Lohitashwa: ಐಸಿಯುನಲ್ಲಿರುವ ಹಿರಿಯ ನಟ ಲೋಹಿತಾಶ್ವ ಪರಿಸ್ಥಿತಿ ಈಗ ಹೇಗಿದೆ? ಹೆಲ್ತ್​ ಅಪ್​ಡೇಟ್​ ನೀಡಿದ ವೈದ್ಯರು

Lohitashwa Health Bulletin: ಲೋಹಿತಾಶ್ವ ಅವರು ವೆಂಟಿಲೇಟರ್​ನಲ್ಲಿ ಇದ್ದಾರೆ. ಅಬ್ಸರ್ವೇಷನ್​ ಮುಂದುವರಿದಿದೆ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ವೈದ್ಯರು ತಿಳಿಸಿದ್ದಾರೆ.

Lohitashwa: ಐಸಿಯುನಲ್ಲಿರುವ ಹಿರಿಯ ನಟ ಲೋಹಿತಾಶ್ವ ಪರಿಸ್ಥಿತಿ ಈಗ ಹೇಗಿದೆ? ಹೆಲ್ತ್​ ಅಪ್​ಡೇಟ್​ ನೀಡಿದ ವೈದ್ಯರು
ಲೋಹಿತಾಶ್ವ
Follow us
| Updated By: ಮದನ್​ ಕುಮಾರ್​

Updated on:Oct 12, 2022 | 11:49 AM

ಚಂದನವನದ ಖ್ಯಾತ ನಟ ಲೋಹಿತಾಶ್ವ (Lohitashwa) ಅವರ ಆರೋಗ್ಯದ ಬಗ್ಗೆ ಆತಂಕ ಮೂಡಿದೆ. ಕಳೆದ ಕೆಲವು ದಿನಗಳಿಂದ ಅವರಿಗೆ ತೀವ್ರ ಅನಾರೋಗ್ಯ ಕಾಡುತ್ತಿದೆ. ಅಕ್ಟೋಬರ್​ 4ರಂದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಸಂದರ್ಭದಲ್ಲಿ ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಈಗ ಆಸ್ಪತ್ರೆ ಕಡೆಯಿಂದ ಲೋಹಿತಾಶ್ವ ಅವರ ಹೆಲ್ತ್​ ಅಪ್​ಡೇಟ್ (Lohitashwa Health Update)​ ನೀಡಲಾಗಿದೆ. ಸದ್ಯ ಅವರನ್ನು ಐಸಿಯುನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪುತ್ರ ಶರತ್​ ಲೋಹಿತಾಶ್ವ (Sharath Lohitashwa) ಅವರು ತಂದೆಯ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಿರಿಯ ನಟ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು ಮತ್ತು ಸೆಲಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.

ಲೋಹಿತಾಶ್ವ ಅವರಿಗೆ ಈಗ 80 ವರ್ಷ ವಯಸ್ಸು. ವಯೋಸಹಜವಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ವೈದ್ಯರು ನೀಡಿರುವ ಹೆಲ್ತ್​ ಅಪ್​ಡೇಟ್​ ಪ್ರಕಾರ ಸುಸ್ತು, ವಾಂತಿ-ಭೇದಿ, ಚಳಿ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆಗಳೊಂದಿಗೆ ಆಸ್ಪತ್ರೆಗೆ ಬಂದಿದ್ದ ಲೋಹಿತಾಶ್ವ ಅವರನ್ನು ಅಕ್ಟೋಬರ್​ 4ರಂದು ದಾಖಲಿಸಿಕೊಳ್ಳಲಾಯಿತು. ಬಳಿಕ ಹೃದಯ ಸಂಬಂಧಿ ಕಾಯಿಲೆ ಇರುವುದು ಕೂಡ ಗೊತ್ತಾಯಿತು. ಅಕ್ಟೋಬರ್​ 7ರಂದು ಮುಂಜಾನೆ ವಾರ್ಡ್​ನಲ್ಲಿ ಅವರಿಗೆ ಹೃದಯಾಘಾತ ಆಯಿತು. ಕೂಡಲೆ ಸಿಪಿಆರ್​ ಮಾಡಿ, ಐಸಿಯುಗೆ ಶಿಫ್ಟ್​ ಮಾಡಲಾಯಿತು. ಐಸಿಯುನಲ್ಲಿ ಇರುವಾಗ ಫಿಟ್ಸ್​ ಕೂಡ ಬಂತು. ಎಂಆರ್​ಐ ಮಾಡಿದಾಗ ಮಿದುಳಿಗೆ ಸಂಬಂಧಿಸಿದ ಸಮಸ್ಯೆ ಇರುವುದು ತಿಳಿಯಿತು. ಸದ್ಯ ಅವರು ವೆಂಟಿಲೇಟರ್​ನಲ್ಲಿ ಇದ್ದಾರೆ. ಅಬ್ಸರ್ವೇಷನ್​ ಮುಂದುವರಿದಿದೆ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ವೈದ್ಯರು ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಲೋಹಿತಾಶ್ವ ಅವರಿಗೆ ಇರುವ ಅನುಭವ ಅಪಾರ. ವಿಷ್ಣುವರ್ಧನ್​, ರಾಜ್​ಕುಮಾರ್​, ಅಂಬರೀಷ್​, ಶಂಕರ್​ ನಾಗ್​ ಮುಂತಾದ ದಿಗ್ಗಜ ಕಲಾವಿದರ ಜೊತೆ ಲೋಹಿತಾಶ್ವ ನಟಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅವರ ಮನೆಮಾತಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆದರು. ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ ಅವರು ಕೆಲವು ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ.

ಇದನ್ನೂ ಓದಿ
Image
Lohitashwa: ‘ನನ್ನ ಕಣ್ಣೆದುರಲ್ಲೇ ತಂದೆಗೆ ಹೃದಯಾಘಾತ ಆಯ್ತು’: ಲೋಹಿತಾಶ್ವ ಆರೋಗ್ಯದ ಬಗ್ಗೆ ಪುತ್ರ ಶರತ್​ ಮಾಹಿತಿ
Image
Kannada Actor Lohitashwa: ಖ್ಯಾತ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ
Image
ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲು, ಸ್ಥಿತಿ ಗಂಭೀರ

ಮೂಲತಃ ತುಮಕೂರಿನ ತೊಂಡಗೆರೆ ಗ್ರಾಮದವರಾದ ಲೋಹಿತಾಶ್ವ ಅವರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಕಿರುತೆರೆ ಹಾಗೂ ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಅವರ ಅನಾರೋಗ್ಯದ ಸುದ್ದಿ ತಿಳಿದು ಅಭಿಮಾನಿಗಳಿಗೆ ಆತಂಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:47 am, Wed, 12 October 22