ಸಿನಿಮಾ ರಂಗದವರ ಕೆಟ್ಟ ಬ್ಯುಸಿನೆಸ್ ಮಾಡೆಲ್ ಅನ್ನು ಟೀಕಿಸಿದ ಆಮಿರ್ ಖಾನ್

|

Updated on: Apr 02, 2025 | 11:33 AM

Aamir Khan: ನಟ ಆಮಿರ್ ಖಾನ್ ಬಾಲಿವುಡ್ ಇತರೆ ಇಬ್ಬರು ಖಾನ್​ಗಳಂತಲ್ಲ. ನಾಯಕನ ವೈಭವೀಕರಣದ ಹಿಂದೆ ಓಡದೆ ಒಳ್ಳೆಯ ಸಿನಿಮಾ ನೀಡುತ್ತಾ ಬಂದಿದ್ದಾರೆ. ಒಳ್ಳೆಯ ನಟ, ನಿರ್ದೇಶಕ ಆಗಿರುವ ಆಮಿರ್ ಖಾನ್ ಒಳ್ಳೆಯ ವಿಚಾರವಂತರೂ ಸಹ. ಇದೀಗ ಅವರು ಬಾಲಿವುಡ್​ನ ಬ್ಯುಸಿನೆಸ್ ಮಾಡೆಲ್ ಅನ್ನು ಟೀಕೆ ಮಾಡಿದ್ದಾರೆ. ಅವರು ಹೇಳುತ್ತಿರುವುದು ಸರಿಯಾಗಿಯೇ ಇದೆ ಅಲ್ಲವೆ.

ಸಿನಿಮಾ ರಂಗದವರ ಕೆಟ್ಟ ಬ್ಯುಸಿನೆಸ್ ಮಾಡೆಲ್ ಅನ್ನು ಟೀಕಿಸಿದ ಆಮಿರ್ ಖಾನ್
Aamir Khan
Follow us on

ಆಮಿರ್ ಖಾನ್ (Aamir Khan), ಇತರೆ ಇಬ್ಬರು ಖಾನ್​ಗಳಂತೆ ಹೀರೋಗಿರಿ ಹಿಂದೆ ಹೋದವರಲ್ಲ. ಸಂದೇಶವುಳ್ಳ, ಕಲಾತ್ಮಕತೆ ಇರುವ ನಿಜ ಅರ್ಥದ ‘ಸಿನಿಮಾ’ಗಳನ್ನೇ ಮಾಡಿಕೊಂಡು ಬಂದವರು. ಸಲ್ಮಾನ್ ಖಾನ್, ಶಾರುಖ್ ಖಾನ್ ಅದೇ ಹಳೆಯ ಹೀರೋ ವೈಭವೀಕರಣದ ಕಮರ್ಶಿಯಲ್ ಸಿನಿಮಾಗಳನ್ನು ಮಾಡುತ್ತಾ ಬಂದಿದ್ದರೆ ಆಮಿರ್ ಖಾನ್ ಮಾತ್ರ ನೆನಪುಳಿಯುವ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆಮಿರ್, ಒಳ್ಳೆಯ ನಟ, ನಿರ್ದೇಶಕ ಮಾತ್ರವಲ್ಲ ಒಳ್ಳೆಯ ವಿಚಾರವಂತ ಸಹ. ಚಿತ್ರರಂಗ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಅವರು ಇಡೀ ಚಿತ್ರರಂಗದ ಕೆಟ್ಟ ಬ್ಯುಸಿನೆಸ್ ಮಾಡೆಲ್ ಅನ್ನು ಟೀಕೆ ಮಾಡಿದ್ದಾರೆ.

ಜಾವೇದ್ ಅಖ್ತರ್ ಜೊತೆಗೆ ಇತ್ತೀಚೆಗೆ ನಡೆದ ಸಂವಾದದಲ್ಲಿ ಭಾಗಿ ಆಗಿದ್ದ ಆಮಿರ್ ಖಾನ್, ಇಡೀ ಪ್ರಪಂಚದಲ್ಲಿ ಚಿತ್ರರಂಗದವರ ಬ್ಯುಸಿನೆಸ್ ಮಾಡೆಲ್ ಅತ್ಯಂತ ಕೆಟ್ಟದ್ದು. ಯಾರಾದರೂ ಒಂದು ಪೆನ್ ಅನ್ನು ನಿರ್ಮಿಸಿದರೆ ಆ ಪೆನ್ ಮಾರಾಟ ಮಾಡುತ್ತಾರೆ. ಅವಶ್ಯಕತೆ ಇದ್ದವರು ಅದನ್ನು ತೆಗೆದುಕೊಳ್ಳುತ್ತಾರೆ, ಬೇಡ ಅನಿಸಿದವರು ತೆಗೆದುಕೊಳ್ಳುವುದಿಲ್ಲ. ಆದರೆ ಚಿತ್ರರಂಗದ ಬ್ಯುಸಿನೆಸ್ ಮಾಡೆಲ್ ಭಿನ್ನವಾದುದು. ನಾವು ಸಿನಿಮಾ ಮಾಡುತ್ತೇವೆ, ದಯವಿಟ್ಟು ನಮ್ಮ ಸಿನಿಮಾದ ಟಿಕೆಟ್ ಖರೀದಿ ಮಾಡಿ ಎಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ನೀವು ಟಿಕೆಟ್ ಖರೀದಿ ಮಾಡದೇ ಇದ್ದರೆ ಐದಾರು ವಾರಗಳ ನಂತರ ನಾವೇ ಈ ಸಿನಿಮಾ ಅನ್ನು ನಿಮ್ಮ ಮನೆಗೆ ತಲುಪಿಸುತ್ತೀವಿ ಇದೆಂಥಹಾ ಬ್ಯುಸಿನೆಸ್ ಮಾಡೆಲ್’ ಎಂದು ಟೀಕಿಸಿದ್ದಾರೆ ಆಮಿರ್ ಖಾನ್.

ಅವರ ಮಾತಿನ ಅರ್ಥ, ಚಿತ್ರಮಂದಿರದಲ್ಲಿ ಒಮ್ಮೆ ನಾವು ಸಿನಿಮಾ ಮಾರಾಟ ಮಾಡುತ್ತೀವಿ ಆ ನಂತರ ಟಿವಿ ಒಟಿಟಿಗಳಿಗೆ ಮಾರಾಟ ಮಾಡಿ ಅದೇ ಸಿನಿಮಾ ಅನ್ನು ಜನರ ಮನೆಗೆ ತಲುಪಿಸುತ್ತೀವಿ. ಸಿನಿಮಾ ಒಂದು ನಮ್ಮ ಮನೆಗೆ ಬರುತ್ತಿರುವಾಗ ನಾನೇಕೆ ಅದನ್ನು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ ಆಮಿರ್ ಖಾನ್. ಮಾತ್ರವಲ್ಲದೆ ಇದೊಂದು ಬಹಳ ಕೆಟ್ಟ ಬ್ಯುಸಿನೆಸ್ ಮಾಡೆಲ್ ಎಂದಿದ್ದಾರೆ.

ಇದನ್ನೂ ಓದಿ
ಕಂಡಕ್ಟರ್ ಆಗಿದ್ದಾಗಲೇ ರಜನಿಕಾಂತ್ ಸ್ಟೈಲಿಶ್​
ಕನ್ನಡ ಸಿನಿಮಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪುಷ್ಪ ಚಿತ್ರದ ಸಂಗೀತ ಸಂಯೋಜಕ
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ಮಾಜಿ ಪತ್ನಿಯರ ಜತೆ ಈದ್ ಆಚರಿಸಿದ ಆಮಿರ್ ಖಾನ್; ಕಿರಣ್ ರಾವ್, ರೀನಾ ದತ್ತ ಫೋಟೋ ವೈರಲ್

‘ನಾನು ಮುಂಚೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದೆ. ಏಕೆಂದರೆ ನನಗೆ ಸಿನಿಮಾ ನೋಡಬೇಕು ಎನಿಸಿತ್ತು. ಆ ಸಿನಿಮಾ ಬೇರೆ ಕಡೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದೆ. ಆದರೆ ಈಗ ನಾನು ನನ್ನ ಮನೆಯಲ್ಲಿ ಕೂತು ಸಿನಿಮಾ ನೋಡಬಲ್ಲೆ. ಈಗಲೂ ಕೆಲವು ಜನ ಚಿತ್ರಮಂದಿರಕ್ಕೆ ಬರುತ್ತಿದ್ದಾರೆಂದರೆ ಅದು ಅವರ ಆಯ್ಕೆ ಅಷ್ಟೆ, ಅದರ ಮೇಲೆ ನಾವು ಬ್ಯುಸಿನೆಸ್ ಮಾಡೆಲ್ ಕಟ್ಟಲು ಸಾಧ್ಯವಿಲ್ಲ’ ಎಂದಿದ್ದಾರೆ ಆಮಿರ್.

ಅಸಲಿಗೆ ನಟ, ನಿರ್ದೇಶಕ ಕಮಲ್ ಹಾಸನ್ ಸಹ ಇದೇ ವಿಷಯದ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದರು. ತಮ್ಮ ‘ವಿಶ್ವರೂಪಂ’ ಸಿನಿಮಾ ಅನ್ನು ಅವರು ಏಕಕಾಲದಲ್ಲಿ ಚಿತ್ರಮಂದಿರ ಹಾಗೂ ಟಿವಿ (ಆಗ ಒಟಿಟಿ ಭಾರತದಲ್ಲಿ ಇರಲಿಲ್ಲ) ಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಯತ್ನಿಸಿದ್ದರು. ಆದರೆ ಕಮಲ್​ರ ಈ ಯೋಚನೆಗೆ ಚಿತ್ರಮಂದಿರಗಳ ಮಾಲೀಕರು, ವಿತರಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Wed, 2 April 25