ಬಾಲಿವುಡ್ನ ಸ್ಟಾರ್ ಹೀರೋ ಆಮಿರ್ ಖಾನ್ ಅವರು ಸಿನಿಮಾ ರಂಗದಲ್ಲಿ ಯಶಸ್ಸು ಕಂಡಿರಬಹುದು. ಆದರೆ, ಪ್ರೀತಿ ವಿಚಾರದಲ್ಲಿ ವಿಫಲತೆ ಕಂಡಿದ್ದೇ ಹೆಚ್ಚು. ಅವರ ಎರಡು ವಿವಾಹಗಳು ಕೊನೆ ಆಗಿವೆ. ಈಗ ಆಮಿರ್ ಖಾನ್ ಅವರಿಗೆ ಹೊಸ ಗರ್ಲ್ಫ್ರೆಂಡ್ ಸಿಕ್ಕಿದ್ದಾರೆ. ಗೌರಿ (Gauri) ಅನ್ನೋದು ಅವರ ಹೆಸರು. ತಮ್ಮ 60ನೇ ವರ್ಷದ ಜನ್ಮದಿನದ ಅಂಗವಾಗಿ ಅವರು ಹೊಸ ಗೆಳತಿಯನ್ನು ಪರಿಚಯಿಸಿದ್ದಾರೆ. ಈಗ ಗೌರಿ ಅವರು ಆಮಿರ್ ಖಾನ್ ಅವರಲ್ಲಿ ಇಷ್ಟವಾದ ವಿಚಾರ ಯಾವುದು ಎಂಬುದನ್ನು ರಿವೀಲ್ ಮಾಡಿದ್ದಾರೆ.
ಆಮಿರ್ ಖಾನ್ ಅವರಿಗೆ ಗೌರಿಯಲ್ಲಿ ಇಷ್ಟವಾದ ವಿಚಾರ ಏನು ಎಂಬುದನ್ನು ರಿವೀಲ್ ಮಾಡಿದ್ದರು. ‘ನಾನು ಶಾಂತವಾಗಿ ಇರುವಂತೆ ನೋಡಿಕೊಳ್ಳುವ, ನನಗೆ ಶಾಂತಿ ನೀಡುವ ಸಂಗಾತಿಯನ್ನು ಹುಡುಕುತ್ತಿದ್ದೆ. ಗೌರಿಯಲ್ಲಿ ಆ ಗುಣಗಳು ಇದ್ದವು’ ಎಂದಿದ್ದಾರೆ ಆಮಿರ್ ಖಾನ್. ‘ದಯೆ ತೋರುವ, ಸಜ್ಜನ ಮತ್ತು ಕಾಳಜಿಯುಳ್ಳ ವ್ಯಕ್ತಿ ಬೇಕಾಗಿದ್ದರು. ಆಗ ನನಗೆ ಆಮಿರ್ ಸಿಕ್ಕರು’ ಎಂದಿದ್ದಾರೆ’ ಗೌರಿ.
ಆಮಿರ್ ಖಾನ್ ಹಾಗೂ ಗೌರಿ ಮಧ್ಯೆ 25 ವರ್ಷ ಹಿಂದಿನ ಪರಿಚಯ ಇದೆ. ಹೌದು, 25 ವರ್ಷಗಳ ಹಿಂದೆಯೇ ಒಬ್ಬರಿಗೊಬ್ಬರು ಪರಿಚಯ ಆಗಿದ್ದರು. ಆದರೆ, ಆ ಬಳಿಕ ಇಬ್ಬರ ಮಧ್ಯೆ ಕಾಂಟ್ಯಾಕ್ಟ್ ಇರಲಿಲ್ಲ. ಒಂದೂವರೆ ವರ್ಷಗಳ ಹಿಂದೆ ಮತ್ತೆ ಪರಿಚಯ ಬೆಳೆಯಿತು’ ಎಂದಿದ್ದಾರೆ ಆಮಿರ್.
ಗೌರಿ ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ದಕ್ಷಿಣದ ಸಿನಿಮಾಗಳನ್ನು ಹೆಚ್ಚು ಇಷ್ಟಪಟ್ಟವರು. ಅವರು ಹಿಂದಿ ಸಿನಿಮಾಗಳನ್ನು ಅಷ್ಟಾಗಿ ನೋಡಿಲ್ಲ. ವರ್ಷದ ಹಿಂದೆ ಆಮಿರ್ ನಟನೆಯ ‘ದಿಲ್ ಚಾಹ್ತಾ ಹೇ’ ಹಾಗೂ ‘ಲಗಾನ್’ ಚಿತ್ರಗಳನ್ನು ಗೌರಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಜತೆ 3ನೇ ಮದುವೆಗೆ ಸಜ್ಜಾದ ಗೌರಿ ಯಾರು? ಬೆಂಗಳೂರು ಸುಂದರಿ ಬಗ್ಗೆ ಇಲ್ಲಿದೆ ವಿವರ
ಆಮಿರ್ ಖಾನ್ ಅವರು ಹುಟ್ಟಿದ್ದು 1965ರ ಮಾರ್ಚ್ 14ರಂದು. ಅದೇ ರೀತಿ ಗೌರಿ ಜನಿಸಿದ್ದು 1978ರ ಆಗಸ್ಟ್ 21ರಂದು. ಇಬ್ಬರ ಮಧ್ಯೆ ಸುಮಾರು 14 ವರ್ಷಗಳ ಅಂತರ ಇದೆ. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:04 pm, Sat, 15 March 25