ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ (Nawazuddin Siddiqui) ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಅವರ ವಿರುದ್ಧ ಪತ್ನಿ ಆಲಿಯಾ ಸಿದ್ದಿಖಿ ಹತ್ತಾರು ಆರೋಪ ಹೊರಿಸಿದ್ದರು. ವರದಕ್ಷಿಣೆ ಕಿರುಕುಳ ನೀಡಲಾಗಿತ್ತು ಎಂದು ಕೂಡ ಆಲಿಯಾ ಹೇಳಿದ್ದರು. ಆದರೆ ಈಗ ಅವರು ಮತ್ತೆ ಗಂಡನ ಜೊತೆ ಒಂದಾಗಿದ್ದಾರೆ. ತಮ್ಮ ನಡುವೆ ಇದ್ದ ಎಲ್ಲ ಕಿರಿಕ್ ಮರೆತು ಒಟ್ಟಾಗಿ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿದ್ದಾರೆ. ಅವರ ಈ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಆಲಿಯಾ ಸಿದ್ದಿಖಿ (Aaliya Siddiqui) ಈ ರೀತಿ ಮನಸ್ಸು ಬದಲಾಯಿಸಲು ಕಾರಣ ಏನು? ಮಕ್ಕಳು! ಹೌದು, ಮಕ್ಕಳ ಸಲುವಾಗಿ ಅವರು ಮತ್ತೆ ನವಾಜುದ್ದೀನ್ ಸಿದ್ದಿಖಿ ಜೊತೆ ಸಂಸಾರ ಮಾಡಲು ಒಪ್ಪಿಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ಆಲಿಯಾ ಸಿದ್ದಿಖಿ ಮತ್ತು ನವಾಜುದ್ದೀನ್ ಸಿದ್ದಿಖಿ ಅವರು ಜೊತೆಯಾಗಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಇಷ್ಟು ದಿನ ಪರಸ್ಪರ ಕಿತ್ತಾಡಿಕೊಂಡು, ತಮ್ಮ ಸಂಸಾರದ ಜಗಳವನ್ನು ಬೀದಿಗೆ ತಂದಿದ್ದ ಅವರು ಈಗ ಮತ್ತೆ ಒಂದಾಗಿದ್ದಾರೆ ಎಂಬುದಕ್ಕೆ ಆ ಫೋಟೋ ಸಾಕ್ಷಿ ಆಗಿತ್ತು. ಆ ಕುರಿತು ಮಾಧ್ಯಮವೊಂದಕ್ಕೆ ಆಲಿಯಾ ಸಿದ್ದಿಖಿ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ.
‘ಮೂರನೇ ವ್ಯಕ್ತಿಯಿಂದಾಗಿ ನಾವು ಯಾವಾಗಲೂ ಸಮಸ್ಯೆ ಅನುಭವಿಸಿದೆವು ಅನಿಸುತ್ತದೆ. ಈಗ ನಮ್ಮ ಬದುಕಿನಲ್ಲಿ ತಪ್ಪು ತಿಳಿವಳಿಕೆ ಇಲ್ಲ. ನಮ್ಮ ಮಕ್ಕಳ ಸಲುವಾಗಿ ನಾವು ಸಂಪೂರ್ಣ ಶರಣಾಗಿದ್ದೇವೆ. ಬದುಕಿನಲ್ಲಿ ಈಗ ಬೇರಾಗುವ ಮಾತೇ ಇಲ್ಲ. ಯಾಕೆಂದರೆ ಮಕ್ಕಳು ಈಗ ದೊಡ್ಡವರಾಗಿದ್ದಾರೆ. ಮಗಳು ಶೋರಾಗೆ ನವಾಜ್ ತುಂಬಾ ಹತ್ತಿರವಾಗಿದ್ದಾರೆ. ನಮ್ಮ ನಡುವೆ ಜಗಳ ಆದಾಗ ಆಕೆ ತುಂಬ ಡಿಸ್ಟರ್ಬ್ ಆಗಿದ್ದಳು. ಅದನ್ನೆಲ್ಲ ಅವಳಿಕೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಇನ್ಮೇಲೆ ಜಗಳ ಮಾಡೋದ ಬೇಡ. ಒಟ್ಟಾಗಿ, ಶಾಂತಿಯಿಂದ ಜೀವನ ಮಾಡೋಣ ಅಂತ ನಿರ್ಧರಿಸಿದೆವು’ ಎಂದು ಆಲಿಯಾ ಸಿದ್ದಿಖಿ ಹೇಳಿದ್ದಾರೆ.
ಇದನ್ನೂ ಓದಿ: ಮಗಳ ವಯಸ್ಸಿನ ಹುಡುಗಿ ಜೊತೆ ನವಾಜುದ್ದೀನ್ ಸಿದ್ಧಿಕಿ ಲಿಪ್ ಲಾಕ್; ವೈರಲ್ ವಿಡಿಯೋ ಬಗ್ಗೆ ಟೀಕೆ
ಬಾಲಿವುಡ್ನಲ್ಲಿ ನಟ ನವಾಜುದ್ದೀನ್ ಸಿದ್ದಿಖಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಪತ್ನಿ ಮಾಡಿದ ಆರೋಪಗಳಿಂದ ಅವರ ಹೆಸರಿಗೆ ಕಳಂಕ ಬಂದಿತ್ತು. ‘ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾರೆ’ ಎಂದು ಕೂಡ ಆಲಿಯಾ ಆರೋಪಿಸಿದ್ದರು. ವಿಚ್ಛೇದನ ಪಡೆಯುವ ಮಟ್ಟಕ್ಕೆ ಅವರ ಜಗಳ ತಲುಪಿತ್ತು. ಆದರೆ ಈಗ ಅವರಿಬ್ಬರು ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ. ಆಲಿಯಾ ಮತ್ತು ನವಾಜುದ್ದೀನ್ ಮದುವೆ ಆಗಿ 14 ವರ್ಷಗಳು ಕಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.