Updated on: Sep 22, 2024 | 9:40 AM
ವರ್ಷಗಳು ಕಳೆದರೂ ನಟಿ ಸಮಂತಾ ವಿಚ್ಛೇದನದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಹೀಗಿರುವಾಗ ಇತ್ತೀಚೆಗೆ ಸಮಂತಾ ಮದುವೆ ಸಮಾರಾಂಭವೊಂದರಲ್ಲಿ ಪಾಲ್ಗೊಂಡಿದ್ದಾರೆ.
ಸಮಂತಾರ ಅಣ್ಣ ಡೇವಿಡ್ ವಿದೇಶದಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದು, ವಿವಾಹ ಕಾರ್ಯಕ್ರಮದಲ್ಲಿ ನಟಿ ಸಮಂತಾ ಭಾಗಿಯಾಗಿದ್ದರು.
ಮದುವೆ ಸಮಾರಂಭದಲ್ಲಿ ತಮ್ಮ ಕುಟುಂಬದ ಜೊತೆಗೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ ಸಮಂತಾ. ತಾಯಿ, ತಂದೆ, ಸಹೋದರರು ಇನ್ನೂ ಕೆಲವು ಹತ್ತಿರದ ಬಂಧುಗಳು, ಗೆಳೆಯರೊಟ್ಟಿಗೆ ಸಮಂತಾ ಸಮಯ ಕಳೆದಿದ್ದಾರೆ.
ಸಮಂತಾರ ಸಹೋದರ ಡೇವಿಡ್ ಅಮೆರಿಕದಲ್ಲಿ ನೆಲೆಸಿದ್ದು, ಅಮೆರಿಕದ ವಿಸ್ಕಾನ್ಸಿನ್ ನಗರದ ಗ್ರೇಟ್ ಲೇಕ್ ಬಳಿ ಅಮೆರಿಕ ನಿವಾಸಿ ನಿಖೊಲೆ ಎಂಬುವರನ್ನು ವಿವಾಹವಾಗಿದ್ದಾರೆ.
ಸಮಂತಾಗೆ ಇಬ್ಬರು ಸಹೋದರರು ಡೇವಿಡ್ ಪ್ರಭು ಹಾಗೂ ಜಾನಥನ್ ಪ್ರಭು. ಇದೀಗ ಡೇವಿಡ್ ಪ್ರಭು ನಿಖೋಲೆ ಜೊತೆಗೆ ಯುಎಸ್ನಲ್ಲಿ ವಿವಾಹವಾಗಿದ್ದಾರೆ.
ಸಮಂತಾ, ಸಹೋದರನ ಮದುವೆಯ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುವಣಗಿತ್ತಿ ಜೊತೆಗೆ ಫ್ಲವರ್ ಗರ್ಲ್ ಆಗಿರುವ ತಮ್ಮ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
ಸಮಂತಾ ತಮ್ಮ ತಾಯಿ, ತಂದೆ, ಸಹೋದರರು, ಅತ್ತಿಗೆ ಅವರ ಮಕ್ಕಳು ಗೆಳೆಯರು ಇನ್ನೂ ಹಲವು ಬಂಧುಗಳೊಟ್ಟಗೆ ಮದುವೆ ಸಮಾರಂಭವನ್ನು ಎಂಜಾಯ್ ಮಾಡಿದ್ದಾರೆ. ಚಿತ್ರಗಳು ಇಲ್ಲಿವೆ.