ಚೀನಾದಲ್ಲಿ ದೊಡ್ಡ ಬದಲಾವಣೆಗೆ ಕಾರಣಾಗಿದೆ ಈ ಸಿನಿಮಾ: ಇದಲ್ಲವೆ ನಿಜವಾದ ಯಶಸ್ಸು

Big World movie: ಮೊದಲೆಲ್ಲ ಸಿನಿಮಾದ ಕತೆ, ನಟನೆ ಇನ್ನಿತರೆ ಅಂಶಗಳ ಮೇಲೆ ಸಿನಿಮಾದ ಗೆಲುವು ನಿಶ್ಚಯ ಆಗುತ್ತಿತ್ತು ಆದರೆ ಈಗ ಬಾಕ್ಸ್ ಆಫೀಸ್ ಸಂಖ್ಯೆಯ ಮೇಲೆ ನಿರ್ಧಾರಿತವಾಗುತ್ತದೆ. ಆದರೆ ಇದು ನಿಜವಾದ ಯಶಸ್ಸೆ? ಖಂಡಿತ ಅಲ್ಲ. ಇತ್ತೀಚೆಗೆ ಸಿನಿಮಾ ಒಂದು ವಿಶ್ವದ ಅತಿ ದೊಡ್ಡ ದೇಶಗಳಲ್ಲಿ ಒಂದಾದ ಚೀನಾದ ಜನರ, ಸರ್ಕಾರದ ಮನಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಭಾರಿ ಬದಲಾವಣೆಗೆ ಕಾರಣವಾಗಿದೆ.

ಚೀನಾದಲ್ಲಿ ದೊಡ್ಡ ಬದಲಾವಣೆಗೆ ಕಾರಣಾಗಿದೆ ಈ ಸಿನಿಮಾ: ಇದಲ್ಲವೆ ನಿಜವಾದ ಯಶಸ್ಸು
Big World

Updated on: Mar 15, 2026 | 8:43 PM

ಸಿನಿಮಾಗಳ ಯಶಸ್ಸನ್ನು ಬಾಕ್ಸ್ ಆಫೀಸ್​​ (Box Office) ಸಂಖ್ಯೆಯ ಮೇಲೆ ಅಳೆಯಲಾಗುತ್ತದೆ. ಸಿನಿಮಾ ಒಂದು ಬಾಕ್ಸ್ ಆಫೀಸ್​​ನಲ್ಲಿ ಗಳಿಸುವ ಹಣ ಆ ಸಿನಿಮಾದ ಯಶಸ್ಸಿನ ಮಾನದಂಡವಾಗಿದೆ. ಭಾರತದಲ್ಲಂತೂ ಈ ಬಾಕ್ಸ್ ಆಫೀಸ್ ಲೆಕ್ಕಾಚಾರ ಮಿತಿ ಮೀರಿ ಬೆಳೆದುಬಿಟ್ಟಿದೆ. ಮೊದಲೆಲ್ಲ ಸಿನಿಮಾದ ಕತೆ, ನಟನೆ ಇನ್ನಿತರೆ ಅಂಶಗಳ ಮೇಲೆ ಸಿನಿಮಾದ ಗೆಲುವು ನಿಶ್ಚಯ ಆಗುತ್ತಿತ್ತು ಆದರೆ ಈಗ ಬಾಕ್ಸ್ ಆಫೀಸ್ ಸಂಖ್ಯೆಯ ಮೇಲೆ ನಿರ್ಧಾರಿತವಾಗುತ್ತದೆ. ಆದರೆ ಇದು ನಿಜವಾದ ಯಶಸ್ಸೆ? ಖಂಡಿತ ಅಲ್ಲ. ಇತ್ತೀಚೆಗೆ ಸಿನಿಮಾ ಒಂದು ವಿಶ್ವದ ಅತಿ ದೊಡ್ಡ ದೇಶಗಳಲ್ಲಿ ಒಂದಾದ ಚೀನಾದ ಜನರ, ಸರ್ಕಾರದ ಮನಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಭಾರಿ ಬದಲಾವಣೆಗೆ ಕಾರಣವಾಗಿದೆ.

‘ಬಿಗ್ ವರ್ಲ್ಡ್’ ಹೆಸರಿನ ಚೀನಾ ಭಾಷೆಯ ಸಿನಿಮಾ 2024ರ ಡಿಸೆಂಬರ್​ನಲ್ಲಿ ಬಿಡುಗಡೆ ಆಗಿತ್ತು. ಸೆರೆಬ್ರಲ್ ಪ್ಯಾಲಸಿ ಸಮಸ್ಯೆಯಿಂದ ಬಳಲುತ್ತಿರುವ ಯುವಕನೊಬ್ಬನ ಕತೆಯನ್ನು ಸಿನಿಮಾ ಒಳಗೊಂಡಿತ್ತು. ಈ ಸಮಸ್ಯೆ ಉಳ್ಳ ವ್ಯಕ್ತಿಗಳು ಸಾಮಾನ್ಯರಂತೆಯೇ ಬುದ್ಧಿಮತ್ತೆ ಹೊಂದಿರುತ್ತಾರೆ, ಆದರೆ ಅವರಿಗೆ ತಮ್ಮ ದೇಹದ ಮೇಲೆ ಹಿಡಿತ ಇರುವುದಿಲ್ಲ, ನೆಟ್ಟಗೆ ನಡೆಯಲು ಆಗದು, ಅಲುಗಾಡುತ್ತಲೇ ಇರುತ್ತಾರೆ. ಊಟ ಮಾಡಲು ಸಹ ಕಷ್ಟವಾಗುವಂಥಹಾ ದೇಹ ಪರಿಸ್ಥಿತಿ ಇವರಿಗೆ ಇರುತ್ತದೆ. ಆದರೆ ಸಾಮಾನ್ಯ ಮನುಷ್ಯರಂತೆ ಯೋಚಿಸಬಲ್ಲರು, ಓದಬಲ್ಲರು, ಬರೆಯಬಲ್ಲರು ಆದರೆ ದೇಹ ಮಾತ್ರ ನ್ಯೂನ್ಯತೆಯಿಂದ ಕೂಡಿರುತ್ತದೆ.

ಈ ರೀತಿಯ ಸೆರಬ್ರಲ್ ಪ್ಯಾಲಸಿ ಹೊಂದಿರುವ ಯುವಕನೊಬ್ಬ ಇತರರಂತೆ ತಾನೂ ಸಾಮಾನ್ಯ ಜೀವನ ನಡೆಸುವ ಕನಸು ಕಂಡು ಅದಕ್ಕಾಗಿ ಹೋರಾಡುವ ಕತೆಯನ್ನು ‘ಬಿಗ್ ವರ್ಲ್ಡ್’ ಸಿನಿಮಾ ಒಳಗೊಂಡಿತ್ತು. ಸೆರೆಬ್ರಲ್ ಪ್ಯಾಲಸಿ ಹೊಂದಿರುವವರು ದಿನನಿತ್ಯದ ಬದುಕಿನಲ್ಲಿ ಎಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ಅದ್ಭುತವಾಗಿ ತೋರಿಸಿತ್ತು. ಸಾಮಾನ್ಯ ಜಗತ್ತು ಹೇಗೆ ಕೇವಲ ಸಾಮಾನ್ಯರಿಗಾಗಿ ಮಾತ್ರವೇ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ, ಸೆಲೆಬ್ರಲ್ ಪ್ಯಾಲಸಿ ಅಥವಾ ಇನ್ಯಾವುದೇ ಅಂಗವೈಕಲ್ಯ ಹೊಂದಿರುವವರನ್ನು ಹೇಗೆ ನಿರ್ಲಕ್ಷಿಸಲಾಗಿದೆ ಎಂಬುದನ್ನು ತೋರಿಸಲಾಗಿತ್ತು.

ಇದನ್ನೂ ಓದಿ:’ಜನ ನಾಗಯನ್‘ ಸಿನಿಮಾ: ಯಶಸ್ವಿಯಾಯ್ತು ವಿಜಯ್ ರಾಜಕೀಯ ವಿರೋಧಿಗಳ ಪ್ಲ್ಯಾನ್

ಈ ಸಿನಿಮಾ ದೊಡ್ಡ ಹಿಟ್ ಆಗಲಿಲ್ಲ ಆದರೆ ಅದೆಷ್ಟು ಪರಿಣಾಮ ಬೀರಿತೆಂದರೆ ಶಾಲಾ, ಕಾಲೇಜುಗಳು ಸೆಲೆಬ್ರಲ್ ಪ್ಯಾಲಸಿ ಹೊಂದಿರುವ ವಿದ್ಯಾರ್ಥಿಗಳನ್ನು ಸಾಮಾನ್ಯ ತರಗತಿಗೆ ಸೇರಿಸಿಕೊಳ್ಳುವಂತಾಯ್ತು. ಯಾವ ಮಟ್ಟಿಗೆ ಬದಲಾವಣೆ ಆಯ್ತೆಂದರೆ ರೆಸ್ಟೊರೆಂಟ್ ಒಂದರಲ್ಲಿ ಸೆರಬ್ರಲ್ ಪ್ಯಾಲಸಿ ಉಳ್ಳ ವ್ಯಕ್ತಿಯನ್ನು ನೌಕರಿಗೆ ಸೇರಿಸಿಕೊಳ್ಳುವ ಜೊತೆಗೆ ಅವರ ಕೆಲಸಕ್ಕೆ ಅನುಕೂಲ ಆಗುವಂತೆ ವ್ಯವಸ್ಥೆ ಸಹ ಮಾಡಿಕೊಡಲಾಯ್ತು. ಹಲವಾರು ವಿಭಾಗಗಳಲ್ಲಿ ಸೆರಬ್ರಲ್ ಪ್ಯಾಲಸಿ ಹೊಂದಿರುವವರಿಗೆ ಉದ್ಯೋಗ ನೀಡಲಾಯ್ತು. ಸ್ವತಃ ಸರ್ಕಾರವೇ ಹಲವು ಬದಲಾವಣೆಗಳನ್ನು ನಿಯಮಗಳಲ್ಲಿ ಮಾಡಿದ್ದಲ್ಲೆ, ಸಾರ್ವಜನಿಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯವನ್ನು ಬದಲಾವಣೆ ಮಾಡಿತು.

ಸಿನಿಮಾದ ಮತ್ತೊಂದು ಪ್ರಮುಖ ಅಂಶವನ್ನು ಹೇಳಲೇ ಬೇಕು. ಅದುವೇ ಸಿನಿಮಾದ ನಾಯಕ ಜಾಕ್​​ಸನ್ ಯೀ. ಅದೆಷ್ಟು ಅದ್ಭುತವಾಗಿ ಇವರು ಸೆರಬ್ರಲ್ ಪ್ಯಾಲಸಿ ಇರುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆಂದರೆ, ನಿಜಕ್ಕೂ ಆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೇ ಇವರೇನೋ ಎನಿಸುವಷ್ಟು ಆ ಪಾತ್ರದಲ್ಲಿ ಮುಳುಗಿ ಹೋಗಿದ್ದಾರೆ. ಸಿನಿಮಾ ಇಂಗ್ಲೀಷ್ ಸಬ್​​ಟೈಟಲ್ಸ್​​ಗಳ ಜೊತೆಗೆ ಯೂಟ್ಯೂಬ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ ಆಸಕ್ತಿ ಉಳ್ಳವರು ನೋಡಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us