BBK8 Elimination: 14 ಸ್ಪರ್ಧಿಗಳ ಪೈಕಿ ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇನಾ?

|

Updated on: Mar 27, 2021 | 3:17 PM

ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಚಂದ್ರಕಲಾ, ವೈಷ್ಣವಿ, ಶುಭಾ ಪೂಂಜಾ, ಪ್ರಶಾಂತ್​ ಸಂಬರಗಿ, ರಾಜೀವ್​, ಮಂಜು ಪಾವಗಡ, ವಿಶ್ವ, ರಘು ಗೌಡ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​ ಡೇಂಜರ್​ ಜೋನ್​ನಲ್ಲಿದ್ದಾರೆ.

BBK8 Elimination: 14 ಸ್ಪರ್ಧಿಗಳ ಪೈಕಿ ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವವರು ಇವರೇನಾ?
ಬಿಗ್ ​ಬಾಸ್​ ಮನೆ
Follow us on

ಬಿಗ್​ ಬಾಸ್​ ಮನೆಯಲ್ಲಿ ನಾಲ್ಕನೇ ವಾರದ ಎಲಿಮಿನೇಷನ್​ ನಡೆಯುತ್ತಿದೆ. ಮನೆಯಲ್ಲಿರುವ 14 ಸದಸ್ಯರ ಪೈಕಿ 13 ಜನ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ. ಇವರಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಈ ವಾರ ದೊಡ್ಮನೆಯ ಪಯಣ ಮುಗಿಸುವವರು ಯಾರು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಆರಂಭವಾಗಿದೆ.

ಎಲಿಮಿನೆಷನ್​ಗೆ ನಾಮಿನೇಟ್​ ಮಾಡಲು ಪ್ರತಿ ಬಾರಿ ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಈ ಅವಕಾಶವನ್ನು ಬಿಗ್​ ಬಾಸ್​ ಕಿತ್ತುಕೊಂಡಿದ್ದರು. ಕ್ಯಾಪ್ಟನ್​ ಆಗಿದ್ದ ಅರವಿಂದ್ ಕೆ.ಪಿ. ಅವರನ್ನು ಹೊರತುಪಡಿಸಿ ಉಳಿದ 13 ಸ್ಪರ್ಧಿಗಳು ನೇರವಾಗಿ ನಾಮಿನೇಟ್​ ಆಗಿದ್ದರು. ವೀಕ್ಷಕರು ನಾಮಿನೇಟ್​ ಆದ ಸ್ಪರ್ಧಿಗೆ ವೋಟ್​ ಮಾಡಬೇಕು. ಅತಿ ಹೆಚ್ಚು ವೋಟ್​ ಬಿದ್ದವರು ಸೇಫ್​ ಆದಂತೆ. ಅತಿ ಕಡಿಮೆ ಮತ ಪಡೆದವರು ಮನೆಯಿಂದ ಹೊರಬೀಳುತ್ತಾರೆ.

ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಚಂದ್ರಕಲಾ, ವೈಷ್ಣವಿ, ಶುಭಾ ಪೂಂಜಾ, ಪ್ರಶಾಂತ್​ ಸಂಬರಗಿ, ರಾಜೀವ್​, ಮಂಜು ಪಾವಗಡ, ವಿಶ್ವ, ರಘು ಗೌಡ, ಶಮಂತ್​ ಬ್ರೋ ಗೌಡ, ಶಂಕರ್​ ಅಶ್ವತ್ಥ್​ ಡೇಂಜರ್​ ಜೋನ್​ನಲ್ಲಿದ್ದಾರೆ. ಇವರಲ್ಲಿ ಒಬ್ಬರ ಪಯಣ ಈ ವಾರ ಅಂತ್ಯವಾಗಲಿದೆ.

ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಕೆಲವರ ಪರ್ಫಾರ್ಮೆನ್ಸ್​ ಉತ್ತಮವಾಗಿದೆ. ಇನ್ನೂ ಕೆಲವರ ಪರ್ಫಾರ್ಮೆನ್ಸ್ ಕುಗ್ಗಿದೆ. ಇದು ಎಲಿಮಿನೇಷನ್​ನಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆಯಲಿದೆ. ಮೊದಲ ಎರಡು ವಾರ ವೀಕ್​ ಇದ್ದ ವಿಶ್ವ ನಂತರ ಆ್ಯಕ್ಟಿವ್​ ಆಗಿದ್ದರು. ಅವರು ಮನೆಯ ಕ್ಯಾಪ್ಟನ್​ ಕೂಡ ಆಗಿದ್ದಾರೆ. ಹೀಗಾಗಿ ಅವರು ಮನೆಯಿಂದ ಹೊರ ಹೋಗೋದು ಅನುಮಾನ.

ರಘು ಗೌಡ, ಶಮಂತ್​ ಬ್ರೋ ಗೌಡ ಅವರ ಪರ್ಫಾರ್ಮೆನ್ಸ್​ ತುಂಬಾನೇ ಸುಧಾರಿಸಿದೆ. ಹೀಗಾಗಿ ಇವರನ್ನು ಮನೆಯಿಂದ ಹೊರ ಕಳುಹಿಸುವುದು ಅನುಮಾನವೇ. ಶುಭಾ ಪೂಂಜಾ, ಪ್ರಶಾಂತ್​ ಸಂಬರಗಿ, ರಾಜೀವ್​, ಮಂಜು ಪಾವಗಡ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಅವರು ಈ ವಾರವೂ ಸೇಫ್​ ಆಗುವ ಸಾಧ್ಯತೆ ಇದೆ. ಉಳಿದಂತೆ, ವೈಷ್ಣವಿ ದಿವ್ಯಾ ಉರುಡುಗ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​ ಕೂಡ ಮನೆಯಲ್ಲಿ ಉತ್ತಮವಾಗಿಯೇ ಆಟವಾಡುತ್ತಿದ್ದಾರೆ. ಇವರು ಕೂಡ ಈ ವಾರ ಸೇಫ್​ ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಈ ವಾರ ಶಂಕರ್ ಅಶ್ವತ್ಥ್​ ಅಥವಾ ಚಂದ್ರಕಲಾ ಮನೆಯಿಂದ ಹೊರ ಹೋಗಬಹುದು ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಕಳೆದ ವಾರಗಳಿಗೆ ಹೋಲಿಸಿದರೆ ಶಂಕರ್​ ಅಶ್ವತ್ಥ್​ ಡಲ್​ ಆಗಿದ್ದಾರೆ. ಆರೋಗ್ಯ ದೃಷ್ಟಿಯಲ್ಲೂ ಅವರು ಸ್ವಲ್ಪ ಕುಗ್ಗಿದಂತೆ ಕಾಣುತ್ತದೆ. ಇನ್ನು, ಮನೆಯಲ್ಲಿ ಚಂದ್ರಕಲಾ ಅವರಿಂದ ಅಷ್ಟೊಂದು ಅದ್ಭುತವಾಗಿ ಆಟ ಮೂಡಿ ಬರುತ್ತಿಲ್ಲ. ಹೀಗಾಗಿ, ಇವರಲ್ಲಿ ಒಬ್ಬರು ಎಲಿಮಿನೇಟ್​ ಆಗಬಹುದು.

ಇದನ್ನೂ ಓದಿ: ‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!