ತ್ರಿಷಾ ನಂತರ ಮತ್ತೋರ್ವ ಹೀರೋಯಿನ್ ಖಾಸಗಿ ವಿಡಿಯೋ ಲೀಕ್​​; ನರಕದಲ್ಲಿ ನಿಮಗೆ ವಿಶೇಷ ವ್ಯವಸ್ಥೆ ಇದೆ ಎಂದ ​ನಟಿ

ವಿಡಿಯೋದಲ್ಲಿರುವವರು ತಾವಲ್ಲ ಎಂದು ಪ್ರಿಯಾಂಕಾ ವಾದ ಮಂಡಿಸಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ತ್ರಿಷಾ ನಂತರ ಮತ್ತೋರ್ವ ಹೀರೋಯಿನ್ ಖಾಸಗಿ ವಿಡಿಯೋ ಲೀಕ್​​; ನರಕದಲ್ಲಿ ನಿಮಗೆ ವಿಶೇಷ ವ್ಯವಸ್ಥೆ ಇದೆ ಎಂದ ​ನಟಿ
ಮತ್ತೋರ್ವ ಹೀರೋಯಿನ್ ಖಾಸಗಿ ವಿಡಿಯೋ ಲೀಕ್​​; ನರಕದಲ್ಲಿ ನಿಮಗೆ ವಿಶೇಷ ವ್ಯವಸ್ಥೆ ಇದೆ ಎಂದ ​ನಟಿ
Updated By: ರಾಜೇಶ್ ದುಗ್ಗುಮನೆ

Updated on: Aug 23, 2021 | 9:40 AM

ಭೋಜ್​ಪುರಿ ನಟಿ ತ್ರಿಶಾ ಮಧು ಅವರ ಖಾಸಗಿ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದರು. ಈಗ ಮತ್ತೋರ್ವ ಭೋಜ್​ಪುರಿ ನಟಿಯ ವಿಡಿಯೋ ಲೀಕ್​ ಆಗಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡೆರಡು ವಿಡಿಯೋ ಸೋರಿಕೆ ಆಗಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಭೋಜ್​ಪುರಿ ನಟಿ ಪ್ರಿಯಾಂಕಾ ಪಂಡಿತ್​ ಅವರ ಖಾಸಗಿ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ಡಿಲೀಟ್​ ಮಾಡಲಾಗುತ್ತಿದೆಯಾದರೂ, ಇದನ್ನು ಡೌನ್​ಲೋಡ್​ ಮಾಡಿಕೊಂಡವರು ಮತ್ತೆಮತ್ತೆ ಅಪ್​ಲೋಡ್​ ಮಾಡುತ್ತಿದ್ದಾರೆ. ಹೀಗಾಗಿ, ನಟಿಗೆ ಇದು ತೀವ್ರ ಮುಜುಗರ ಉಂಟು ಮಾಡಿದೆ.

‘ವಿಡಿಯೋ ವೈರಲ್​ ಮಾಡಿದವರಿಗೆ ಪ್ರಿಯಾಂಕಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ‘ಸುಳ್ಳನ್ನು ದೊಡ್ಡದಾಗಿ ಕೂಗಿ ಹೇಳಿದರೆ ಅದು ಸತ್ಯವಾಗುವುದಿಲ್ಲ. ನಿಮ್ಮಂತವರಿಗೆ ನರಕದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ನೀನು ಮಾಡಿದ್ದನ್ನ ಇಲ್ಲೇ ಅನುಭವಿಸಬೇಕಾಗುತ್ತೆ. ಇದನ್ನ ನೆನಪಿಟ್ಕೋ’ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿರುವವರು ತಾವಲ್ಲ ಎಂದು ಪ್ರಿಯಾಂಕಾ ವಾದ ಮಂಡಿಸಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ತ್ರಿಷಾ ಓರ್ವ ಹುಡುಗನೊಂದಿಗೆ ಕಾಣಿಸಿಕೊಂಡಿದ್ದರು. ಈ ವಿಡಿಯೋ ತುಂಬಾನೇ ಖಾಸಗಿಯಾಗಿತ್ತು. ಇಬ್ಬರ ನಡುವೆ ನಡೆದ ಸಂಭಾಷಣೆಯ ಆಡಿಯೋ ರೆಕಾರ್ಡ್​​ಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ತ್ರಿಷಾ ಜತೆ ವಿಡಿಯೋದಲ್ಲಿ ಇದ್ದಿದ್ದು ಯಾರು ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು. ಈ ಬಗ್ಗೆ  ತ್ರಿಷಾ ಫೇಸ್​ಬುಕ್​ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ. ನನ್ನ ಖಾಸಗಿ ವೀಡಿಯೊವನ್ನು ವೈರಲ್ ಮಾಡಲಾಗಿದೆ.  ಯಾರಾದರೂ ನಿಮ್ಮ ಸಹೋದರಿಯನ್ನು ಮದುವೆಯಾಗಿ ಮರುದಿನ ಹನಿಮೂನ್ ವಿಡಿಯೋ ವೈರಲ್ ಮಾಡಿದರೆ ನಿಮಗೆ ಹೇಗನಿಸುತ್ತದೆ?’ ಎಂದು ಅವರು ಪ್ರಶ್ನೆ ಮಾಡಿದ್ದರು. ತ್ರಿಷಾಗೆ ಈಗಿನ್ನು 27 ವರ್ಷ. ಅವರು ಬಂಗಾಳಿ ಮೂಲದವರು. ಭೋಜ್‌ಪುರಿಯ ಅನೇಕ ಹಾಡುಗಳಲ್ಲಿ ತ್ರಿಷಾ ನಟಿಸಿದ್ದಾರೆ. ಅವರ ಹಾಟ್​​ ಆ್ಯಂಡ್​ ಬೋಲ್ಡ್​ ಲುಕ್​ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅವರಿಗೆ ಪಡ್ಡೆ ಹುಡುಗರ ದೊಡ್ಡ ಅಭಿಮಾನಿ ಬಳಗವೇ ಇದೆ.

ಇದನ್ನೂ ಓದಿ: Trisha Kar Madhu: ಯುವ ನಟಿಯ ಖಾಸಗಿ​ ವಿಡಿಯೋ ಲೀಕ್​; ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ’ ಎಂದ ನಟಿ

 

Published On - 9:39 am, Mon, 23 August 21