ಕನ್ನಡ ಬಿಗ್ ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್ನಲ್ಲಿ ಮೊದಲ ಎಲಿಮಿನೇಷನ್ ನಡೆದಿದೆ. ಇದಾದ ಮರುದಿನವೇ ಎರಡನೇ ಎಲಿಮಿನೇಷನ್ಗೆ ನಾಮಿನೇಷನ್ ನಡೆದಿದೆ. ಮನೆಯ ಬಹುತೇಕ ಸದಸ್ಯರು ಈ ವಾರ ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದಾರೆ. ಈ ಮೂಲಕ ಎಲ್ಲಾ ಸ್ಪರ್ಧಿಗಳು ಅತ್ಯುತ್ತಮವಾಗಿ ಪರ್ಫಾರ್ಮೆನ್ಸ್ ಮಾಡೋದು ಅನಿವಾರ್ಯವಾಗಿದೆ.
ದಿವ್ಯಾ ಉರುಡುಗ ಮನೆಯ ಕ್ಯಾಪ್ಟನ್. ಅರವಿಂದ್ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಈ ಇಬ್ಬರು ಸದಸ್ಯರನ್ನು ಬಿಟ್ಟು ಉಳಿದವರ ಹೆಸರನ್ನು ಆಯ್ಕೆ ಮಾಡಬೇಕಿತ್ತು. ನಾಮಿನೇಷನ್ ವೇಳೆ ಚಕ್ರವರ್ತಿ ಚಂದ್ರಚೂಡ್ಗೆ ಹೆಚ್ಚು ಮತಗಳು ಬಿದ್ದವು. ಚಕ್ರವರ್ತಿ ಮನೆಯ ವಾತಾವರಣ ಹಾಳು ಮಾಡುತ್ತಿದ್ದಾರೆ, ಅವರಲ್ಲಿ ಕೋಪ ಜಾಸ್ತಿ ಎಂಬಿತ್ಯಾದಿ ಆರೋಪಗಳು ಬಂದವು.
ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿರುವ ಮಂಜು ಪಾವಗಡ ನಂತರದ ಸ್ಥಾನ ಪಡೆದುಕೊಂಡರು. ಅವರು ತಮ್ಮದೇ ನಿಯಮ ಮಾಡಿಕೊಂಡು ಆಡುತ್ತಿದ್ದಾರೆ, ಗುಂಪುಗಾರಿಕೆ ಹುಟ್ಟು ಹಾಕುತ್ತಿದ್ದಾರೆ, ಸ್ಟ್ರಾಂಗ್ ಪ್ಲೇಯರ್ ಎಂಬಿತ್ಯಾದಿ ಆರೋಪಗಳು ಅವರ ವಿರುದ್ಧ ಕೇಳಿ ಬಂದವು.
ಪ್ರಿಯಾಂಕಾ ತಿಮ್ಮೇಶ್ ತುಂಬಾ ಅವಕಾಶವಾದಿ, ಅವರು ಚೆನ್ನಾಗಿ ಆಡಬಹುದಿತ್ತು ಎಂದು ಕೆಲವರು ನಾಮಿನೇಟ್ ಮಾಡಿದರು. ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ರಘು, ಶಮಂತ್, ದಿವ್ಯಾ ಸುರೇಶ್, ವೈಷ್ಣವಿ ಅವರ ಹೆಸರು ನಾಮಿನೇಷನ್ ಪಟ್ಟಿ ಸೇರಿಕೊಂಡವು.
ಕ್ಯಾಪ್ಟನ್ ಆದ ಕಾರಣ ದಿವ್ಯಾ ಉರುಡುಗ ಅವರಿಗೆ ಒಬ್ಬರನ್ನು ಸೇವ್ ಮಾಡೋಕೆ ಅವಕಾಶ ನೀಡಲಾಯಿತು. ಈ ವೇಳೆ ದಿವ್ಯಾ, ‘ಶುಭಾ ಪೂಂಜಾ ಸೇವ್ ಮಾಡ್ತೀನಿ. ಅವರು ನನಗೆ ವೈಯಕ್ತಿಕವಾಗಿ ಇಷ್ಟ. ಅವರು ಇನ್ನೂ ಮುಂದೆ ಹೋಗಬೇಕು ಅಂತ ನಂಗೆ ಇಷ್ಟ’ ಎಂದು ಸೇವ್ ಮಾಡಿದರು. ಅರವಿಂದ್ ನೇರವಾಗಿ ನಾಮಿನೇಟ್ ಆದ್ದರಿಂದ ಅವರನ್ನು ಸೇವ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿಲ್ಲ.
ಹೀಗಾಗಿ ಈ ವಾರ ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ರಘು ಗೌಡ, ಶಮಂತ್ ಬ್ರೋ ಗೌಡ, ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿದೆ.
ಇದನ್ನೂ ಓದಿ:
‘ಮಂಜು ಬೆಂಬಲಿಗರ ವೋಟ್ ನಂಗೆ ಸಿಗಲ್ಲ’; ದಿವ್ಯಾ ಸುರೇಶ್ ಲೆಕ್ಕಾಚಾರ ಉಲ್ಟಾಪಲ್ಟಾ
Divya Uruduga: ಕನ್ನಡ ಬಿಗ್ ಬಾಸ್ ಸೀಸನ್ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ