ವೋಟಿಂಗ್​ನಲ್ಲಿ ಹೊಸ ದಾಖಲೆ ಬರೆದ ಬಿಗ್ ಬಾಸ್ 8; ವಿನ್ನರ್ ಪಡೆದ ಮತ ನೋಡಿ ಸುದೀಪ್​ಗೂ ಅಚ್ಚರಿ

| Updated By: ಸುಷ್ಮಾ ಚಕ್ರೆ

Updated on: Aug 08, 2021 | 11:48 PM

Bigg Boss Kannada 8 Winner | ಬಿಗ್ ಬಾಸ್​ ಕನ್ನಡದ ಈ ಸೀಸನ್​ನಲ್ಲಿ ವಿನ್ನರ್ ಆಗಿರುವ ಸ್ಪರ್ಧಿ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ.

ವೋಟಿಂಗ್​ನಲ್ಲಿ ಹೊಸ ದಾಖಲೆ ಬರೆದ ಬಿಗ್ ಬಾಸ್ 8; ವಿನ್ನರ್ ಪಡೆದ ಮತ ನೋಡಿ ಸುದೀಪ್​ಗೂ ಅಚ್ಚರಿ
ಬಿಗ್ ಬಾಸ್​ 8ರ ಟಾಪ್ 3 ಸ್ಪರ್ಧಿಗಳು
Follow us on

ಬಿಗ್ ಬಾಸ್ ಕನ್ನಡ ಸೀಸನ್ 8 ಈ ಬಾರಿ ಹಲವು ವಿಷಯಗಳಲ್ಲಿ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಕೊವಿಡ್​ನಿಂದಾಗಿ ಬಿಗ್ ಬಾಸ್​ ರಿಯಾಲಿಟಿ ಶೋವನ್ನು ಅರ್ಧದಲ್ಲೇ ನಿಲ್ಲಿಸಿ ಮತ್ತೆ ಮರು ಆರಂಭಿಸಲಾಗಿತ್ತು. ಪ್ರತಿ ಸೀಸನ್​ನಲ್ಲಿ ಸ್ಪರ್ಧಿಗಳು ಎಲಿಮಿನೇಟ್ ಆದಾಗಲೂ ಅವರಿಗೆ ಬಂದಿರುವ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸದಿದ್ದಕ್ಕೆ ಅಸಮಾಧಾನ ಕೇಳಿಬಂದಿದ್ದವು. ಹೀಗಾಗಿ, ಇದೇ ಮೊದಲ ಬಾರಿಗೆ ಬಿಗ್ ಬಾಸ್ (Bigg Boss Kannada 8) ವೇದಿಕೆಯಲ್ಲಿ ಟಾಪ್ 5 ಸ್ಪರ್ಧಿಗಳು ಪಡೆದ ಮತಗಳ ಸಂಖ್ಯೆಯನ್ನು ಬಹಿರಂಗಗೊಳಿಸಲಾಗಿದೆ. ಬಿಗ್ ಬಾಸ್​ ಕನ್ನಡದ ಈ ಸೀಸನ್​ನಲ್ಲಿ ವಿನ್ನರ್ ಆಗಿರುವ ಸ್ಪರ್ಧಿ ಬರೋಬ್ಬರಿ 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದಿದ್ದಾರೆ.

ಬಿಗ್ ಬಾಸ್ ಕನ್ನಡ 8ನೇ ಸೀಸನ್​ನ ಮೊದಲ ರನ್ನರ್ ಅಪ್ ಆಗಿರುವ ಸ್ಪರ್ಧಿ 43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ ವೈಷ್ಣವಿ ಗೌಡ 10,21,831 ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ಪ್ರಶಾಂತ್ ಸಂಬರಗಿ 6,69,020 ಮತಗಳನ್ನು ಪಡೆದಿದ್ದಾರೆ.

ಮಂಜು ಪಾವಗಡ, ಅರವಿಂದ್​ ಕೆಪಿ ಮತ್ತು ದಿವ್ಯಾ ಉರುಡುಗ ಫಿನಾಲೆ ಪ್ರವೇಶಿಸಿದ್ದರು. ದಿವ್ಯಾಗಿಂತಲೂ ಅರವಿಂದ್​ ಹೆಚ್ಚು ವೋಟ್​ ಪಡೆಯುವ ಮೂಲಕ ತಮ್ಮ ಆಪ್ತ ಸ್ನೇಹಿತೆಯನ್ನೇ ಹಿಂದಿಕ್ಕಿದ್ದಾರೆ. ಬಿಗ್ ಬಾಸ್​ ಕನ್ನಡ 8ನೇ ಸೀಸನ್​ನ 2ನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ ಅವರಿಗೆ 6 ಲಕ್ಷ ರೂ. ಬಹುಮಾನ ಸಿಕ್ಕಿದೆ. ಕೆ.ಪಿ. ಅರವಿಂದ್ ಹಾಗೂ ಮಂಜು ಪಾವಗಡ ಇಬ್ಬರಲ್ಲಿ ವಿನ್ನರ್ ಯಾರಾಗಲಿದ್ದಾರೆ ಎಂಬುದು ಇನ್ನೇನು ಗೊತ್ತಾಗಲಿದೆ. ಬಿಗ್ ಬಾಸ್​ ಶೋನಲ್ಲಿ ಗೆಲ್ಲುವ ಸ್ಪರ್ಧಿಗೆ ಈ ಬಾರಿ 53 ಲಕ್ಷ ರೂ. ಸಿಗಲಿದೆ.

ಇದನ್ನೂ ಓದಿ: Bigg Boss Finale: ಬಿಗ್​ ಬಾಸ್​ನಿಂದ ದಿವ್ಯಾ ಉರುಡುಗ ಔಟ್​; ಆಪ್ತ ಗೆಳತಿಯನ್ನೇ ಹಿಂದಿಕ್ಕಿದ ಅರವಿಂದ್​​ ಕೆಪಿ

Bigg Boss 8 Finale: ವಿನ್ನರ್ ಯಾರೆಂದು ಹಾಡಲ್ಲೇ ಸುಳಿವು ಕೊಟ್ಟರಾ ಬಿಗ್ ಬಾಸ್? ಬೇಸರಗೊಂಡ ದಿವ್ಯಾ ಉರುಡುಗ

(Bigg Boss Kannada Season 8 Winner and Runner Up Voting Details is Here who is BBK8 Winner)

Published On - 11:39 pm, Sun, 8 August 21