ಈಗತಾನೇ ಮದುವೆ ನಟಿಯ ಮೇಲೆ ವಿವಾಹೇತರ ಸಂಬಂಧ ಆರೋಪ: ಕೊನೆಗೂ ಮೌನ ಮುರಿದ ನಟಿ
Aditi Sharma: ಅದಿತಿ ಶರ್ಮಾ ಅವರು ತಮ್ಮ ನಾಲ್ಕು ತಿಂಗಳ ಮದುವೆಯ ನಂತರ ವಿಚ್ಛೇದನ ಪಡೆಯುತ್ತಿದ್ದಾರೆ. ಅವರ ಪತಿ ಅಭಿನೀತ್ ಕೌಶಿಕ್ ಅವರ ಮೇಲೆ ವಿವಾಹೇತರ ಸಂಬಂಧದ ಆರೋಪ ಹೊರಿಸಿದ್ದಾರೆ. ಅದಿತಿ ಅವರು ಈ ಆರೋಪಗಳನ್ನು ನಿರಾಕರಿಸಿ, ಅಭಿನೀತ್ ಅವರ ಅಸೂಯೆ ಮತ್ತು ಅವರ ಕುಟುಂಬದ ಮೇಲಿನ ಅವಮಾನದ ಬಗ್ಗೆ ಮಾತನಾಡಿದ್ದಾರೆ.

‘ರಬ್ ಸೆ ಹೈ ದುವಾ’, ‘ಯೇ ಜಾದು ಹೈ ಜಿನ್ ಕಾ’ ಮತ್ತು ‘ಅಪೋಲೆನಾ’ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ನಟಿ ಅದಿತಿ ಶರ್ಮಾ, ಪ್ರಸ್ತುತ ವಿಚ್ಛೇದನದಿಂದಾಗಿ ಸುದ್ದಿಯಲ್ಲಿದ್ದಾರೆ. ಮದುವೆಯಾದ ಕೇವಲ ನಾಲ್ಕು ತಿಂಗಳ ನಂತರ ಅವರು ಅಭಿನೀತ್ ಕೌಶಿಕ್ನಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಮದುವೆಗೆ ಮೊದಲು, ಅದಿತಿ ಮತ್ತು ಅಭಿನೀತ್ ಲಿವ್-ಇನ್ನಲ್ಲಿ ಇದ್ದರು. ಈಗ ಪತ್ನಿಮೇಲೆ ವಿವಾಹೇತರ ಸಂಬಂಧವನ್ನು ಹೊರಿಸಿದ್ದಾರೆ ಅಭಿನೀತ್. ಈ ಎಲ್ಲಾ ಆರೋಪಗಳಿಗೆ ಅದಿತಿ ಈಗ ಪ್ರತಿಕ್ರಿಯಿಸಿದ್ದಾರೆ.
‘ನಮ್ಮ ವಿವಾಹವು ಒಂದು ಖಾಸಗಿ ಕಾರ್ಯಕ್ರಮವಾಗಿತ್ತು. ಆದರೆ ಅದರಲ್ಲಿ ಯಾವುದೇ ರಹಸ್ಯವಿರಲಿಲ್ಲ. ನನ್ನ ಕುಟುಂಬ, ನನ್ನ ಆಪ್ತ ಸ್ನೇಹಿತರು, ನನ್ನ ಗೆಳೆಯರಿಗೆ ಮದುವೆಯ ಬಗ್ಗೆ ತಿಳಿದಿತ್ತು. ಹಾಗಾಗಿ ಅದು ರಹಸ್ಯ ವಿವಾಹವಾಗಿರಲಿಲ್ಲ. ನಾವು ಕೆಲವು ಅತಿಥಿಗಳ ಸಮ್ಮುಖದಲ್ಲಿ ಮದುವೆಯಾದೆವು’ ಎಂದಿದ್ದಾರೆ ಅದಿತಿ.
‘ನಾನು ಅಭಿನೀತ್ನ ತುಂಬಾ ಪ್ರೀತಿಸುತ್ತೇನೆ ಮತ್ತು ಅವನನ್ನು ಕಳೆದುಕೊಳ್ಳಲು ನಾನು ಬಯಸಲಿಲ್ಲ, ಆದ್ದರಿಂದ ನಾವು ಮದುವೆಯಾದೆವು. ನಾನು ಸಹನಟ ಅಥವಾ ಪುರುಷನೊಂದಿಗೆ ಏನು ಮಾತನಾಡಿದರೂ, ಅವನು ನನ್ನ ಮಾತನ್ನು ಕೇಳಲು ಬಯಸುವುದಿಲ್ಲ. ವನಿಗೆ ಸಾಕಷ್ಟು ಅಸೂಯೆ ಇದೆ’ ಎಂದಿದ್ದಾರೆ ಅವರು.
‘ಅಪೋಲೆನಾ’ ಸರಣಿಯಲ್ಲಿ ಅದಿತಿ 18 ವರ್ಷದ ಹುಡುಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ . ಆದ್ದರಿಂದ, ಮದುವೆಯ ಸುದ್ದಿ ತನ್ನ ತೆರೆಯ ಮೇಲಿನ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸಲು ವಿವಾಹ ವಿಚಾರ ಮುಚ್ಚಿಟ್ಟೆ ಎಂದಿದ್ದಾರೆ ಅವರು.
ಇದನ್ನೂ ಓದಿ:ಬಾಲಿವುಡ್ ಹಿರಿಯ ನಟ ದೇಬ್ ಮುಖರ್ಜಿ ನಿಧನ, ಜೂ ಎನ್ಟಿಆರ್ ಸಿನಿಮಾ ಮೇಲೆ ಪ್ರಭಾವ?
‘ವಿಚ್ಛೇದನಕ್ಕೆ ಹಲವು ಕಾರಣಗಳಿವೆ. ನಾನು ನ್ಯಾಯಾಲಯದಲ್ಲಿ ಅದರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ಅಭಿನೀತ್ ನನ್ನ ಹೆತ್ತವರನ್ನು ಹಲವು ಬಾರಿ ಅವಮಾನಿಸಿದ್ದಾನೆ. ನಾನು ಅವನ ದುರಾಚಾರವನ್ನು ಸಹಿಸಿಕೊಂಡೆ. ಕೆಲವು ಕಾರಣಗಳಿಂದ ನಾನು ಮನೆ ಬಿಟ್ಟು ಹೋಗಬೇಕಾಯಿತು ಮತ್ತು ನನಗೆ ತುಂಬಾ ಭಯವಾಯಿತು’ ಎಂದಿದ್ದಾರೆ ಅವರು.
ಸಹ ನಟ ಸಮರ್ಥ್ಯ ಜೊತೆ ಅವರು ಸಂಬಂಧ ಹೊಂದಿರೋ ಆರೋಪ ಇದೆ. ಈ ಬಗ್ಗೆ ಮಾತನಾಡಿರೋ ಅವರು, ‘ಸಮರ್ಥ್ಯ ಮತ್ತು ನಾನು ತುಂಬಾ ಒಳ್ಳೆಯ ಸ್ನೇಹಿತರು. ನಿಜ ಹೇಳಬೇಕೆಂದರೆ, ಪಾರ್ಟಿಯಲ್ಲಿ ನಾನು ನೋಡಿದ, ಮಾತನಾಡಿದ ಅಥವಾ ಚಾಟ್ ಮಾಡಿದ ಯಾವುದೇ ಪುರುಷನೊಂದಿಗೆ ಅವನಿಗೆ ಸಮಸ್ಯೆ ಕಾಣುತ್ತಿತ್ತು. ಅದು ನಾಲ್ಕು ಜನರಾರಿದ್ದರೂ ಸಹ. ನಾನು ಸಾಮಾಜಿಕ ಮಾಧ್ಯಮದಲ್ಲಿ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದರೂ, ಅದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ. ಈ ಕಾರಣಗಳಿಂದಾಗಿ, ನಾನು ಕ್ರಮೇಣ ನನ್ನ ಸ್ನೇಹಿತರು ಮತ್ತು ಕುಟುಂಬದಿಂದ ದೂರವಾದೆ’ ಎಂದು ಅದಿತಿ ತನ್ನ ಕಥೆಯ ಭಾಗವನ್ನು ವಿವರಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ