BBK8 Elimination: ‘ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಔಟ್​ ಆದ ಮೊದಲ ವ್ಯಕ್ತಿ ನಾನು’

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್​ ಮೇಲೆ ಎಲಿಮಿನೇಷನ್​​ ತೂಗುಗತ್ತಿ ತೂಗುತ್ತಿತ್ತು

BBK8 Elimination: ‘ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಔಟ್​ ಆದ ಮೊದಲ ವ್ಯಕ್ತಿ ನಾನು’
ಪ್ರಶಾಂತ್​ ಸಂಬರಗಿ
Edited By:

Updated on: Jun 27, 2021 | 7:29 PM

‘ಕನ್ನಡ ಬಿಗ್​ ಬಾಸ್ ಸೀಸನ್​ 8’​ ಎರಡನೇ ಇನ್ನಿಂಗ್ಸ್​ನಲ್ಲಿ ಮೊದಲು ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೆ ಕಲರ್ಸ್​ ಕನ್ನಡ ವಾಹಿನಿ ಉತ್ತರ ಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್​ ಬಾಸ್​ನ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಪ್ರಶಾಂತ್ ಸಂಬರಗಿ ಎಲಿಮಿನೇಟ್​ ಆಗಿದ್ದು ಕಂಡು ಬಂದಿದೆ. ಆದರೆ, ಈವಾರದ ಎಲಿಮಿನೇಷನ್​ನಲ್ಲಿ ಒಂದು ಟ್ವಿಸ್ಟ್​ ಇದೆ.

ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್​, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್​ ಮೇಲೆ ಎಲಿಮಿನೇಷನ್​​ ತೂಗುಗತ್ತಿ ತೂಗುತ್ತಿತ್ತು. ಸಾಮಾನ್ಯವಾಗಿ ಶನಿವಾರದ ಎಪಿಸೋಡ್​ನಲ್ಲಿ ನಾಮಿನೇಟ್​ ಆದ ಕೆಲವರನ್ನು ಸೇವ್​ ಮಾಡಲಾಗುತ್ತದೆ. ಆದರೆ, ಈ ಬಾರಿ ಆರೀತಿ ಆಗಿಲ್ಲ. ಎಲಿಮಿನೇಟ್​ ಆದವರ ಹೆಸರನ್ನು ಭಾನುವಾರ ಹೇಳುತ್ತೇನೆ ಎಂದು ಸುದೀಪ್​ ಹೇಳಿದ್ದರು.

ಈಗ ಹಂಚಿಕೊಂಡಿರುವ ಪ್ರೋಮೊದಲ್ಲಿ, ಪ್ರಶಾಂತ್​ ಎಲಿಮಿನೇಟ್​ ಆಗಿದ್ದಾರೆ ಎಂದು ಸುದೀಪ್​ ವೇದಿಕೆ ಮೇಲೆ ಘೋಷಣೆ ಮಾಡಿದರು. ಇದಾದ ಬೆನ್ನಲ್ಲೇ, ಪ್ರಶಾಂತ್ ದೊಡ್ಮನೆಯಿಂದ ಹೊರಟರು. ‘ಎರಡನೇ ಇನ್ನಿಂಗ್ಸ್​ನಲ್ಲಿ ಎಲಿಮಿನೇಟ್​ ಆಗುತ್ತಿರುವ ಮೊದಲ ಸ್ಪರ್ಧಿ ನಾನೇ’ ಎಂದು ಅವರು ಬೇಸರ ಹೊರ ಹಾಕಿದರು.

ಪ್ರಶಾಂತ್​ ಮನೆಯಿಂದ ಹೊರ ಹೋಗುತ್ತಿದ್ದಂತೆ ಬಿಗ್​ ಬಾಸ್​ನ 11 ಸ್ಪರ್ಧಿಗಳಿಗೆ ಸುದೀಪ್​ ಸೂಚನೆ ಒಂದನ್ನು ನೀಡಿದರು. ‘ಪ್ರಶಾಂತ್​ ಈ ವಾರ ಎಲಿಮಿನೇಟ್​ ಆಗಿಲ್ಲ. ಆದರೆ, ಅವರು ಬಂದ ಕೂಡಲೇ ಪ್ರಶಾಂತ್​ ಕಾಣಿಸುತ್ತಿಲ್ಲ ಎಂಬ ರೀತಿಯಲ್ಲಿ ಆ್ಯಕ್ಟ್​ ಮಾಡಿ’ ಎಂದು ಕಿಚ್ಚ ಸಲಹೆ ನೀಡಿದರು. ನಂತರ ಪ್ರಶಾಂತ್​ ಮನೆ ಒಳಗೆ ಮತ್ತೆ ಬಂದಿದ್ದಾರೆ. ಸುದೀಪ್​ ನೀಡಿದ ಸೂಚನೆಯಂತೆ ಮನೆ ಮಂದಿ ನಡೆದುಕೊಂಡಿದ್ದು, ಸಾಕಷ್ಟು ಮಜ ನೀಡಿದೆ.

ಎಲ್ಲಾ ಸ್ಪರ್ಧಿಗಳು ಬಿಗ್​ ಬಾಸ್​ ಮನೆಗೆ ಬಂದು ಕೆಲವೇ ದಿನ ಕಳೆದಿದೆ. ಯಾರು ಹೇಗೆ ಪರ್ಫಾರ್ಮೆನ್ಸ್​ ಮಾಡುತ್ತಾರೆ ಅನ್ನೋದು ಇನ್ನು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಈ ಕಾರಣಕ್ಕೆ ಈ ವಾರ ಎಲಿಮಿನೇಷನ್​ ನಡೆಯುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕನ್ನಡ ಬಿಗ್​ ಬಾಸ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಮೊದಲು ಎಲಿಮಿನೇಟ್​ ಆಗೋರು ಇವರೇನಾ?

Published On - 7:26 pm, Sun, 27 June 21

Follow Us