ಬಿಗ್ ಬಾಸ್ ಸ್ಪರ್ಧಿಗೆ ಬಂತು ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ

ಬಾಲಿವುಡ್ ಸೆಲೆಬ್ರಿಟಿಗಳಿಗೆ ಬೆದರಿಕೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ರೋಹಿತ್ ಶೆಟ್ಟಿ, ರಣವೀರ್ ಸಿಂಗ್ ನಂತರ ಈಗ ನಟಿ ಹಿಮಾಂಶಿ ಖುರಾನಾಗೆ ವಿದೇಶಿ ಗ್ಯಾಂಗ್‌ಸ್ಟರ್‌ನಿಂದ ₹10 ಕೋಟಿ ಸುಲಿಗೆ ಬೆದರಿಕೆ ಬಂದಿದೆ. ಹಿಮಾಂಶಿ ಮೊಹಾಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಅವರ ಕುಟುಂಬ ಆತಂಕಕ್ಕೊಳಗಾಗಿದೆ.

ಬಿಗ್ ಬಾಸ್ ಸ್ಪರ್ಧಿಗೆ ಬಂತು ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ
ಹಿಮಾಂಶಿ
Edited By:

Updated on: Feb 16, 2026 | 8:08 AM

ಬಾಲಿವುಡ್ ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮೊದಲು, ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರ ಕಟ್ಟಡದ ಹೊರಗೆ ಗುಂಡಿನ ದಾಳಿ ನಡೆದಿತ್ತು. ಆ ಬಳಿಕ ನಟ ರಣವೀರ್ ಸಿಂಗ್ ಅವರಿಗೆ ಆಡಿಯೋ ಸಂದೇಶದ ಮೂಲಕ ಬೆದರಿಕೆ ಹಾಕಲಾಗಿತ್ತು. ಈಗ, ‘ಬಿಗ್ ಬಾಸ್ 13’ ಖ್ಯಾತಿಯ ನಟಿ ಹಿಮಾಂಶಿ ಖುರಾನಾ ಅವರಿಗೆ ಸುಲಿಗೆಗಾಗಿ ಬೆದರಿಕೆ ಹಾಕಲಾಗಿದೆ. ಹಿಮಾಂಶಿ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ.

ಚಿತ್ರರಂಗದ ಹೈ ಪ್ರೊಫೈಲ್ ಜನರನ್ನು ಗುರಿಯಾಗಿಸಿಕೊಂಡ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಿಮಾಂಶಿ ಪಂಜಾಬಿ ಚಲನಚಿತ್ರೋದ್ಯಮದ ಪ್ರಸಿದ್ಧ ನಟಿ. ಈ ಬೆದರಿಕೆ ವಿರುದ್ಧ ಅವರು ಮೊಹಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏತನ್ಮಧ್ಯೆ, ಈ ಬೆದರಿಕೆ ಇ-ಮೇಲ್ ಬಗ್ಗೆ ಸೋಹಾನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅವರ ವೈಯಕ್ತಿಕ ಇ-ಮೇಲ್ ಐಡಿಯಲ್ಲಿ ಬೆದರಿಕೆ ಇ-ಮೇಲ್ ಬಂದಿದ್ದು, ಅದರಲ್ಲಿ ಒಂದು ಕಿರು ಸಂದೇಶ ಮತ್ತು ಆಡಿಯೊ ಕ್ಲಿಪ್ ಕೂಡ ಇದೆ.

ಆ ಆಡಿಯೋ ಕ್ಲಿಪ್ ವಿದೇಶಿ ದರೋಡೆಕೋರನದ್ದು ಎಂದು ಹೇಳಲಾಗುತ್ತಿದೆ. 10 ಕೋಟಿ ರೂಗೆ ಆತ ಬೇಡಿಕೆ ಇಟ್ಟಿದ್ದಾನೆ. ಪಿಟಿಐ ವರದಿಯ ಪ್ರಕಾರ, ಈ ಸಂದೇಶವನ್ನು ವಿದೇಶದಲ್ಲಿರುವ ದರೋಡೆಕೋರ ಕಳುಹಿಸಿದ್ದಾನೆ ಎಂದು ಹೇಲಲಾಗಿದೆ. ಆರೋಪಿಯನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಈ ಘಟನೆಯಿಂದ ಹಿಮಾಂಶಿ ಖುರಾನಾ ಮತ್ತು ಅವರ ಕುಟುಂಬ ಭಯಭೀತಗೊಂಡಿದೆ. ಅವರು ತಕ್ಷಣ ದೂರು ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ವಿನಂತಿಸಿದ್ದಾರೆ. ಬೆದರಿಕೆಯಲ್ಲಿ ಜೀಶನ್ ಅಖ್ತರ್ ಅವರನ್ನುಉಲ್ಲೇಖಿಸಲಾಗಿದೆ. ಅಕ್ಟೋಬರ್ 2024 ರಲ್ಲಿ ಮುಂಬೈನಲ್ಲಿ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಕೊಲೆ ಪ್ರಕರಣದಲ್ಲಿ ಆತ ಬೇಕಾಗಿದ್ದಾನೆ. ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ರೋಹಿತ್ ಗೋದಾರ ಸೇರಿದಂತೆ ಪ್ರತಿಸ್ಪರ್ಧಿ ಗ್ಯಾಂಗ್‌ಗಳೊಂದಿಗೆ ಅಖ್ತರ್ ಸಂಪರ್ಕ ಹೊಂದಿದ್ದಾನೆ.

ಇದನ್ನೂ ಓದಿ: ಒಡಿಶಾದಲ್ಲಿ ಆಸಿಡ್ ದಾಳಿ ನಡೆಸಿ ಪತ್ನಿಯನ್ನು ಕೊಂದ ವ್ಯಕ್ತಿಗೆ ಗಲ್ಲು ಶಿಕ್ಷೆ

ಪಂಜಾಬ್‌ನ ಕಿರಾತ್‌ಪುರ್ ಸಾಹಿತ್‌ನ 34 ವರ್ಷದ ನಟಿ ಹಿಮಾಂಶಿ ಖುರಾನಾ, 16 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಅನ್ನು ಪ್ರಾರಂಭಿಸಿದರು. ಅವರು 2011 ರಲ್ಲಿ ಮಿಸ್ ಲುಧಿಯಾನ ಪ್ರಶಸ್ತಿಯನ್ನು ಗೆದ್ದರು. ಅವರು ‘ಬಿಗ್ ಬಾಸ್’ ನ ಹದಿಮೂರನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ 1.2 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.