BBK8 Finale: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ನಾನು, ಅರವಿಂದ್ ಇದ್ದಿದ್ರೆ ಚೆನ್ನಾಗಿರುತ್ತಿತ್ತು; ಭಾವುಕರಾದ ದಿವ್ಯಾ ಉರುಡುಗ

BBK 8 Finale Winner: ಬಿಗ್ ಬಾಸ್ ವೇದಿಕೆಯಲ್ಲಿ ನಿಮ್ಮ ಎಡಕ್ಕೆ ನಾನು, ಬಲಕ್ಕೆ ಅರವಿಂದ್ ನಿಂತಿದ್ದರೆ ಅದಕ್ಕಿಂತ ದೊಡ್ಡ ಖುಷಿ ಮತ್ಯಾವುದೂ ಇರುತ್ತಿರಲಿಲ್ಲ. ಆ ಕಲ್ಪನೆಯೇ ಬಹಳ ಚೆನ್ನಾಗಿದೆ ಎಂದು ಕಿಚ್ಚ ಸುದೀಪ್ ಅವರ ಮುಂದೆ ದಿವ್ಯಾ ಉರುಡುಗ ಭಾವುಕರಾಗಿದ್ದಾರೆ.

BBK8 Finale: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ನಾನು, ಅರವಿಂದ್ ಇದ್ದಿದ್ರೆ ಚೆನ್ನಾಗಿರುತ್ತಿತ್ತು; ಭಾವುಕರಾದ ದಿವ್ಯಾ ಉರುಡುಗ
ದಿವ್ಯ ಉರುಡುಗ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 08, 2021 | 11:11 PM

ಬಿಗ್ ಬಾಸ್​ ಕನ್ನಡ ಸೀಸನ್ 8ರ ವಿನ್ನರ್ ಯಾರೆಂದು ಗೊತ್ತಾಗಲು ಕೆಲವೇ ಕ್ಷಣಗಳು ಬಾಕಿ ಇವೆ. ಎರಡನೇ ರನ್ನರ್ ಆಗಿ 11,61,205 ಮತಗಳನ್ನು ಪಡೆಯುವ ಮೂಲಕ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಬಿಗ್ ಬಾಸ್​ ಕನ್ನಡ ಸೀಸನ್​ನ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ನಡೆದಿದ್ದು, ವಿನ್ನರ್​ಗೆ ಬರೋಬ್ಬರಿ 45 ಲಕ್ಷ ಮತಗಳು ಲಭಿಸಿವೆ. ಅವರಿಗಿಂತ 2 ಲಕ್ಷ ಕಡಿಮೆ ಮತಗಳನ್ನು ಪಡೆದರು ರನ್ನರ್ ಅಪ್ ಆಗಿದ್ದಾರೆ. ಆ ಇಬ್ಬರು ಯಾರೆಂಬ ಕುತೂಹಲಕ್ಕೆ ಇನ್ನೇನು ತೆರೆ ಬೀಳಲಿದೆ.

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ದಿವ್ಯಾ ಉರುಡುಗ ಭಾವುಕರಾಗಿ ಅಳುತ್ತಲೇ ಮನೆಯಿಂದ ಹೊರಗೆ ಬಂದಿದ್ದಾರೆ. ನನಗಿಂತ ಅರವಿಂದ್ ಬಹಳ ಅತ್ಯುತ್ತಮ ಸ್ಪರ್ಧಿಯಾಗಿದ್ದರಿಂದ ಅವರು ಗೆದ್ದರೆ ನನಗೆ ಖುಷಿಯಿದೆ. ಬಿಗ್ ಬಾಸ್ ವೇದಿಕೆಯಲ್ಲಿ ನಿಮ್ಮ ಎಡಕ್ಕೆ ನಾನು, ಬಲಕ್ಕೆ ಅರವಿಂದ್ ನಿಂತಿದ್ದರೆ ಅದಕ್ಕಿಂತ ದೊಡ್ಡ ಖುಷಿ ಮತ್ಯಾವುದೂ ಇರುತ್ತಿರಲಿಲ್ಲ. ಆ ಕಲ್ಪನೆಯೇ ಬಹಳ ಚೆನ್ನಾಗಿದೆ ಎಂದು ಕಿಚ್ಚ ಸುದೀಪ್ ಅವರ ಮುಂದೆ ಭಾವುಕರಾಗಿದ್ದಾರೆ.

ನನಗೆ ಮೊದಲು ಬಿಗ್​ ಬಾಸ್​ಗೆ ಬಂದಾಗ ಕಾಲ್ ಬಂದಾಗ ಟಾಪ್ 3ಯಲ್ಲಿ ಇರುತ್ತೇನೆಂದುಕೊಂಡಿರಲಿಲ್ಲ. ಗೆಲ್ಲಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ, ನಾನು ಇಲ್ಲಿಯವರೆಗಾದರೂ ಉಳಿದಿರುವ ಬಗ್ಗೆ ಬಹಳ ತೃಪ್ತಿಯಿದೆ. ನಾನು ಕೊನೆಯವರೆಗೂ ನನ್ನ ಪ್ರಯತ್ನ ಬಿಡದೇ ಆಡಿದ್ದೇನೆ. ಅಲ್ಲಿ ಎಲ್ಲರೂ ಬಹಳ ಚೆನ್ನಾಗಿ ಆಡುತ್ತಿದ್ದರು ಎಂದು ದಿವ್ಯಾ ಉರುಡುಗ ಹೇಳಿದ್ದಾರೆ.

ಬಿಗ್ ಬಾಸ್​ ಕನ್ನಡ 8ನೇ ಸೀಸನ್​ನ 2ನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ ಅವರಿಗೆ 6 ಲಕ್ಷ ರೂ. ಬಹುಮಾನ ಸಿಕ್ಕಿದೆ. ಕೆ.ಪಿ. ಅರವಿಂದ್ ಹಾಗೂ ಮಂಜು ಪಾವಗಡ ಇಬ್ಬರಲ್ಲಿ ವಿನ್ನರ್ ಯಾರಾಗಲಿದ್ದಾರೆ ಎಂಬುದು ಇನ್ನೇನು ಗೊತ್ತಾಗಲಿದೆ.

ಇದನ್ನೂ ಓದಿ: Bigg Boss Kannada Finale: ಬಿಗ್ ಬಾಸ್ ಫಿನಾಲೆ ಎಪಿಸೋಡ್​ನಲ್ಲಾದ ತಪ್ಪಿನ ಕಾರಣ ಬಿಚ್ಚಿಟ್ಟ ಕಿಚ್ಚ ಸುದೀಪ್

ಬಿಗ್ ಬಾಸ್ ಫಿನಾಲೆಯಲ್ಲಿ ಅರವಿಂದ್​ ಕೆಪಿ ಗೆಲುವಿಗೂ, ಸೋಲಿಗೂ ಕಾರಣವಾಗಬಹುದು ಈ ಅಂಶಗಳು

(Bigg Boss Kannada 8 Finale Divya Uruduga emotional Speech with Kiccha Sudeep after Eliminated from BBK 8)

Published On - 11:09 pm, Sun, 8 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ