ಬಿಡುಗಡೆಗೂ ಮುನ್ನ ‘83’ ಚಿತ್ರ ನೋಡಲು ನಿರಾಕರಿಸಿದ್ದ 1983 ವಿಶ್ವಕಪ್​ ಟೀಮ್ ಆಟಗಾರರು​; ಕಾರಣ ಏನು?

| Updated By: Digi Tech Desk

Updated on: Dec 24, 2021 | 9:35 AM

83 Movie: ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆ ಆಗಿರುವ ‘83’ ಚಿತ್ರ ಹಿಂದಿಯಲ್ಲಿ ನಿರ್ಮಾಣ ಆಗಿದ್ದು ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ರಣವೀರ್​ ಸಿಂಗ್​ ಈ ಚಿತ್ರದ ಹೀರೋ.

ಬಿಡುಗಡೆಗೂ ಮುನ್ನ ‘83’ ಚಿತ್ರ ನೋಡಲು ನಿರಾಕರಿಸಿದ್ದ 1983 ವಿಶ್ವಕಪ್​ ಟೀಮ್ ಆಟಗಾರರು​; ಕಾರಣ ಏನು?
83 ಸಿನಿಮಾ ಪೋಸ್ಟರ್​
Follow us on

ಬಹುನಿರೀಕ್ಷಿತ ‘83’ ಸಿನಿಮಾ (83 Movie) ಇಂದು (ಡಿ.24) ಅದ್ದೂರಿಯಾಗಿ ಬಿಡುಗಡೆ ಆಗಿದೆ. 1983ರಲ್ಲಿ ಟೀಮ್​ ಇಂಡಿಯಾ ವಿಶ್ವಕಪ್​ (1983 World Cup) ಗೆದ್ದ ಘಟನೆಯನ್ನೇ ಆಧರಿಸಿ ಈ ಚಿತ್ರ ತಯಾರಾಗಿದೆ. ರಣವೀರ್​ ಸಿಂಗ್​ (Ranveer Singh) ಅವರು ಕಪಿಲ್​ ದೇವ್​ (Kapil Dev) ಪಾತ್ರವನ್ನು ಮಾಡಿದ್ದಾರೆ. ಮೊದಲ ಲಾಕ್​ಡೌನ್​ ಆರಂಭ ಆಗುವುದಕ್ಕೂ ಮುನ್ನವೇ ಈ ಚಿತ್ರ ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಕೊರೊನಾ ಕಾರಣದಿಂದ ಇಷ್ಟು ತಡವಾಗಿ ರಿಲೀಸ್​ ಆಗಿದೆ. ರಿಲೀಸ್​ಗೂ ಮುನ್ನ ಆಪ್ತರಿಗಾಗಿ ಪ್ರದರ್ಶನ ಏರ್ಪಡಿಸಲಾಗಿತ್ತು. ಆದರೆ ಬಿಡುಗಡೆ​ ಆಗುವುದಕ್ಕಿಂತ ಮೊದಲು ಈ ಚಿತ್ರವನ್ನು ನೋಡಬಾರದು ಎಂದು 1983ರಲ್ಲಿ ವಿಶ್ವಕಪ್​ ಗೆದ್ದ ಭಾರತ ತಂಡದ ಆಟಗಾರರು ನಿರ್ಧರಿಸಿದ್ದರು! ಅದಕ್ಕೆ ಕಾರಣ ಏನು ಎಂಬುದನ್ನು ನಿರ್ದೇಶಕ ಕಬೀರ್​ ಖಾನ್​ (Kabir Khan) ಈಗ ವಿವರಿಸಿದ್ದಾರೆ.

‘ಅಂದು ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾದ ಎಲ್ಲ ಆಟಗಾರರು ತಮ್ಮ ಬಗೆಗಿನ ವಿವರಗಳನ್ನು ನಮಗೆ ನೀಡಿದರು. ಅದನ್ನು ತೆರೆ ಮೇಲೆ ಹೇಗೆ ಚಿತ್ರಿಸಬೇಕು ಎಂಬ ಸಂಪೂರ್ಣ ಸ್ವಾತಂತ್ರ್ಯವನ್ನು ಅವರು ನನಗೆ ನೀಡಿದರು. ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು. ಆದ್ದರಿಂದ ಸಿನಿಮಾ ರಿಲೀಸ್​ಗೂ ಮುನ್ನ ಚಿತ್ರದ ಕಂಟೆಂಟ್​ನಲ್ಲಿ ಮೂಗು ತೂರಿಸಲು ಅವರು ಯಾರೂ ಬರಲಿಲ್ಲ. ಹಾಗಾಗಿ ರಿಲೀಸ್​ಗೂ ಮೊದಲು ಈ ಸಿನಿಮಾ ನೋಡಲು ಅವರು ಒಪ್ಪಲಿಲ್ಲ. ರಿಲೀಸ್​ ಬಳಿಕ ಎಲ್ಲರ ಜೊತೆ ಕುಳಿತು ಸಿನಿಮಾ ನೋಡುವುದಾಗಿ ತಿಳಿಸಿದ್ದರು’ ಎಂದು ನಿರ್ದೇಶಕ ಕಬೀರ್ ಖಾನ್​ ಹೇಳಿದ್ದಾರೆ.

1983ರ ವಿಶ್ವಕಪ್​ ವೇಳೆ ಏನೆಲ್ಲ ನಡೆಯಿತು ಎಂಬುದಕ್ಕೆ ಈಗ ಸೂಕ್ತ ದಾಖಲೆಗಳಿಲ್ಲ. ಈ ಘಟನೆಗಳಿಗೆ ಸಂಬಂಧಿಸಿದಂತೆ ವಿಡಿಯೋಗಳು ಕೂಡ ಹೆಚ್ಚು ಲಭ್ಯವಿಲ್ಲ. ಹಾಗಾಗಿ ಅಂದು ಭಾರತ ತಂಡದಲ್ಲಿ ಇದ್ದ ಆಟಗಾರರನ್ನೇ ಮಾತನಾಡಿಸಿ ವಿವರಗಳನ್ನು ಕಲೆ ಹಾಕಬೇಕಾಯಿತು. ಆ ವಿವರಗಳನ್ನು ಪಡೆಯಲು ‘83’ ನಿರ್ಮಾಪಕರು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಟೀಮ್​ನಲ್ಲಿದ್ದ ಎಲ್ಲ ಆಟಗಾರರಿಗೂ ಸೇರಿ ಒಟ್ಟು 15 ಕೋಟಿ ರೂ.ಗಳನ್ನು ನೀಡಲಾಗಿದೆ. ಅದರಲ್ಲಿ ಕ್ಯಾಪ್ಟನ್​ ಕಪಿಲ್​ ದೇವ್​ ಅವರಿಗೆ ಬರೋಬ್ಬರಿ 5 ಕೋಟಿ ಕೊಡಲಾಗಿದೆ.

ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆ ಆಗಿರುವ ಈ ಚಿತ್ರ ಹಿಂದಿಯಲ್ಲಿ ನಿರ್ಮಾಣ ಆಗಿದ್ದು ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಕಿಚ್ಚ ಸುದೀಪ್​ ಅವರು ಅರ್ಪಿಸಿದ್ದಾರೆ. ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್​ಟೇನ್ಮೆಂಟ್​ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಇಂದು ಸಿನಿಮಾ ರಿಲೀಸ್​ ಆಗಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ:

83 Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

ಡಬ್ಬಿಂಗ್​ ಚಿತ್ರದ ಕನ್ನಡ ವರ್ಷನ್​ಗೆ ಹೆಚ್ಚು ಥಿಯೇಟರ್​ ಸಿಗಲ್ಲ ಯಾಕೆ? ಪ್ರಾಕ್ಟಿಕಲ್​ ಕಾರಣ ತಿಳಿಸಿದ ‘83’ ವಿತರಕ ಜಾಕ್​​ ಮಂಜು

Published On - 9:03 am, Fri, 24 December 21