AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sai Pallavi: ಸೀತೆ ಪಾತ್ರದಲ್ಲಿ ನಟಿಸುತ್ತಾರಾ ಸಾಯಿ ಪಲ್ಲವಿ? ಇದು ಬೆಸ್ಟ್ ಆಯ್ಕೆ ಅಂತಾರೆ ಅಭಿಮಾನಿಗಳು

Ramayana | Ranbir Kapoor: ಸಾಯಿ ಪಲ್ಲವಿ ಅವರು ಪ್ರತಿಭಾವಂತ ನಟಿ ಎಂಬುದು ಈಗಾಗಲೇ ಸಾಬೀತಾಗಿದೆ. ಜನರು ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

Sai Pallavi: ಸೀತೆ ಪಾತ್ರದಲ್ಲಿ ನಟಿಸುತ್ತಾರಾ ಸಾಯಿ ಪಲ್ಲವಿ? ಇದು ಬೆಸ್ಟ್ ಆಯ್ಕೆ ಅಂತಾರೆ ಅಭಿಮಾನಿಗಳು
ಸಾಯಿ ಪಲ್ಲವಿ
ಮದನ್​ ಕುಮಾರ್​
|

Updated on: Mar 08, 2023 | 8:00 AM

Share

ಬಹುಭಾಷಾ ನಟಿ ಸಾಯಿ ಪಲ್ಲವಿ (Sai Pallavi) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅತಿಯಾಗಿ ಗ್ಲಾಮರ್​ ಇರುವಂತಹ ಪಾತ್ರವನ್ನು ಅವರು ಮಾಡುವುದಿಲ್ಲ. ಹಾಗಾಗಿ ಅಭಿಮಾನಿಗಳ ಮನದಲ್ಲಿ ಅವರ ಬಗ್ಗೆ ಒಂದು ರೀತಿಯ ಗೌರವ ಇದೆ. ಪಾತ್ರಗಳ ಆಯ್ಕೆಯಲ್ಲಿಯೂ ಅವರು ಸಖತ್​ ಕಾಳಜಿ ವಹಿಸುತ್ತಾರೆ. ಈವರೆಗೂ ಸಾಯಿ ಪಲ್ಲವಿ ಮಾಡಿದ ಸಿನಿಮಾಗಳೆಲ್ಲವೂ (Sai Pallavi Movies) ಒಂದಿಲ್ಲೊಂದು ಕಾರಣಕ್ಕೆ ವಿಶೇಷ ಎನಿಸಿಕೊಂಡಿವೆ. ಈಗ ಅವರು ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಹಾಗಿದ್ದರೂ ಕೂಡ ಬಿ-ಟೌನ್​ ಅಂಗಳದಿಂದ ಗಾಸಿಪ್​ ಕೇಳಿಬಂದಿದೆ. ರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ (Ranbir Kapoor) ನಟಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ.

ಸರ್ವಕಾಲಕ್ಕೂ ಸಲ್ಲುವಂತಹ ಕಥೆ ರಾಮಾಯಣ. ಈ ಮಹಾಗ್ರಂಥವನ್ನು ಆಧಾರವಾಗಿ ಇಟ್ಟುಕೊಂಡು ಹಲವು ಭಾಷೆಯಲ್ಲಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಇನ್ನೂ ಅನೇಕ ಪ್ರಯತ್ನಗಳು ಆಗುತ್ತಿವೆ. ಬಾಲಿವುಡ್​ ಮಂದಿ ಕೂಡ ರಾಮಾಯಣದ ಕಥೆಯ ಬೆನ್ನು ಹತ್ತಿದ್ದಾರೆ. ಈ ಸಿನಿಮಾಗೆ ಮಧು ಮಂತೆನ ಅವರು ಬಂಡವಾಳ ಹೂಡಲಿದ್ದಾರೆ. ಈಗಾಗಲೇ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ರಾಮನಾಗಿ ರಣಬೀರ್​ ಕಪೂರ್​ ಕಾಣಿಸಿಕೊಂಡರೆ, ಅವರ ಜೊತೆ ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುವ ಸಾಧ್ಯತೆ ಇದೆಯಂತೆ. ಆದರೆ ಇದೆಲ್ಲವೂ ಇನ್ನೂ ಅಂತೆ-ಕಂತೆ ಹಂತದಲ್ಲಿದೆ.

ಇದನ್ನೂ ಓದಿ: Sai Pallavi: ‘ಪುಷ್ಪ 2’ ಚಿತ್ರದಲ್ಲಿ ಸಾಯಿ ಪಲ್ಲವಿ ಇರ್ತಾರಾ? ಸ್ಪಷ್ಟನೆ ನೀಡಿದ ನಿರ್ಮಾಪಕ

ಇದನ್ನೂ ಓದಿ
Image
Virata Parvam OTT Release: ಥಿಯೇಟರ್​ನಲ್ಲಿ ಸೋತ ಸಾಯಿ ಪಲ್ಲವಿಯ ‘ವಿರಾಟ ಪರ್ವಂ’ ಚಿತ್ರಕ್ಕೀಗ ಒಟಿಟಿಯೇ ಗತಿ; ಪ್ರಸಾರ​ ಯಾವಾಗ?
Image
Sai Pallavi: ಥಿಯೇಟರ್​ಗೆ ಜನರನ್ನು ಕರೆಸುವಲ್ಲಿ ಸೋತ ಸಾಯಿ ಪಲ್ಲವಿ; ‘ಲೇಡಿ ಪವರ್​ ಸ್ಟಾರ್​’ ಬಿರುದು ಈಗೇನಾಯ್ತು?
Image
Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?
Image
Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ಸೋಶಿಯಲ್​ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ನಿಭಾಯಿಸುವುದೇ ಹೌದಾದರೆ ಇದು ಸರಿಯಾದ ಆಯ್ಕೆ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ. ಸಾಯಿ ಪಲ್ಲವಿ ಅವರು ಪ್ರತಿಭಾವಂತ ನಟಿ ಎಂಬುದು ಈಗಾಗಲೇ ಸಾಬೀತಾಗಿದೆ. ಜನರು ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಸೀತೆ ಪಾತ್ರಕ್ಕೆ ಅವರು ನ್ಯಾಯ ಸಲ್ಲಿಸುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಿಗೆ ಇದೆ. ಬೇರೆ ನಟಿಯರ ಹೆಸರು ಕೂಡ ಈ ಹಿಂದೆ ಕೇಳಿಬಂದಿತ್ತು. ಆದರೆ ಯಾವುದೂ ಅಂತಿಮವಾದ ಬಗ್ಗೆ ಸುದ್ದಿ ಹೊರಬಿದ್ದಿಲ್ಲ.

ಇದನ್ನೂ ಓದಿ: Sai Pallavi: ಚಿತ್ರಮಂದಿರದಲ್ಲಿ ಸೋತ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಚಿತ್ರಕ್ಕೆ ಈಗ ಅಂತಾರಾಷ್ಟ್ರೀಯ ಮನ್ನಣೆ

ಆಫರ್​ ಬಂದಿಲ್ಲ ಅಂತಿದ್ದಾರೆ ರಣಬೀರ್​ ಕಪೂರ್​:

ಒಂದುಕಡೆ ಗಾಸಿಪ್​ ಮಂದಿ ಒಂದಷ್ಟು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ರಾಮಾಯಣ ಕಥೆ ಆಧಾರಿತ ಸಿನಿಮಾದಿಂದ ತಮಗೆ ಯಾವುದೇ ಆಫರ್​ ಬಂದಿಲ್ಲ ಎಂದು ರಣಬೀರ್​ ಕಪೂರ್​ ಹೇಳುತ್ತಿದ್ದಾರೆ. ಅತ್ತ ಬಾಲಿವುಡ್​ನ ಕೆಲವು ನಿರ್ಮಾಣ ಸಂಸ್ಥೆಗಳು ಕೂಡ ರಾಮಾಯಣವನ್ನು ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್​ ರೂಪಿಸಿಕೊಂಡಿವೆ. ಆದರೆ ಯಾರಿಂದಲೂ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ