡಬೇಕಾದ ಸಂದೇಶ ನೀಡುವುದಿಲ್ಲ ಎಂದು ನಿರ್ಧರಿಸಿ ಸಿನಿಮಾವನ್ನು ಜೂ ಎನ್​ಟಿಆರ್ ಕೈಬಿಟ್ಟರಂತೆ. ಆ ಸಿನಿಮಾ ಸಿದ್ಧಾರ್ಥ್​ ಕೈಗೆ ಹೋಗಿ ಬ್ಲಾಕ್ ಬಸ್ಟರ್ ಆಯ್ತು. ಸಿದ್ಧಾರ್ಥ್, ಜೆನಿಲಿಯಾ ಜೀವನದಲ್ಲಿ ಮಾತ್ರವೇ ತೆಲಗು ಚಿತ್ರರಂಗದಲ್ಲಿಯೇ ಅತ್ಯುತ್ತಮ ಸಿನಿಮಾ ಆಯ್ತು.

ಇತ್ತೀಚೆಗಷ್ಟೆ ‘ಬೊಮ್ಮರಿಲ್ಲು’ ಸಿನಿಮಾ ಮರು ಬಿಡುಗಡೆ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಮರು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಮತ್ತೊಮ್ಮೆ ‘ಬೊಮ್ಮರಿಲ್ಲು’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಸಂಭ್ರಮಿಸಿದ್ದಾರೆ. ಸಿನಿಮಾದ ಹಾಡುಗಳಿಗೆ ಕುಣಿದಿದ್ದಾರೆ, ಡೈಲಾಗ್​ಗಳಲ್ಲಿ ಚಪ್ಪಾಳೆ, ಶಿಳ್ಳೆ ಹೊಡೆದಿದ್ದಾರೆ. ಮರು ಬಿಡುಗಡೆಯಲ್ಲಿಯೂ ಸಿನಿಮಾ ಹಿಟ್ ಎನಿಸಿಕೊಂಡಿದೆ. ಮೊದಲ ದಿನ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್