ಬಿಗ್​ಬಾಸ್ ಮನೆ ಸೇರಿ ಹೆಂಡತಿ ಹೆಸರೇ ಮರೆತೋಯ್ತು; ಮುಂದೆ ಇನ್ನೂ ಏನೇನು ಆಗುತ್ತೋ..

BiggBoss Kannada: ಏನು ಮರೆತರೂ ಸ್ವಂತ ಹೆಂಡತಿಯ ಹೆಸರನ್ನೇ ರಘು ಮರೆಯಬಹುದಾ ಎಂದು ರಘು ಗೌಡರನ್ನು ಎಲ್ಲರೂ ಕಾಲೆಳೆಯುತ್ತಿದ್ದಾರೆ. ಬಿಗ್​ಬಾಸ್  ಮುಗಿದ ಮತ್ತೆ ಮನೆ ಸೇರಿದ ಮೇಲೆ ಹೆಂಡತಿ ಹೆಸರು ಮರೆತಿದ್ದು ನೆನಪಿಸಿಕೊಂಡು ಮತ್ತೆ ಏನೆಲ್ಲಾ ಆಗಲಿದೆಯೋ.. 

  • TV9 Web Team
  • Published On - 20:40 PM, 13 Apr 2021
ಬಿಗ್​ಬಾಸ್ ಮನೆ ಸೇರಿ ಹೆಂಡತಿ ಹೆಸರೇ ಮರೆತೋಯ್ತು; ಮುಂದೆ ಇನ್ನೂ ಏನೇನು ಆಗುತ್ತೋ..
ರಘು ಗೌಡ - ಬಿಗ್​ ಬಾಸ್

ಬಿಗ್​ಬಾಸ್​ ಎಂದರೆ ಹಾಗೇ, ಒಂದೋ ಮಜ, ಕುತೂಹಲ ಮತ್ತು ಮೈಂಡ್ ಗೇಮಿಂಗ್. ಎಂಥದ್ದೇ ಪಂಟರ್ ಆದರೂ ಬಿಗ್​ಬಾಸ್​ನಲ್ಲಿ ಕಾಲೆಳೆಯುವವರು ಇದ್ದೇ ಇರುತ್ತಾರೆ. ಹೀಗೆಲ್ಲ ಇರುವಾಗ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಯೋರ್ವರಿಗೆ ಹೆಂಡತಿಯ ಹೆಸರೇ ಮರೆತುಹೋಗಿದೆ. ಹೆಂಡತಿಯ ಹೆಸರು ಮರೆತ ಘಟನೆ ಕುಳಿತು ಮಾತನಾಡುವಾಗ ಬಯಲಾಗಿದೆ.

ವೈಷ್ಣವಿ ಗೌಡ, ಶುಭಾ ಪೂಂಜಾ ಮತ್ತು ರಾಜೀವ್ ಒಂದೆಡೆ ಮಾತನಾಡುತ್ತಾ ಕುಳಿತಿರುತ್ತಾರೆ. ಆಗ ಶುಭಾ ಪೂಂಜಾ ಬಾಯಿಗೆ ಕೆಲಸ ಕೊಡುತ್ತಾರೆ. ಸುಮ್ಮನೆ  ರಘು ಗೌಡರನ್ನು ಕಿಚಾಯಿಸಿದರು. ಏ ರಘೂ..ಕೈ ಮಸಾಜ್ ಮಾಡಿದ್ಯಾ,  ಎಂದು ರಘು ಗೌಡರ ಕಾಲೆಳೆದರು. ಆಗ ಶುಭಾ ಪೂಂಜಾ ವಿದ್ಯಾ, ‘ಸ್ಪೋರ್ಟಿವ್ ಆಗಿ ತಕೋ ವಿದ್ಯಾ’ ಎಂದು ರಘುವಿನ ಕಾಲೆಳೆದರು. ಆಗಲೇ ವೈಷ್ಣವಿ ಗೌಡ ಅಲಿಯಾಸ್ ಸನ್ನಿಧಿ ಯಾರಮ್ಮಾ ವಿದ್ಯಾ? ಎಂದು ಕೇಳಿದರು. ಆಗಲೇ ಹೊರಬಿತ್ತು ರಹಸ್ಯ!

ರಘು ನಾಮಿನೇಷನ್ ಆಗಿಲ್ಲವಾ ಎಂದು ರಾಜೀವ್ ಕೇಳಿದರು. ಆಗ ದೂರದಲ್ಲಿ ಕುಳಿತಿದ್ದ ರಘು ಗೌಡ ಇಲ್ಲ ಎಂದು ಅಲ್ಲಿಂದಲೇ ತಲೆ ಆಡಿಸಿದರು. ಮೊದಲು ನಮ್ಮ ಹಿಂದೆಯೇ ತಿರುಗಾಡುತ್ತಿದ್ದೆ, ಆದರೆ ಈಗ ತಿರುಗಾಡೋದೇ ಇಲ್ಲ ಎಂದು ವೈಷ್ಣವಿ ಮತ್ತೆ ಕಾಲೆಳೆದರು. ಆಗಲೇ ವಿದ್ಯಾ ಸ್ಪೋರ್ಟಿವ್ ಆಗಿ ತಕೋ ಎನ್ನುತ್ತಾರೆ ಶುಭಾ ಪೂಂಜಾ. ಇದೇ ಸಂದರ್ಭದಲ್ಲಿ ರಘುವಿಗೆ ಕಿಚಾಯಿಸಿದ ವಿದ್ಯಾ ಯಾರು ಎಂಬ ಕುತೂಹಲದ ಸತ್ಯ ಹೊರಬೀಳುತ್ತದೆ. ರಘು ನಿನ್ನೆ ಹೆಂಡತಿಯ ಹೆಸರು ಹೇಳುವಾಗ ವಿದ್ಯಾ ಎನ್ನುವ ಬದಲು ದಿವ್ಯಾ ಎಂದು ಹೇಳಿದ್ದು ವೈಷ್ಣವಿ ಬಾಯಿಂದ ಹೊರಬೀಳುತ್ತದೆ. ನಿನ್ನೆಯ ಘಟನೆಯನ್ನು ನೆನಪಿಸಿಕೊಂಡು ವೈಷ್ಣವಿ ಮತ್ತು ಶುಭಾ ಪೂಂಜಾ ನಗುತ್ತಾರೆ.

ಹೀಗೆ ರಘು ಗೌಡ ಬಿಗ್​ಬಾಸ್​ನಲ್ಲಿ ಹೆಂಡತಿಯ ಹೆಸರನ್ನೇ ಮರೆತಿದ್ದು ಬಯಲಿಗೆ ಬಂದಿದೆ. ರಘು ಗೌಡ ಹೆಂಡತಿಯ ಹೆಸರು ಮರೆತ ಕಥೆ ಇದೀಗ ಸಖತ್ ಮಜಾ ಕೊಡುತ್ತಿದೆ. ಏನು ಮರೆತರೂ ಸ್ವಂತ ಹೆಂಡತಿಯ ಹೆಸರನ್ನೇ ರಘು ಮರೆಯಬಹುದಾ ಎಂದು ರಘು ಗೌಡರನ್ನು ಎಲ್ಲರೂ ಕಾಲೆಳೆಯುತ್ತಿದ್ದಾರೆ. ಬಿಗ್​ಬಾಸ್  ಮುಗಿದ ಮತ್ತೆ ಮನೆ ಸೇರಿದ ಮೇಲೆ ಹೆಂಡತಿ ಹೆಸರು ಮರೆತಿದ್ದು ನೆನಪಿಸಿಕೊಂಡು ಮತ್ತೆ ಏನೆಲ್ಲಾ ಆಗಲಿದೆಯೋ..

ಇದನ್ನೂ ಓದಿ: ಸಂಬರಗಿ ಎದುರು ಹಾಕ್ಕೊಂಡ ಮಂಜುಗೆ ಬಿಗ್​ಬಾಸ್​ ಮನೆಯಲ್ಲಿ ಇನ್ಮೇಲೆ ಕಷ್ಟಕಾಲ!

BBK 8 Wild Card Entry: ಬಿಗ್​ಬಾಸ್​ಗೆ ಮತ್ತೊಂದು ವೈಲ್ಡ್​ ಕಾರ್ಡ್​ ಎಂಟ್ರಿ: ಆದ್ರೆ ಈ ನಟಿ ಮನೆಗೆ ಕಾಲಿಡುತ್ತಿದ್ದಂತೆ ಮಂಜು ನಾಪತ್ತೆ!