ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಅಂತೂ ಇಂತೂ ಪ್ರಖ್ಯಾತ್‌ನ ಜಾಡು ಹಿಡಿದು ಬಾರ್‌ಗೆ ಬಂದ ಭೂಪತಿ ದಂಪತಿಗೆ ಅಲ್ಲಿ ಪ್ರಖ್ಯಾತ್ ಸಿಗುತ್ತಾನೆ. ಎಷ್ಟೇ ಹೇಳಿದರೂ ಡೆವಿಲ್ ಯಾರೆಂಬುದನ್ನು ಆತ ಬಾಯಿ ಬಿಡಲ್ಲ. ಭೂಪತಿಯಿಂದ ತಪ್ಪಿಸಿಕೊಂಡು ಮೆಲ್ಲನೆ ಈ ಕಡೆ ಬಂದ ಪ್ರಖ್ಯಾತ್ ಮಿಲ್ಲಿಗೆ ಕಾಲ್ ಮಾಡಿ ಭೂಪತಿ ಡೆವಿಲ್ ಯಾರೆಂದು ಕೇಳುತ್ತಿದ್ದಾನೆ, ದಯವಿಟ್ಟು ನನ್ನನ್ನು ಕಾಪಾಡಿ ಎಂದು ಕೇಳಿಕೊಳ್ಳುತ್ತಾನೆ. ಆಗ ಮಿಲ್ಲಿ ನಾನು ಹೇಗೆ ಈಗ ನಿನ್ನನ್ನು ಕಾಪಾಡಲು ಸಾಧ್ಯ, ನೀನೇ ಹೇಗಾದರೂ ಮ್ಯಾನೆಜ್ ಮಾಡಿ ತಪ್ಪಿಸಿಕೊಂಡು ಹೋಗು, ಆದ್ರೆ ಡೆವಿಲ್ ಯಾರೆಂಬುದನ್ನು ಮಾತ್ರ ಹೇಳಬೇಡ ಎಂದು ಹೇಳಿ ಕಾಲ್ ಕಟ್ ಮಾಡುತ್ತಾಳೆ.
ಈ ವಿಚಾರವನ್ನು ಮಿಲ್ಲಿಯು ಆಕೆಯ ತಾಯಿಗೆ ಅಂದರೆ ಡೆವಿಲ್‌ಗೆ ತಿಳಿಸುತ್ತಾಳೆ. ಆಗ ಆಕೆಯ ತಾಯಿ ಹೇಳುತ್ತಾಳೆ, ಪ್ರಖ್ಯಾತ್ ಡೆವಿಲ್ ಯಾರೆಂಬ ಸತ್ಯವನ್ನು ಬಾಯಿ ಬಿಡುವುದಿಲ್ಲ, ಹಾಗೇನಾದರೂ ಮಾಡಿದರೆ ಆ ಕ್ಷಣವೇ ಆತನ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ ಎಂದು ಹೇಳುತ್ತಾಳೆ.
ಇತ್ತ ಕಡೆ ಭೂಪತಿ ಎಷ್ಟೇ ಕೇಳಿದರೂ, ಹೊಡೆದರೂ ಡೆವಿಲ್ ಯಾರೆಂಬುದನ್ನು ಬಾಯಿ ಬಿಡುವುದಿಲ್ಲ. ಇದರಿಂದ ಕೋಪಗೊಂಡ ಭೂಪತಿ ಸ್ಟೇಷನ್‌ನಲ್ಲಿ ಹಾಕಿ ರುಬ್ಬಿದ್ರೆ ನಿನಗೆ ಬುದ್ಧಿ ಬರುತ್ತದೆ ಅಂತ ಹೇಳಿ ಆತನ ಕೈಯನ್ನು ಕಟ್ಟಿ ಕಾರಿನಲ್ಲಿ ಪೋಲಿಸ್ ಸ್ಟೇಷನ್ ಕಡೆ ಹೋಗುತ್ತಾನೆ. ನಕ್ಷತ್ರ ಕೂಡಾ ಅವರ ಜೊತೆಯಲ್ಲೇ ಹೋಗುತ್ತಾಳೆ. ದಾರಿ ಮಧ್ಯೆ ಒಂದಷ್ಟು ಮಾತುಕತೆ ಅವರ ಮಧ್ಯೆ ಆಗುತ್ತದೆ.
ನೀವು ನನ್ನನ್ನು ಕೊಂದರೂ ನನಗೆ ಏನು ವ್ಯತ್ಯಾಸ ಆಗಲ್ಲ. ನನಗೆ ಯಾವ ಭಯನೂ ಇಲ್ಲ. ಆ ಡೆವಿಲ್ ಕೊಡುವ ಟಾರ್ಚರ್‌ಗಿಂತ ಪೋಲಿಸರ ಲಾಠಿ ಏಟು ತಿಂದರೂ ಪರವಾಗಿಲ್ಲ. ಆದರೆ ಅವಳು ಯಾರೆಂಬುದನ್ನು ಮಾತ್ರ ನಾನು ಹೇಳಲ್ಲ. ಅವಳ ತಂಟೆಗೆ ನೀವೂ ಹೋಗಬೇಡಿ, ಅವಳಿಂದ ದೂರ ಇದ್ದಷ್ಟು ನಿನಗೆ ಒಳ್ಳೆಯದು. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಹೇಳಿ ಆತನ ಕೈಗೆ ಕಟ್ಟಿದ್ದ ಹಗ್ಗದ ಸಹಾಯದಿಂದ ನಕ್ಷತ್ರಳ ಕುತ್ತಿಗೆಯನ್ನು ಪ್ರಖ್ಯಾತ್ ಹಿಸುಕುತ್ತಾನೆ.
ಕೋಪಗೊಂಡ ಭೂಪತಿ ಕಾರ್ ನಿಲ್ಲಿಸಿ ಅವನನ್ನು ಡಿಕ್ಕಿಯ ಒಳಗೆ ಹಾಕಿ ಕರೆದುಕೊಂಡು ಹೋಗುತ್ತಾನೆ. ಹೀಗೆ ಹೋಗುವಾಗ ದಾರಿ ಮಧ್ಯ ಒಂದು ಕಾರ್ ಭೂಪತಿಯ ಕಾರ್‌ಗೆ ಬಂದು ಗುದ್ದುತ್ತದೆ. ಕಾರ್‌ನಿಂದ ಇಳಿದ ಭೂಪತಿ ಮತ್ತು ಆ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿ ಆಗುತ್ತದೆ. ಇದೇ ಸಮಯದಲ್ಲಿ ಡೆವಿಲ್ ಕಡೆಯವರು ಭೂಪತಿ ಕಾರ್‌ನಲ್ಲಿದ್ದ ಪ್ರಖ್ಯಾತ್‌ನನ್ನು ಕಿಡ್ನಾಪ್ ಮಾಡುತ್ತಾರೆ. ಆದರೆ ಈ ವಿಷಯ ನಕ್ಷತ್ರ ಭೂಪತಿ ಜೋಡಿಗೆ ಗೊತ್ತೇ ಆಗಲ್ಲ. ಅವರಿಬ್ಬರು ಅಲ್ಲಿಂದ ಪೋಲಿಸ್ ಸ್ಟೇಷನ್ ಕಡೆಗೆ ಹೋರಡುತ್ತಾರೆ.
ಸ್ಟೇಷನ್‌ಗೆ ತಲುಪಿದ ತಕ್ಷಣನೇ ಇನ್ಸ್ಸ್ಪೆಕ್ಟರ್ ಭೂಪತಿಗೆ ಕಾಲ್ ಮಾಡಿ ನಿಮಗೆ ಸ್ಟೆಷನ್‌ಗೆ ಬರೋಕಾಗುತ್ತಾ, ನಿಮ್ಮ ಹೆಸರಿಗೆ ಒಂದು ಕೊರಿಯರ್ ಬಂದಿದೆ ಎಂದು ಹೇಳುತ್ತಾರೆ. ಇನ್ಸ್ಸ್ಪೆಕ್ಟರ್ ಮಾತು ಕೇಳಿ ಭೂಪತಿಗೆ ವಿಚಿತ್ರ ಭಾವನೆ ಉಂಟಾಗುತ್ತದೆ. ನನ್ನ ಹೆಸರಿನ ಕೊರಿಯರ್ ಇಲ್ಲಿಗೆ ಹೇಗೆ ಬರಲು ಸಾಧ್ಯ ಅಂತಾ ಯೋಚಿಸುತ್ತಾನೆ. ಹಾಗೆ ಯೋಚನೆ ಮಾಡುತ್ತಾ ಇನ್ಸ್ಸ್ಪೆಕ್ಟರ್ ಜೊತೆಗೆ ನಕ್ಷತ್ರ ಮತ್ತು ಭೂಪತಿ ಸ್ಟೆಷನ್ ಒಳಗೆ ಹೋಗಿ ಕೊರಿಯರ್ ಓಪನ್ ಮಾಡಿ ನೋಡಿದಾಗ ಅವರಿಬ್ಬರಿಗೂ ಒಮ್ಮೆಲೇ ಆಘಾತವಾಗುತ್ತದೆ. ಯಾಕಂದರೆ ಆ ಕೊರಿಯರ್‌ನಲ್ಲಿ ಪ್ರಖ್ಯಾತ್‌ನ ಫೋಟೋಗೆ ಭಾವಪೂರ್ಣ ಶ್ರದ್ಧಾಂಜಲಿ ಅಂತಾ ಬರೆದಿತ್ತು. ಹಾಗೂ ಪ್ರಖ್ಯಾತ್ ಕಾರ್‌ನಲ್ಲಿ ಇಲ್ಲ ಅವನು ಕಿಡ್ನಾಪ್ ಆಗಿದ್ದಾನೆ ಎಂದು ಗೊತ್ತಾಗುತ್ತದೆ.
ಹೀಗೆ ಯೋಚನೆ ಮಾಡುತ್ತಾ ಕೂತಿದ್ದಾಗ ಓಓಓ.. ಇದು ರೋಡ್ ಮಧ್ಯೆ ಕಾರ್ ನಿಲ್ಲಿಸಿ ವ್ಯಕ್ತಿಯೊಬ್ಬ ಗಲಾಟೆ ಮಾಡಿದಾಗ ನಡೆದ ಘಟನೆ ಎಂದು ಅರ್ಥ ಮಾಡಿಕೊಳ್ಳುತ್ತಾನೆ. ಭೂಪತಿ ಮತ್ತು ನಕ್ಷತ್ರ ಜೋಡಿಗೆ ಈ ಡೆವಿಲ್ ಎಷ್ಟು ಕ್ರೂರಿ ಮತ್ತು ಚಾಣಾಕ್ಷಳು ಅಂತಾ ಪ್ರಖ್ಯಾತ್‌ನ ಕಿಡ್ನಾಪ್ನಿಂದ ಗೊತ್ತಾಗಿದೆ. ಆಕೆಯಿಂದ ಇನ್ನು ಯಾರ ಪ್ರಾಣಕ್ಕೆಲ್ಲಾ ಕುತ್ತು ಬರುತ್ತದೆ ಎಂದು ಮುಂದೆ ನೋಡಬೇಕಾಗಿದೆ.
ಮಧುಶ್ರೀ
Published On - 12:49 pm, Wed, 12 October 22