Honganasu Serial: ರಿಷಿ ಜೊತೆ ಲೈಬ್ರರಿಯಲ್ಲೇ ಲಾಕ್ ಆದ ವಸೂಧಾರ: ಇಬ್ಬರನ್ನೂ ಒಟ್ಟಿಗೆ ನೋಡಿ ಗೌತಮ್ ಶಾಕ್

Honganasu Kannada Serial: ಇಬ್ಬರೂ ಲೈಬ್ರರಿಯಲ್ಲೇ ಲಾಕ್ ಆದರು. ಕರೆಂಟ್ ಹೋಗಿದೆ ಇನ್ನೇನು ಬರುತ್ತೆ ಎಂದು ಅಲ್ಲೇ ಕಾಯುತ್ತಿದ್ದರು. ತುಂಬಾ ಹೊತ್ತಾದರೂ ಕರೆಂಟ್ ಬಂದಿಲ್ಲ.

Honganasu Serial: ರಿಷಿ ಜೊತೆ ಲೈಬ್ರರಿಯಲ್ಲೇ ಲಾಕ್ ಆದ ವಸೂಧಾರ: ಇಬ್ಬರನ್ನೂ ಒಟ್ಟಿಗೆ ನೋಡಿ ಗೌತಮ್ ಶಾಕ್
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 12, 2022 | 9:11 AM

ವಸೂಧರಾಳಿಗೆ ಪ್ರಪೋಸ್ ಮಾಡಲು ಗೌತಮ್ ಕಾತರನಾಗಿದ್ದಾರೆ. ಆದರೆ ಗೌತಮ್ ಯೋಜನೆಯನ್ನು ವಸೂಧರಾಳ ಸ್ನೇಹಿತೆ ಪುಷ್ಪಾ ತಲೆಕೆಳಗೆ ಮಾಡಿದಳು. ವಸೂಧರಾಳ ಪೇಂಟಿಂಗ್ ಅನ್ನು ನೀಡಿ ಪ್ರಪೋಸ್ ಮಾಡಬೇಕೆಂದು ಗೌತಮ್ ಪ್ಲಾನ್ ಮಾಡಿದ್ದ. ಆದರೆ ಪುಷ್ಪಾ ಆ ಪೇಂಟಿಂಗ್ ಅನ್ನು ಮಹೇಂದ್ರ ಬಳಿ ತಂದು ನೀಡಿದಳು. ಮಹೇಂದ್ರ ಮತ್ತು ಜಗತಿ ಇಬ್ಬರೂ ಮಾತನಾಡುತ್ತಾ ಕುಳಿತಿದ್ದರು. ಇನ್ನೇನು ಜಗತಿ ಪೇಂಟಿಂಗ್ ಓಪನ್ ಮಾಡಿ ನೋಡುತ್ತಿದ್ದಂತೆ ಮೀಟಿಂಗ್‌ಗೆ ಕರೆ ಬಂತೆಂದು ಅಲ್ಲೇ ಬಿಟ್ಟು ಹೊರಟಳು. ಅದೇ ಪೇಂಟಿಂಗ್ ಚಾಟ್‌ಅನ್ನು ಮಹೇಂದ್ರ ಓಪನ್ ಮಾಡಲು ತೆಗೆದುಕೊಂಡ. ಆದರೆ ಮಹೇಂದ್ರ ಕೂಡ ನೋಡದೆ ಯಾವುದೋ ಮೀಟಿಂಗ್ ಎಂದು ಎದ್ದು ಹೊರಟ.

ಇತ್ತ ಲೈಬ್ರರಿಯಲ್ಲಿ ವಸೂಧರಾ ತನಗೆ ಬೇಕಾದ ಪುಸ್ತಕ ಹುಡುತ್ತಿದ್ದಳು. ಅಲ್ಲಿಗೆ ರಿಷಿ ಕೂಡ ಎಂಟ್ರಿ ಕೊಟ್ಟ. ಇಬ್ಬರೂ ಪುಸ್ತಕ ಹುಡುಕುವಲ್ಲಿ ತಲ್ಲೀನರಾಗಿದ್ದರು. ಅಷ್ಟೊತ್ತಿಗೆ ಲೈಬ್ರರಿಯನ್ ಒಳಗೆ ಯಾರೂ ಇಲ್ಲ ಎಂದು ಲೈಟ್ ಆಫ್ ಮಾಡಿ, ಬಾಗಿಲು ಹಾಕಿ ಮನೆಗೆ ಹೊರಟ. ಆದರೆ ರಿಷಿ ಮತ್ತು ವಸೂಧರಾ ಇಬ್ಬರೂ ಲೈಬ್ರರಿಯಲ್ಲೇ ಲಾಕ್ ಆದರು. ಕರೆಂಟ್ ಹೋಗಿದೆ ಇನ್ನೇನು ಬರುತ್ತೆ ಎಂದು ಇಬ್ಬರೂ ಲೈಬ್ರರಿಯಲ್ಲೇ ಕಾಯುತ್ತಿದ್ದರು. ತುಂಬಾ ಹೊತ್ತಾದರೂ ಕರೆಂಟ್ ಬಂದಿಲ್ಲ. ಆಗ ಲೈಬ್ರರಿಯನ್ ಲಾಕ್ ಮಾಡಿ ಮನೆಗೆ ಹೋದ ಎಂದು ಇಬ್ಬರಿಗೂ ಗೊತ್ತಾಯಿತು. ರಿಷಿಗೆ ಟೆನ್ಶನ್ ಆಯಿತು.

ಮುಂದೇನು ಎಂದು ರಿಷಿಗೆ ಯೋಚನೆ ಶುರು ಆಯ್ತು. ಇಬ್ಬರೂ ಒಟ್ಟಿಗೆ ಲಾಕ್ ಆಗಿದ್ದೀವಿ ಅಂತ ಗೊತ್ತಾದರೆ ಬೇರೆ ಏನೋ ಕಲ್ಪನೆ ಮಾಡಿಕೊಳ್ಳುತ್ತಾರೆ. ಇಬ್ಬರೂ ಇರುವ ವಿಚಾರ ಗೊತ್ತಾಗದೆ ಇರುವ ಹಾಗೆ ಮ್ಯಾನೇಜ್ ಮಾಡಬೇಕು ಸೈಲೆಂಟ್ ಆಗಿರು ಎಂದು ವಸೂಧರಾಳಿಗೆ ಹೇಳಿದ. ಲೈಬ್ರರಿಯನ್‌ಗೆ ಎಷ್ಟು ಬಾರಿ ಕಾಲ್ ಮಾಡಿದರೂ ಸಹ ಫೋನ್ ರಿಸೀವ್ ಮಾಡುವುದಿಲ್ಲ. ಆತ ಫೋನ್ ಸೈಲೆಂಟ್ ಮಾಡಿ ಮನೆಗೆ ಹೊರಟಿದ್ದ. ಬಳಿಕ ರಿಷಿಯ ಫೋನ್ ರಿಸೀವ್ ಮಾಡಿದ ಲೈಬ್ರರಿಯನ್ ಬಾಗಿಲು ತೆಗೆಯಲು ಕಾಲೇಜು ಕಡೆ ಹೊರಟ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಅಷ್ಟರಲ್ಲಿ ವಸೂಧರಾ ಮತ್ತು ರಿಷಿ ಇಬ್ಬರೂ ಲೈಬ್ರರಿಯಲ್ಲಿ ಕುಳಿತು ದೋಣಿ ಮಾಡಿದರು. ವಸೂಧರಾ ಧೋಣಿ ಮಾಡುವುದನ್ನು ರಿಷಿಗೆ ಹೇಳಿಕೊಟ್ಟಳು. ಬಳಿಕ ರಿಷಿ ಹ್ಯಾಂಡ್ ರೈಟಿಂಗ್ ಹೇಗಿದೆ ಎಂದು ನೋಡಲು ಲೀವ್ ಲೆಟರ್ ಬರೆಸಿದಳು. ಆ ಮೂಲಕ ವಸೂಧರಾ ತನಗೆ ಲವ್ ಲೆಟರ್ ಬರೆದಿದ್ದು ರಿಷಿನೇ ಇರಬಹುದಾ ಎನ್ನುವುದು ಗೊತ್ತಾಲಿದೆ ಎಂದು ಕೊಂಡಳು. ಆದರೆ ವಸು ಪ್ಲಾನ್ ರಿಷಿಗೆ ಅರ್ಥವಾಯಿತು. ತಾನು ಬರೆದ ಲೆಟರ್ ಅನ್ನು ಅರ್ಧಕ್ಕೆ ನಿಲ್ಲಿಸಿದ. ಲೆಟರ್ ಕೊಡಿ ಎಂದು ವಸೂಧರಾ ಎಷ್ಟೇ ಕೇಳಿದರೂ ರಿಷಿ ಕೊಟ್ಟಿಲ್ಲ. ಅಷ್ಟರಲ್ಲೇ ಲೈಬ್ರರಿಯನ್ ಕಾಲೇಜಿಗೆ ಎಂಟ್ರಿ ಕೊಟ್ಟ. ರಿಷಿಗಾಗಿ ಕಾಲೇಜು ಹೊರಗೆ ಗೌತಮ್ ಕಾಯುತ್ತಿದ್ದ. ಲೈಬ್ರರಿಯನ್ ಜೊತೆ ಗೌತಮ್ ಕೂಡ ಲೈಬ್ರರಿ ಕಡೆ ಓಡಿ ಬಂದ. ಲಾಕ್ ಓಪನ್ ಮಾಡಿದ ಗೌತಮ್‌ಗೆ ರಿಷಿ ಜೊತೆ ವಸೂಧರಾ ಕೂಡ ಇದ್ದಿದ್ದು ನೋಡಿ ಶಾಕ್ ಆಯಿತು. ವಸೂಧರಾ ನೀನೇನು ಮಾಡ್ತಿದ್ದೀಯಾ ಇಲ್ಲಿ ಎಂದು ಪ್ರಶ್ನಿಸಿದ. ತಾನು ಪ್ರೀತಿಸುತ್ತಿರುವ ವಸೂಧರಾಳನ್ನೇ ತನ್ನ ಗೆಳೆಯ ರಿಷಿ ಕೂಡ ಪ್ರೀತಿಸುತ್ತಿದ್ದಾನೆ ಎನ್ನುವ ಸತ್ಯ ಗೊತ್ತಾಗುತ್ತಾ? ವಸೂಧರಾಳನ್ನು ಗೆಳೆಯನಿಗೆ ಬಿಟ್ಟುಕೊಡುತ್ತಾನಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:11 am, Wed, 12 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ