ಈ ವಾರದ ಎಲಿಮಿನೇಷ್​ನಲ್ಲಿ ಟ್ವಿಸ್ಟ್? ದೊಡ್ಡ ಸೂಚನೆ ಕೊಟ್ಟ ಬಿಗ್ ಬಾಸ್

|

Updated on: Dec 07, 2024 | 3:02 PM

ಈ ವಾರ ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ, ರಜತ್ ಈ ವಾರ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಯಾವುದೇ ವೋಟಿಂಗ್ ಲೈನ್ ತೆಗೆದಿಲ್ಲ. ಜನರಿಗೆ ವೋಟ್ ಮಾಡುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಿಲ್ಲ.

ಈ ವಾರದ ಎಲಿಮಿನೇಷ್​ನಲ್ಲಿ ಟ್ವಿಸ್ಟ್? ದೊಡ್ಡ ಸೂಚನೆ ಕೊಟ್ಟ ಬಿಗ್ ಬಾಸ್
ಸುದೀಪ್
Follow us on

ಪ್ರತಿ ಬಾರಿ ಎಲಿಮಿನೇಷನ್ ನಡೆಯುವಾಗ ಒಂದೊಂದು ಟ್ವಿಸ್ಟ್​ನ ಬಿಗ್ ಬಾಸ್ ನೀಡುತ್ತಾರೆ. ವಾರದಿಂದ ವಾರಕ್ಕೆ ಇದು ಭಿನ್ನವಾಗಿರುತ್ತದೆ. ಈಗಾಗಲೇ ಎರಡು ತಿಂಗಳು ಪೂರ್ಣಗೊಳಿಸಿರೋ ಬಿಗ್ ಬಾಸ್ ದೊಡ್ಡ ಟ್ವಿಸ್ಟ್ ಕೊಡಲು ರೆಡಿ ಆಗಿದೆ. ಅಷ್ಟಕ್ಕೂ ಏನು ಆ ಟ್ವಿಸ್ಟ್? ಈ ವಾರ ವೀಕ್ಷಕರು ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ, ರಜತ್ ಈ ವಾರ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಯಾವುದೇ ವೋಟಿಂಗ್ ಲೈನ್ ತೆಗೆದಿಲ್ಲ. ಜನರಿಗೆ ವೋಟ್ ಮಾಡುವ ಅವಕಾಶವನ್ನು ಜಿಯೋ ಸಿನಿಮಾದಲ್ಲಿ ನೀಡಿಲ್ಲ. ಹೀಗಾಗಿ, ಈ ವಾರ ಎಲಿಮಿನೇಷನ್ ನಡೆಯೋದು ಅನುಮಾನ ಎನ್ನಲಾಗುತ್ತಿದೆ.

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಕೊನೆಯದಾಗಿ ಇದ್ದವರು ಶಿಶಿರ್ ಹಾಗೂ ಐಶ್ವರ್ಯಾ. ಆದರೆ, ಶೋಭಾ ಶೆಟ್ಟಿ ಅವರು ಅನಾರೋಗ್ಯ ಕಾರಣ ನೀಡಿ ಎಲಿಮಿನೇಟ್ ಆದರು. ಈ ಮೂಲಕ ಶಿಶಿರ್ ಹಾಗೂ ಐಶ್ವರ್ಯನ ಸೇವ್​ ಮಾಡಲಾಯಿತು. ಈ ವಾರ ಆ ಪ್ರಕ್ರಿಯೆಯನ್ನು ಮುಂದುವರಿಸಿ ಶಿಶಿರ್ ಹಾಗೂ ಐಶ್ವರ್ಯಾ ನಡುವೆ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್​ನ ಇಮಿಟೇಟ್ ಮಾಡಿದ್ದ ಪ್ರಿಯಾಮಣಿ

ಸದ್ಯ ಬಿಗ್ ಬಾಸ್ ಮನೆಯಲ್ಲಿ 11 ಜನರು ಇದ್ದಾರೆ. ಟಾಪ್ ಐವರನ್ನು ಬಿಟ್ಟರೆ ಉಳಿಯೋದು ಕೇವಲ ಆರು ಸ್ಪರ್ಧಿಗಳು ಮಾತ್ರ. ಮುಂಬರುವ ವಾರಗಳ ಸಂಖ್ಯೆ ಹಾಗೂ ಎಲಿಮಿನೇಟ್ ಆಗಬೇಕಿರುವ ಸ್ಪರ್ಧಿಗಳ ಸಂಖ್ಯೆ ಸರಿ ಸಮನವಾಗಿದೆ ಎನ್ನಬಹುದು. ಮುಂದಿನ ದಿನಗಳಲ್ಲಿ ಡಬಲ್ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಯಬಹುದು. ಈ ಕಾರಣಕ್ಕೆ ಈ ವಾರ ಯಾರನ್ನೂ ಎಲಿಮಿನೇಟ್ ಮಾಡದೆಯೂ ಇರಬಹುದು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:00 am, Sat, 7 December 24