‘ಬಿಗ್ ಬಾಸ್’ನಲ್ಲಿ ಅವಕಾಶ ಪಡೆದ ಸ್ಪರ್ಧಿಗಳು ನಂತರ ಕಲರ್ಸ್ನ ಬೇರೆ ಬೇರೆ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಕೆಲಸ ಮಾಡಿದ ಉದಾಹರಣೆ ಇದೆ. ಮಾಜಿ ಸ್ಪರ್ಧಿಗಳಾದ ದಿವ್ಯಾ ಉರುಡುಗ ಅವರು ‘ನಿನಗಾಗಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಂಜು ಪಾವಗಡ ಅವರು ಧಾರಾವಾಹಿ ಹಾಗೂ ವಿವಿಧ ಶೋನಲ್ಲಿ ಕೆಲಸ ಮಾಡುತ್ತಿದ್ದಾರೆ. ದಿವ್ಯಾ ಸುರೇಶ್ ಅವರು ಕಲರ್ಸ್ನ ಧಾರಾವಾಹಿಯಲ್ಲಿ ನಟಿಸಿದ್ದರು. ಅನುಪಮಾ ಗೌಡ ಅವರು ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಈಗ ಇರುವ ಸ್ಪರ್ಧಿಗಳನ್ನು ಇಟ್ಟುಕೊಂಡು ಹೊಸ ರಿಯಾಲಿಟಿ ಶೋ ನಡೆಸೋ ಸಾಧ್ಯತೆ ಇದೆ.
ಇತ್ತೀಚೆಗೆ ಬಿಗ್ ಬಾಸ್ ಮನೆಗೆ ನಟಿ, ನಿರೂಪಕಿ ಅನುಪಮಾ ಗೌಡ ಅತಿಥಿಯಾಗಿ ಬಂದಿದ್ದರು. ಅವರು ಹೊಸ ರಿಯಾಲಿಟಿ ಶೋ ಬಗ್ಗೆ ಹೇಳಿದರು. ಆ ರಿಯಾಲಿಟಿ ಶೋ ಹೆಸರು ‘ಬಾಯ್ಸ್ Vs ಗರ್ಲ್ಸ್’. ಇದರ ಲೋಗೋನ ಅವರು ಅನಾವರಣ ಮಾಡಿದರು. ಬಿಗ್ ಬಾಸ್ ಮನೆಯ ಸ್ಪರ್ಧಿಗಳೇ ಇದರಲ್ಲಿ ಇರುತ್ತಾರೆ ಎಂಬ ಸೂಚನೆಯನ್ನು ಸುದೀಪ್ ನೀಡಿದ್ದಾರೆ. ಆದರೆ ಯಾವುದೂ ಸ್ಪಷ್ಟವಾಗಿ ಹೇಳಿಲ್ಲ.
‘ಬಾಯ್ಸ್ Vs ಗರ್ಲ್ಸ್’ ಪ್ರೋಮೋನ ಹಾಕಲಾಯಿತು. ಈ ಪ್ರೋಮೋನ ಬಿಗ್ ಬಾಸ್ ಸ್ಪರ್ಧಿಗಳನ್ನು ಇಟ್ಟುಕೊಂಡೇ ಶೂಟ್ ಮಾಡಲಾಗಿತ್ತು. ಈ ಪ್ರೋಮೋ ನೋಡಿದ ಬಳಿಕ ಸುದೀಪ್ ಅವರು ಒಂದು ಅಚ್ಚರಿಯವ ವಿಚಾರ ಹೇಳಿದ್ದಾರೆ. ‘ನಮ್ಮ ಕಂಟೆಸ್ಟಂಟ್ಸ್ ಕಲರ್ಸ್ ಕನ್ನಡಕ್ಕೆ ನಿಂಬೆ ಹಣ್ಣು ಇದ್ದ ಹಾಗೆ. ಕೊನೆಯ ರಸ ಬರುವವರೆಗೂ ಹಿಂಡೋದೇ. ಆಲ್ ದಿ ಬೆಸ್ಟ್ ಫಾರ್ ಯುವರ್ ನ್ಯೂ ಶೋ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ
ಈ ರೀತಿಯಾಲಿಟಿ ಶೋ ಶನಿವಾರ ಹಾಗೂ ಭಾನುವಾರ ಶೂಟ್ ಆಗಲಿದೆ. ಹೀಗಾಗಿ ಒಂದು ಅಥವಾ ಎರಡು ದಿನ ಇದರ ಶೂಟಿಂಗ್ ನಡೆಯುವ ಸಾಧ್ಯತೆ ಇದೆ. ಈ ಶೋನ ಬಗ್ಗೆ ಶೀಘ್ರವೇ ಹೆಚ್ಚಿನ ಮಾಹಿತಿ ರಿವೀಲ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.