ಬಾಲಿವುಡ್ (Bollywood) ಸೆಲೆಬ್ರಿಟಿಗಳು ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಹಿಂದಿಯ ಸ್ಟಾರ್ ಕಲಾವಿದರು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೆಲೆಬ್ರಿಟಿಗಳ ಜೊತೆ ಬೆರೆಯುವ ಟ್ರೆಂಡ್ ಹೆಚ್ಚಾಗಿದೆ. ಬಿ-ಟೌನ್ ತಾರೆಯರು ದಕ್ಷಿಣದ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುವುದು ಕೂಡ ಹೆಚ್ಚಿದೆ. ಈ ನಡುವೆ ಆಮಿರ್ ಖಾನ್ (Aamir Khan) ಅವರು ಅಲ್ಲು ಅರ್ಜುನ್ (Allu Arjun) ಅವರನ್ನು ಭೇಟಿ ಆಗಿದ್ದಾರೆ. ಈ ಸಡನ್ ಭೇಟಿಯ ಹಿಂದಿರುವ ಉದ್ದೇಶ ಏನೆಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ ಅಭಿಮಾನಿಗಳಿಗಂತೂ ಅಚ್ಚರಿ ಮೂಡಿಸಿದೆ.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಸೋಲಿನ ಬಳಿಕ ಆಮಿರ್ ಖಾನ್ ಅವರು ಬ್ರೇಕ್ ಪಡೆದುಕೊಂಡಿದ್ದಾರೆ. ಈಗ ಮುಂಬೈನಿಂದ ಹೈದರಾಬಾದ್ಗೆ ಅವರು ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರನ್ನು ಕರೆದುಕೊಂಡು ಹೋಗಲು ಅಲ್ಲು ಅರ್ಜುನ್ ಅವರ ಕಾರು ಬಂದಿದೆ. ಸೀದಾ ಅವರು ಅಲ್ಲಿಂದ ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಭೇಟಿ ಆಗಿರುವ ಫೋಟೋ ಇನ್ನಷ್ಟೇ ಲಭ್ಯವಾಗಬೇಕಿದೆ.
ಇದನ್ನೂ ಓದಿ: Aamir Khan: ‘ನನಗೆ ಭಾರತ ಇಷ್ಟವಿಲ್ಲ ಅನ್ನೋದು ಸುಳ್ಳು, ನನ್ನ ಸಿನಿಮಾ ಬಹಿಷ್ಕಾರ ಮಾಡಬೇಡಿ ಪ್ಲೀಸ್’: ಆಮಿರ್ ಖಾನ್
‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಅಲ್ಲು ಅರ್ಜುನ್ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸುಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಬ್ಯುಸಿ ಸಮಯದಲ್ಲಿ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ಆಮಿರ್ ಖಾನ್ ಬಂದಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಫ್ಯಾಮಿಲಿ ಜತೆ ಆಮಿರ್ ಖಾನ್ ಪುತ್ರಿ ಇರಾ ಖಾನ್ ಬರ್ತ್ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್ ಹೇಳಿದ್ದೇನು?
ಕೆಲವೇ ತಿಂಗಳ ಹಿಂದೆ ತೆಲುಗಿನ ಅಕ್ಕಿನೇನಿ ಕುಟುಂಬದ ಜೊತೆ ಆಮಿರ್ ಖಾನ್ ಅವರು ಕಾಣಿಸಿಕೊಂಡಿದ್ದರು. ಅಕ್ಕಿನೇನಿ ನಾಗ ಚೈತನ್ಯ ನಿವಾಸದಲ್ಲಿ ಅವರು ಭೋಜನ ಸವಿದಿದ್ದರು. ಈಗ ಅವರು ಅಲ್ಲು ಅರ್ಜುನ್ ಮನೆಗೆ ಬಂದಿರುವುದು ಕೌತುಕಕ್ಕೆ ಕಾರಣ ಆಗಿದೆ. ‘ಪುಷ್ಪ 2’ ಸಿನಿಮಾದಲ್ಲಿ ಆಮಿರ್ ಖಾನ್ ನಟಿಸುತ್ತಿದ್ದಾರಾ? ಆ ಕಾರಣದಿಂದಲೇ ಅವರು ಹೈದರಾಬಾದ್ಗೆ ಬಂದಿದ್ದಾರಾ? ಇಂಥ ಹಲವು ಪ್ರಶ್ನೆಗಳು ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿವೆ.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೇಲೆ ಆಮಿರ್ ಖಾನ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂದುಕೊಂಡ ರೀತಿಯಲ್ಲಿ ಆ ಸಿನಿಮಾ ಕಲೆಕ್ಷನ್ ಮಾಡಲಿಲ್ಲ. ಹಾಕಿದ ಬಂಡವಾಳವೂ ವಾಪಸ್ ಬರಲಿಲ್ಲ. ಅದು ಆಮಿರ್ ಖಾನ್ಗೆ ದೊಡ್ಡ ಪೆಟ್ಟು ನೀಡಿತು. ಅವರು ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ವಿಳಂಬ ಆಗುತ್ತಿದೆ. ಅವರ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:35 pm, Tue, 7 March 23