‘ಬಿಗ್ ಬಾಸ್ ಕನ್ನಡ ಸೀಸನ್ 9’ (BBK 9) ಆರಂಭ ಆಗಿದೆ. 18 ಸ್ಪರ್ಧಿಗಳ ನಡುವೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟ ನಡೆಯೋದು ಕಾಮನ್. ಈ ಬಾರಿ ಮೊದಲೇ ದಿನವೇ ಆರಂಭ ಆಗಿದ್ದು ಮಾತ್ರ ವಿಚಿತ್ರ. ಮೊದಲ ದಿನ ಪ್ರಶಾಂತ್ ಸಂಬರ್ಗಿ ಹಾಗೂ ಆರ್ಯವರ್ಧನ್ ಗುರೂಜಿ ಮಧ್ಯೆ ಕಿರಿಕ್ ಆಗಿತ್ತು. ಎರಡನೇ ದಿನ ಬಿಗ್ ಬಾಸ್ (Bigg Boss) ಶಾಕ್ ನೀಡಿದ್ದರು. ಬೆಳಗ್ಗೆ ದೊಡ್ಮನೆಯಲ್ಲಿ ಚಿತ್ರ ವಿಚಿತ್ರ ಸದ್ದು ಕೇಳಿ ಬಂದಿದೆ. ಈ ಸುದ್ದಿಯನ್ನು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲ ಮನೆಯಿಂದ ಓಡಿದ್ದಾರೆ. ಅಷ್ಟಕ್ಕೂ ಏನದು? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.
ಬಿಗ್ ಬಾಸ್ ಮನೆಯಲ್ಲಿ ಒಟ್ಟೂ 18 ಆಟಗಾರರು ಇದ್ದಾರೆ. ಈ ಪೈಕಿ 9 ಹೊಸಬರು ಮತ್ತೆ 9 ಮಂದಿ ಹಳಬರು. ಇವರಲ್ಲಿ ವಿವಿಧ ಮನಸ್ಥಿತಿ ಹೊಂದಿದವರು ಬಂದಿದ್ದಾರೆ. ಈ ಕಾರಣಕ್ಕೆ ಆಟದ ಮಜ ಹೆಚ್ಚುತ್ತಿದೆ. 100 ದಿನಗಳ ಕಾಲ ಮನೆಯಲ್ಲಿ ಇರಬೇಕು ಎಂಬುದು ಎಲ್ಲರ ಉದ್ದೇಶ. ಅವರು ಮನೆಯಲ್ಲಿ ಎಷ್ಟು ದಿನ ಇರಬೇಕು ಎಂಬುದನ್ನು ಜನರು ನಿರ್ಧರಿಸುತ್ತಾರೆ. ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಟಾಸ್ಕ್ನ ಆಡಬೇಕಿದೆ. ಅದೇ ರೀತಿ ಈ ಬಾರಿ ಬಿಗ್ ಬಾಸ್ ಭಿನ್ನ ಟಾಸ್ಕ್ ನೀಡಿದೆ.
‘ಬಿಗ್ ಬಾಸ್’ ಮನೆಯಲ್ಲಿ ಮುಂಜಾನೆ ಎಬ್ಬಿಸೋಕೆ ಹಾಡನ್ನು ಹಾಡು ಹಾಕಲಾಗುತ್ತದೆ. ಆದರೆ, ಈ ಬಾರಿ ಯಾವುದೇ ಹಾಡು ಇರಲಿಲ್ಲ. ಬದಲಿಗೆ ವಿಚಿತ್ರ ಹಾಗೂ ಭಯಾನಕ ಸೌಂಡ್ ಕೇಳಿಬಂತು. ಅಷ್ಟೇ ಅಲ್ಲ, ಇಡೀ ಮನೆಯ ಲೈಟ್ ವಿಚಿತ್ರವಾಗಿ ಕುಣಿಯೋಕೆ ಶುರುವಾಯಿತು. ಇದನ್ನು ಕೇಳಿ ಎಲ್ಲರೂ ಗಾಬರಿ ಆದರು. ಮನೆಯಲ್ಲಿ ಮಲಗಿದ್ದವರಂತೂ ಶಾಕ್ ಆದರು. ಒಂದಷ್ಟು ಮಂದಿ ಗಾರ್ಡನ್ ಏರಿಯಾಗೆ ಓಡಿ ಹೋದರು. ಆ ಬಳಿಕ ಇದು ಟಾಸ್ಕ್ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ‘ಫೇವರಿಟ್ ಅಭ್ಯರ್ಥಿಯನ್ನು ಇಟ್ಟುಕೊಳ್ತಾರೆ, ಉಳಿದವರನ್ನು ಕಳಿಸ್ತಾರೆ, ವೋಟಿಂಗ್ ಬೋಗಸ್’; ಬಿಗ್ ಬಾಸ್ ಸ್ಪರ್ಧಿಯ ಆರೋಪ
ಗಾರ್ಡನ್ ಏರಿಯಾದಲ್ಲಿ ಮೆದುಳಿನ ಮಾದರಿಯನ್ನು ಇಡಲಾಗಿದೆ. ಈ ಮೆದುಳಿಗೆ ಲೈಟ್ ಕೂಡ ಹಾಕಲಾಗಿದೆ. ಮೆದುಳಿನ ಕೊಂಡಾಡಲು ಒಂದು ಬಿಗ್ ಬಾಸ್ ಟಾಸ್ಕ್ ನೀಡಿದೆ. ದೈಹಿಕ ಶಕ್ತಿ, ನೆನಪಿನ ಶಕ್ತಿ ಹಾಗೂ ಸಮಸ್ಯೆ ಬಗೆಹರಿಸುವ ಶಕ್ತಿಯನ್ನು ಮಿದುಳು ಹೊಂದಿದೆ. ಈ ಮೂರು ವಿಚಾರದ ಮೇಲೆ ಈ ವಾರದ ಟಾಸ್ಕ್ ಇರುತ್ತದೆ ಎಂಬುದನ್ನು ಬಿಗ್ ಬಾಸ್ ವಿವರಿಸಿದರು.
Published On - 9:52 pm, Mon, 26 September 22