ಬಿಗ್ ಬಾಸ್ ಕನ್ನಡ ಸೀಸನ್ 8ರ ಎರಡನೇ ಇನ್ನಿಂಗ್ಸ್ನಲ್ಲಿ ಹಲವು ಬದಲಾವಣೆ ಕಾಣುತ್ತಿದೆ. ಈಗಂತೂ ಆಟದ ಸ್ವರೂಪವೇ ಬದಲಾಗಿದೆ. ಕೊರೊನಾ ವೈರಸ್ ಎರಡನೇ ಅಲೆಯ ಕಾರಣದಿಂದ ಶೋ ಅರ್ಧಕ್ಕೆ ನಿಂತಿತ್ತು. ಹಾಗಾಗಿ ಎಲ್ಲ 12 ಸ್ಪರ್ಧಿಗಳು ಒಂದೂವರೆ ತಿಂಗಳ ಕಾಲ ಗ್ಯಾಪ್ ಪಡೆದುಕೊಂಡು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಬಹುತೇಕರು ಹಳೇ ಎಪಿಸೋಡ್ಗಳನ್ನು ನೋಡಿಕೊಂಡು ಬಂದಿದ್ದಾರೆ. ಅವರವರ ಪ್ಲಸ್ ಮತ್ತು ಮೈನಸ್ಗಳನ್ನು ಅರಿತುಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಮಂಜು ಪಾವಗಡ ಕೂಡ ಆಟದ ಪ್ಲ್ಯಾನ್ ಬದಲಾಯಿಸಿದ್ದಾರೆ.
ಮೊದಲ ಇನ್ನಿಂಗ್ಸ್ನ ಆರಂಭದಲ್ಲಿ ಭಾರಿ ಮನರಂಜನೆ ನೀಡುತ್ತಿದ್ದ ಮಂಜು ಪಾವಗಡ ಅವರು ನಂತರದ ದಿನಗಳಲ್ಲಿ ದಿವ್ಯಾ ಸುರೇಶ್ ಜೊತೆ ಸೇರಿಕೊಂಡು ಮಂಕಾಗಿದ್ದರು. ಅದು ಪ್ರೇಕ್ಷಕರಿಗೂ ನಿರಾಸೆ ಮೂಡಿಸಿತ್ತು. ಅದು ಸ್ವತಃ ಅವರ ಗಮನಕ್ಕೆ ಬಂದಿದ್ದರೂ ಕೂಡ ಸಮಯ ಕೈ ಮೀರಿ ಹೋಗಿತ್ತು. ಆದರೆ ಈಗ ಹೊಸ ಉತ್ಸಾಹದೊಂದಿಗೆ ಮಂಜು ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಪಡೆದುಕೊಂಡಿದ್ದಾರೆ. ವೇದಿಕೆ ಮೇಲೆ ಕಿಚ್ಚ ಸುದೀಪ್ ಎದುರಲ್ಲಿ ತಾವು ಆಡಿದ ಮಾತನ್ನ ಉಳಿಸಿಕೊಳ್ಳುತ್ತಿದ್ದಾರೆ.
ಎರಡನೇ ಇನ್ನಿಂಗ್ಸ್ ಶುರುವಾಗುವಾಗ ಎಲ್ಲ ಸ್ಪರ್ಧಿಗಳನ್ನು ವೇದಿಕೆಗೆ ಕರೆದು ಸುದೀಪ್ ಮಾತನಾಡಿಸಿದ್ದರು. ‘ಬಿಗ್ ಬಾಸ್ ಮನೆಯ ಜರ್ನಿಯಲ್ಲಿ ಸಿಂಗಲ್ ರೈಡ್ ಇರುತ್ತೋ ಅಥವಾ ಡಬಲ್ ರೈಡ್ ಇರುತ್ತದೆಯೋ’ ಎಂದು ಸುದೀಪ್ ನೇರವಾಗಿ ಪ್ರಶ್ನೆ ಮಾಡಿದ್ದರು. ಆಗ ಮಂಜು, ‘ನಾನು ಸಿಂಗಲ್ ರೈಡ್ ಹೋಗುತ್ತೇನೆ’ ಎಂದು ಹೇಳುವ ಮೂಲಕ ದಿವ್ಯಾ ಅವರಿಂದ ಅಂತರ ಕಾಯ್ದುಕೊಳ್ಳುವ ಸೂಚನೆ ನೀಡಿದ್ದರು. ಆ ಮಾತಿಗೆ ತಕ್ಕಂತೆಯೇ ಅವರೀಗ ನಡೆದುಕೊಳ್ಳುತ್ತಿದ್ದಾರೆ. ಎಲ್ಲರನ್ನೂ ನಗಿಸುತ್ತ, ಭರ್ಜರಿ ಮನರಂಜನೆ ನೀಡುತ್ತ ದೊಡ್ಮನೆಯ ರಂಗನ್ನು ಅವರು ಹೆಚ್ಚಿಸಿದ್ದಾರೆ. ಅದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆಯೇ ಸಾಕ್ಷಿ.
ಟಾಸ್ಕ್ ಆಡುವಾಗ ದಿವ್ಯಾ ಸುರೇಶ್ ಕಾಲಿಗೆ ಪೆಟ್ಟಾಗಿದೆ. ಹಾಗಿದ್ದರೂ ಕೂಡ ಮಂಜು ಅತೀ ಉತ್ಸಾಹ ತೋರಿಸುತ್ತ ಅವರನ್ನು ಸಮಾಧಾನ ಮಾಡಲು ಹೋಗಿಲ್ಲ. ಎಲ್ಲರಂತೆ ತಾವೂ ಒಬ್ಬರಾಗಿ ಆ ಸಂದರ್ಭವನ್ನು ನಿಭಾಯಿಸಿದ್ದಾರೆ. ದಿವ್ಯಾಗೆ ಸಮಾಧಾನ ಮಾಡು ಎಂದು ಬೇರೆ ಸ್ಪರ್ಧಿಗಳೆಲ್ಲ ಒತ್ತಾಯಿಸಿದರೂ ಕೂಡ ಅವರು ಅತಿಯಾಗಿ ನಡೆದುಕೊಂಡಿಲ್ಲ.
ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ವಿಚಾರ ಗೊತ್ತಾಗಿದೆ. ಶನಿವಾರದ (ಜೂ.25) ಎಪಿಸೋಡ್ನಲ್ಲಿ ಈ ದೃಶ್ಯಗಳು ಪ್ರಸಾರ ಆಗಲಿವೆ.
ಇದನ್ನೂ ಓದಿ:
ಬಿಗ್ ಬಾಸ್ ಮನೆಯಿಂದ ಹೊರಗಿದ್ದಾಗ ಮಂಜು ಪಾವಗಡಗೆ ಬಂದಿತ್ತು ಒಂದು ವಿಚಿತ್ರ ಕರೆ‘
150 ಜೊತೆ ಬಟ್ಟೆಯೊಂದಿಗೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್ ರಿಯಾಕ್ಷನ್ ಹೇಗಿತ್ತು?
Published On - 9:28 am, Fri, 25 June 21