Bigg Boss Kannada Elimination: ಬಿಗ್​ ಬಾಸ್​ ಒಂಬತ್ತನೇ ವಾರದ ಎಲಿಮಿನೇಷನ್​ಗೆ ಹೊಸ ಟ್ವಿಸ್ಟ್​!

ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಹೀಗಾಗಿ ವೀಕ್ಷಕರಿಗೆ ಮತ ಹಾಕಲು ಸಮಯ ಸಿಕ್ಕಿಲ್ಲ.

Bigg Boss Kannada Elimination: ಬಿಗ್​ ಬಾಸ್​ ಒಂಬತ್ತನೇ ವಾರದ ಎಲಿಮಿನೇಷನ್​ಗೆ ಹೊಸ ಟ್ವಿಸ್ಟ್​!
ಬಿಗ್ ಬಾಸ್​ ಕನ್ನಡ ಸೀಸನ್​ 8

Updated on: May 02, 2021 | 9:39 PM

ಬಿಗ್​ ಬಾಸ್​ ಎಂಟನೇ ಸೀಸನ್​ ಈಗ ಒಂಬತ್ತನೇ ವಾರ ಪೂರೈಸಿದೆ. ಪ್ರತಿವಾರವೂ ಒಬ್ಬರೊಬ್ಬರು ಹೊರ ಹೋಗಿದ್ದಾರೆ. ಆದರೆ, ಒಂಬತ್ತನೇ ವಾರ ಹೊಸ ಟ್ವಿಸ್ಟ್​ ಸಿಕ್ಕಿದೆ. ಈ ವಾರ ಯಾರೊಬ್ಬರೂ ಮನೆಯಿಂದ ಹೊರ ಹೋಗಿಲ್ಲ! ಈ ಮೂಲಕ ನಾಮಿನೇಟ್​ ಆದ ಎಲ್ಲರೂ 10ನೇ ವಾರವೂ ಮುಂದುವರಿಯುತ್ತಿದ್ದಾರೆ.  ಪ್ರತಿವಾರ ನಾಮಿನೇಷನ್ ಪ್ರಕ್ರಿಯೆ ಸೋಮವಾರವೇ ನಡೆಯುತ್ತಿತ್ತು. ಆದರೆ, ಈ ವಾರ ವಿಳಂಬವಾಗಿದೆ. ಶುಕ್ರವಾರ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಹೀಗಾಗಿ ವೀಕ್ಷಕರಿಗೆ ಮತ ಹಾಕಲು ಸಮಯ ಸಿಕ್ಕಿಲ್ಲ. ಹೀಗಾಗಿ, ಎಲಿಮಿನೇಷನ್​ ನಡೆದಿಲ್ಲ.

ಈ ಬಾರಿ ನಾಮಿನೇಷನ್​ ಲಿಸ್ಟ್​ನಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ.​, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಇದ್ದಾರೆ. ಇವರಲ್ಲಿ ಮನೆಯಿಂದ ಹೊರ ಹೋಗೋದು ಯಾರು ಅನ್ನೋ ಪ್ರಶ್ನೆ ಆಗಿತ್ತು.

ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅಭ್ಯರ್ಥಿಗಳ ಆಯ್ಕೆ ಮಾಡುವ ವೇಳೆ ಮಂಜು ತಪ್ಪು ನಿರ್ಧಾರ ತೆಗೆದುಕೊಂಡಿದ್ದರು. ಅರವಿಂದ್​ಗೋಸ್ಕರ ಅವರು ಆ ರೀತಿ ಮಾಡಿದ್ದಾರೆ ಎನ್ನುವ ಮಾತಿದೆ. ಈ ವಿಚಾರವನ್ನೇ ಇಟ್ಟುಕೊಂಡು ನಾಮಿನೇಷನ್​ ವೇಳೆ ಮನೆಯ ಬಹುತೇಕರು ಮಂಜು ಅವರ ಹೆಸರನ್ನು ತೆಗೆದುಕೊಂಡರು. ಅರವಿಂದ್​, ದಿವ್ಯಾ ಉರುಡುಗ, ಪ್ರಶಾಂತ್​ ಸೇರಿದಂತೆ ಬಹುತೇಕರು ಮಂಜು ಅವರನ್ನು ನಾಮಿನೇಷನ್​ಗೆ ಆಯ್ಕೆ ಮಾಡಿದರು.

ಪ್ರಶಾಂತ್​ ಹಾಗೂ ಚಕ್ರವರ್ತಿಯಿಂದ ಮನೆಯ ವಾತಾವರಣ ಹಾಳಾಯಿತು ಎನ್ನುವ ಆರೋಪ ಕೇಳಿ ಬಂತು. ಹೀಗಾಗಿ, ಮನೆಯವರು ಅವರನ್ನೂ ನಾಮಿನೇಟ್​ ಮಾಡಿದರು. ಅರವಿಂದ್ ಸ್ಟ್ರಾಂಗ್​ ಅಭ್ಯರ್ಥಿ ಎಂದು ನಾಮಿನೇಟ್​ ಆದರು. ದಿವ್ಯಾ ಸುರೇಶ್​ ಹಾಗೂ ಪ್ರಿಯಾಂಕಾ ತಿಮ್ಮೇಶ್​ ನೇರವಾಗಿ ನಾಮಿನೇಟ್​ ಆಗಿದ್ದರು. ಆದರೆ, ಈ ವಾರ ಯಾರೊಬ್ಬರೂ ಮನೆಯಿಂದ ಹೊರ ಹೋಗಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯವರಿಗೆ ಬೇಡವಾದರಾ ಮಂಜು? ಎಲ್ಲರ ಅಸಲಿಮುಖ ಬಯಲು

ಸುದೀಪ್ ಗುಣಮುಖ ಆಗಿದ್ದರೂ ಯಾಕೆ ಬಿಗ್​ ಬಾಸ್​ ನಡೆಸಿಕೊಡುತ್ತಿಲ್ಲ? ಜನರ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಉತ್ತರ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us